ಕರಾವಳಿ ಟಾಪ್ ನ್ಯೂಸ್
ಕರಾವಳಿಯಲ್ಲಿ ಮಳೆ, ಗಾಳಿಗೆ ಇಬ್ಬರು ಬಲಿ!
– ಸಿದ್ದಾಪುರ: ಸಿಡಿಲು ಬಡಿದು ವ್ಯಕ್ತಿ ದುರ್ಮರಣ
– ಸುಬ್ರಮಣ್ಯ: ಮರ ಬಿದ್ದು ಮಹಿಳೆ ಸಾವು!
– ಮಲ್ಪೆ: ಮಲ್ಪೆ ಮತ್ತು ಸೈಂಟ್ ಮೆರೀಸ್ ದ್ವೀಪಕ್ಕೆ ಪ್ರವಾಸ ಬೋಟ್ ಇಲ್ಲ
– ಬಂಟ್ವಾಳ: ಫರಂಗಿಪೇಟೆಯಲ್ಲಿ ಲಾರಿ ಹರಿದು ಓರ್ವ ಸಾವು
– ಬಿಸಿ ರೋಡ್: ಸರಣಿ ಅಪಘಾತ, 3 ವಾಹನಗಳು ಜಖಂ
NAMMUR EXPRESS NEWS
ಕುಂದಾಪುರ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.ಮೃತಪಟ್ಟವರನ್ನು ಸುರೇಶ್ ಶೆಟ್ಟಿ ಹೇಳಲಾಗಿದೆ. ಸಂಜೆ ಮಳೆ ಬರುತ್ತಿದ್ದಾಗ ಮನೆ ಬಳಿ ನಿಂತಿದ್ದ ಸುರೇಶ್ ಶೆಟ್ಟಿ ಸಿಡಿಲು ಬಡಿದು ಶಂಕರ ನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮರ ಬಿದ್ದು ಮಹಿಳೆ ಸಾವು!
ದಕ್ಷಿಣ ಕನ್ನಡದ ಸುಬ್ರಹ್ಮಣ್ಯದ ಬಸವನ ಮೂಲೆಯಲ್ಲಿ ಮನೆ ಮೇಲೆ ಬೃಹತ್ ಮರ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮರ ಬೀಳುವ ವೇಳೆ ಮಹಿಳೆ ಮನೆಯಲ್ಲಿ ಇದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆದರೆ ಈ ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಮಲ್ಪೆ: ಮಲ್ಪೆ ಮತ್ತು ಸೈಂಟ್ ಮೆರೀಸ್ ದ್ವೀಪಕ್ಕೆ ಪ್ರವಾಸ ಬೋಟ್ ಇಲ್ಲ
ಉಡುಪಿ: ಕರಾವಳಿಯ ಮಲ್ಪೆ ಬಂದರು ವ್ಯಾಪ್ತಿಯಲ್ಲಿ ಹಾರ್ಬರ್ ಕ್ರಾಫ್ಟ್ ನಿಯಮದಡಿ ನೀಡಲಾದ ಪರವಾನಿಗೆಯಂತೆ ಮಲ್ಪೆ ಬೀಚ್, ಸೀವಾಕ್ ಪ್ರದೇಶದಲ್ಲಿ ಓಡಾಟ ನಡೆಸುವ ಎಲ್ಲಾ ತರಹದ ಪ್ರವಾಸೀ ಬೋಟ್ ಚಟುವಟಿಕೆಗಳನ್ನು ಮತ್ತು ಸೈಂಟ್ ಮೆರೀಸ್ ದ್ವೀಪಕ್ಕೆ ತೆರಳುವಂತಹ ಪ್ರವಾಸೀ ಬೋಟ್ ಚಟುವಟಿಕೆಗಳನ್ನು ಮೇ 16 ರಿಂ ಸೆಪ್ಟೆಂಬರ್ 15 ರವರೆಗೆ ಹಾರ್ಬರ್ ಕ್ರಾಫ್ಟ್ ನಿಯಮಗಳ ಅನ್ವಯ ಸ್ಥಗಿತಗೊಳಿಸಲಾಗಿದೆ ಎಂದು ಉಡುಪಿ ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
ಬಂಟ್ವಾಳ: ಲಾರಿ ಹರಿದ ಅಪಘಾತದಲ್ಲಿ ಸಹ ಸವಾರ ಕೂಡ ಸಾವು
