- ದೆಹಲಿಯಲ್ಲಿ ಬಡವರಿಗೆ ಕ್ಯಾಂಟೀನ್
- ರಾಜಕಾರಣಿಗಳಿಗೆ ಮಾದರಿಯಾದ ಯುವ ಸಂಸದ
ನವದೆಹಲಿ: ಮನೆಯಿಲ್ಲದ ಮತ್ತು ನಿರ್ಗತಿಕರಿಗೆ ಅತ್ಯಂತ ಕಡಿಮೆ ದರದಲ್ಲಿ ಊಟ ಒದಗಿಸುವ ನಿಟ್ಟಿನಲ್ಲಿ ಮಾಜಿ ಕ್ರಿಕೆಟಿಗ, ದೆಹಲಿ ಸಂಸದ ಗೌತಮ್ ಗಂಭೀರ್ ಎಲ್ಲಾ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ.
ದೆಹಲಿಯ ಗಾಂಧಿನಗರ ಮಾರುಕಟ್ಟೆಯಲ್ಲಿ ಒಂದು ರೂಪಾಯಿಗೆ ತಟ್ಟೆ ಊಟ ನೀಡುವ ‘ಜನ ರಸೋಯಿ’ ಕ್ಯಾಂಟೀನ್ ಅನ್ನು ಪೂರ್ವ ದೆಹಲಿಯ ಬಿಜೆಪಿ ಸಂಸದ ಗೌತಮ್ ಗಂಭೀರ್ ಉದ್ಘಾಟಿಸಿದರು.
ಪೂರ್ವ ದೆಹಲಿಯ ವಿವಿಧ ಭಾಗಗಳಲ್ಲಿ ಈ ರೀತಿಯ ಐದರಿಂದ ಆರು ಕ್ಯಾಂಟೀನ್ಗಳನ್ನು ಶೀಘ್ರದಲ್ಲೇ ತೆರೆಯಲಾಗುವುದು. ಹಾಗೆಯೇ ಮುಂದಿನ ದಿನಗಳಲ್ಲಿ ಮಯೂರ್ ವಿಹಾರ್ ಜಿಲ್ಲೆಯಲ್ಲಿ ‘ಜನ ರಸೋಯಿ’ ಕ್ಯಾಂಟೀನ್ಗಳನ್ನು ತೆರೆಯುವ ಚಿಂತನೆ ಇದೆ ಎಂದರು.
ಒಂದು ರೂಪಾಯಿಗೆ ನೀಡುವ ತಟ್ಟೆ ಊಟವು ಅತ್ಯಂತ ಪೌಷ್ಟಿಕ, ಗುಣಮಟ್ಟ, ಆರೋಗ್ಯಕರ ಮತ್ತು ರುಚಿಕರ ಆಹಾರವಾಗಿರಲಿದೆ. ಪ್ರತಿದಿನ 500 ಜನರಿಗೆ ಆಹಾರ ನೀಡಲಾಗುವುದು. ಎರಡನೇ ಬಾರಿ ಆಹಾರ ಸೇವನೆಗೂ ಅವಕಾಶ ಇರಲಿದೆ. ಅನ್ನ, ದಾಲ್, ತರಕಾರಿ ಸಾಂಬಾರು ಇರಲಿದೆ ಎಂದು ಗಂಭೀರ್ ಹೇಳಿದರು.
ಊಟ ಸೇವನೆ ಸಂದರ್ಭದಲ್ಲಿ ಕರೋನಾ ನಿಯಮಾವಳಿಗಳ ಅನುಕರಣೆ ಕಡ್ಡಾಯ. ಒಂದು ಬಾರಿಗೆ 50 ಮಂದಿ ಆಹಾರ ಸೇವಿಸಲು ಮಾತ್ರ ಅವಕಾಶ ಇರುತ್ತದೆ. 1 ರೂ. ಟೋಕನ್ ಮೊತ್ತವು ಅಡಿಗೆ ಮಾಡುವ ಸಿಬ್ಬಂದಿಗೆ ವೇತನದ ರೂಪದಲ್ಲಿ ಪಾವತಿಸಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದ ಅವರು, ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಇದೀಗ ದೆಹಲಿಯಲ್ಲಿ ಇದೆ. ಹೀಗಾಗಿ ಈ ಯೋಜನೆ ಮಾಡಲಾಗಿದೆ ಎಂದಿದ್ದಾರೆ.
ಅಚ್ಚರಿ ಎಂದರೆ ಗಂಭೀರ್ ಮುಂದಿನ ದೆಹಲಿ ಸಿಎಂ ಅಭ್ಯರ್ಥಿ ಎಂದೇ ಬಿಂಬಿಸಲಾಗುತ್ತಿದೆ.