ಸೌದಿಯಲ್ಲಿ ಅಗ್ನಿ ಅವಘಡ: ಮೂಡುಬಿದಿರೆ ಮೂಲದ ಮೂವರು ಅಸ್ವಸ್ಥ; ೨ ವರ್ಷದ ಮಗು ಮೃತ್ಯು!
– ರೆಫ್ರಿಜರೇಟರ್ನಿಂದ ಅನಿಲ ಸೋರಿಕೆಯಾಗಿ ದುರಂತ
– ಅರೇಬಿಯಾದಲ್ಲಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದ ಕುಟುಂಬ
NAMMUR EXPRESS KARAVALI
ಮೂಡುಬಿದಿರೆ: ಸೌದಿ ಅರೇಬಿಯಾದ ದಮಾಮ್ನಲ್ಲಿ ನಡೆದ ಬೆಂಕಿ ದುರಂತದಲ್ಲಿ ಮೂಡುಬಿದಿರೆಯ ಮೂಲದ ಅನಿವಾಸಿ ಭಾರತೀಯ ಕುಟುಂಬವೊಂದು ವಾಸಿಸುತ್ತಿದ್ದ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿ, ಮೂರು ವರ್ಷದ ಮಗುವೊಂದು ಮೃತಪಟ್ಟು, ಮೂವರು ತೀವ್ರ ಅಸ್ವಸ್ಥರಾದ ಘಟನೆ ಮೇ.25ರ ಶನಿವಾರ ರಾತ್ರಿ ನಡೆದಿದೆ. ದಮಾಮ್ನ ಅದಮಾ ಎಂಬಲ್ಲಿಯ ಲುಲು ಮಾಲ್ ಹಿಂಭಾಗದಲ್ಲಿರುವ ಅಲ್ ಹುಸೇನಿ ಕಾಂಪೌಂಡ್ನಲ್ಲಿ ಮೂಡುಬಿದಿರೆಯ ಕೋಟೆಬಾಗಿಲು ಖೀಲಾ ಸುನ್ನಿ ಜಾಮಿಯಾ ಮಸೀದಿ ಎದುರಿನ ಮನೆಯ ಶೇಖ್ ಫಹಾದ್ ಮತ್ತು ಅವರ ಕುಟುಂಬ ಕಳೆದ ಆರು ತಿಂಗಳಿಂದ ವಾಸವಾಗಿತ್ತು.
ಶನಿವಾರ ಮಲಗಿದ್ದ ವೇಳೆ ಅಗ್ನಿ ದುರಂತ ಸಂಭವಿಸಿದ್ದು, ಫಹದ್ ಅವರ ಮಗು ಸಾಯಿಕ್ ಶೇಖ್ (2) ಹೊಗೆಯಿಂದಾಗಿ ಉಸಿರುಗಟ್ಟಿ ಮೃತಪಟ್ಟಿದೆ. ಫಹದ್, ಅವರ ಪತ್ನಿ ಸಲ್ಮಾ ಕಾಝಿ ಮತ್ತು ಪುತ್ರ ಶಾಹಿದ್ ಶೇಖ್(6) ಹೊಗೆಯಿಂದ ಉಸಿರುಗಟ್ಟಿ ತೀವ್ರವಾಗಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಫಹಾದ್ ಹಲವು ವರ್ಷಗಳ ಹಿಂದೆಯೇ ವಿದೇಶಕ್ಕೆ ತೆರಳಿದ್ದು ಸೌದಿ ಅರೇಬಿಯಾದಲ್ಲಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ . ಸಧ್ಯದ ಪ್ರಕಾರ ಮನೆಯೊಳಗಿದ್ದ ರೆಫ್ರಿಜರೇಟರ್ನಿಂದ ಶನಿವಾರ ರಾತ್ರಿ ಅನಿಲ ಸೋರಿಕೆ ಈ ಘಟನೆ ನಡೆದಿದೆ ಎನ್ನಲಾಗಿದೆ.