ದಕ್ಷಿಣ ಕನ್ನಡದ ಬಂಟ್ವಾಳದ ಫರಂಗಿಪೇಟೆ ಸಮೀಪದ ಮಾರಿಪಳ್ಳ ಸುಜೀರ್ ಕ್ರಾಸ್ನಲ್ಲಿ ಮೇ 14ರಂದು ಸಂಜೆ ಲಾರಿ ಹರಿದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದರು. ಇನ್ನು ಗಂಭೀರವಾಗಿ ಗಾಯಗೊಂಡಿದ್ದ ಸಹ ಸವಾರ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತಪಟ್ಟವರನ್ನು ಕಾರ್ಕಳ ನಿವಾಸಿ ಪ್ರಸಾದ್(20) ಎಂದು ಗುರುತಿಸಲಾಗಿದೆ. ಈ ಅಪಘಾತದಲ್ಲಿ ಉತ್ತರ ಪ್ರದೇಶ ಮೂಲದ ಸವಾರ ಸೋನು(19) ಮೇ 14ರಂದು ಅಪಘಾತ ನಡೆದಿದ್ದ ಸ್ಥಳದಲ್ಲೇ ಮೃತಪಟ್ಟವರು. ಈ ಇಬ್ಬರು ಮೃತರು ಕೂಡ ಉಪ್ಪಿನಂಗಡಿಯ ನೆಲ್ಯಾಡಿಯ ಹೋಟೆಲ್ವೊಂದರಲ್ಲಿ ಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹೋಟೆಲ್ನಿಂದ ಮಂಗಳೂರು ಕಡೆಗೆ ತೆರಳುವಾಗ ಈ ಅಪಘಾತ ನಡೆದಿದೆ. ಲಾರಿ ಚಾಲಕನ ನಿರ್ಲಕ್ಷ್ಯದಿಂದ ಈ ಅಪಘಾತ ನಡೆದಿರುವುದಾಗಿ ಪ್ರತ್ಯಕ್ಷದರ್ಶಿ ನೀಡಿದ ದೂರಿನಂತೆ ಬಂಟ್ವಾಳ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸರಣಿ ಅಪಘಾತ: ಮೂರು ವಾಹನಗಳು ಜಖಂ!
ಬಿಸಿ ರೋಡ್ನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಬುಧವಾರ ಸಂಜೆ ಲಾರಿ, ಮಿನಿ ಬಸ್ ಹಾಗೂ ಕಾರಿನ ನಡುವೆ ಡಿಕ್ಕಿಯಾಗಿ ಸರಣಿ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಹಲವು ವಾಹನಗಳು ಜಖಂಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ. ಮಂಗಳೂರು ಕಡೆಯಿಂದ ಕಬ್ಬಿಣದ ಸರಕು ಹೊತ್ತು ಸಾಗುತ್ತಿದ್ದ ಲಾರಿಯಲ್ಲಿ ಕಬ್ಬಿಣದ ವಸ್ತುಗಳನ್ನುಹಿಂಭಾಗದಲ್ಲಿ ಲಾರಿಯ ಗಾತ್ರವನ್ನು ಮೀರಿ ತುಂಬಿಸಲಾಗಿತ್ತು. ಲಾರಿಯು ಬಿಸಿ ರೋಡ್ನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗ ಬರುತ್ತಿದ್ದಂತೆ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದಾನೆ. ಇದರಿಂದ ಹಿಂದಿನಿಂದ ಬರುತ್ತಿದ್ದ ಮಿನಿ ಬಸ್ ವ್ಯಾಪ್ತಿ ಮೀರಿ ತುಂಬಿದ್ದ ಕಬ್ಬಿಣದ ರಾಡ್ಗೆ ಡಿಕ್ಕಿಯಾಗಿ ಅದರ ಗಾಜು ಕೂಡ ಪುಡಿಯಾಗಿದೆ.
ಅಷ್ಟೊತ್ತಿಗೆ ಲಾರಿಯು ಏಕಾಏಕಿ ಮುಂದಕ್ಕೆ ಚಲಿಸಿ ವ್ಯಾಗನರ್ ಕಾರಿಗೆ ಡಿಕ್ಕಿ ಹೊಡೆದಿದೆ. ಈ ಸರಣಿ ಅಪಘಾತದಲ್ಲಿ ಮಿನಿ ಬಸ್, ಕಾರಿಗೆ ಹೆಚ್ಚಿನ ಹಾನಿಯಾಗಿದ್ದು, ಲಾರಿಗೆ ಸ್ವಲ್ಪ ಮಟ್ಟಿಗೆ ಹಾನಿಯಾಗಿದೆ. ಈ ಸಂದರ್ಭದಲ್ಲಿ ಬಿಸಿ ರೋಡ್ನಲ್ಲಿ ಸ್ವಲ್ಪ ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು. ಬಂಟ್ವಾಳ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದಾರೆ.