ಇಂದು ಲೋಕಸಭೆಗೆ ಕೊನೆ ಮತದಾನ: ಜೂ.4ಕ್ಕೆ ಫಲಿತಾಂಶ!
– ಮೋದಿ ಸೇರಿ ಘಟಾನುಘಟಿಗಳ ಸ್ಪರ್ಧೆ
– ಯಾರು ಗೆಲ್ತಾರೆ.. ಯಾರು ಸೋಲ್ತಾರೆ..?
– ಇಂದು ಸಂಜೆ ಚುನಾವಣೊತ್ತರ ಸಮೀಕ್ಷೆ
– ನಮ್ಮೂರ್ ಎಕ್ಸ್ ಪ್ರೆಸ್ ಅಲ್ಲಿ ವೀಕ್ಷಿಸಿ… ಫಲಿತಾಂಶ
NAMMUR EXPRESS NEWS
ನವದೆಹಲಿ : ಲೋಕಸಭೆ ಚುಣಾವಣೆಯ 7 ಮತ್ತು ಅಂತಿಮ ಹಂತದ ಮತದಾನ ಜೂ.1 ರ ಇಂದು ನಡೆಯಲಿದ್ದು, ಇದರೊಂದಿಗೆ 2 ತಿಂಗಳಿಂದ ನಡೆಯುತ್ತಿದ್ದ ಮತದಾನ ಪ್ರಕ್ರಿಯೆಗೆ ತೆರೆ ಬೀಳಲಿದೆ.
ಲೋಕಸಭೆ ಚುನಾವಣೆಯ ಅಂತಿಮ ಹಂತದ ಮತದಾನವು 8 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ 57 ಲೋಕಸಬಾ ಕ್ಷೇತ್ರಗಳಲ್ಲಿ 904 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. ಏಳನೇ ಹಂತದಲ್ಲಿ ಪಂಜಾಬ್ ನ ಎಲ್ಲಾ 13, ಹಿಮಾಚಲ ಪ್ರದೇಶದ 4, ಪಶ್ಚಿಮ ಬಂಗಾಳದ 9, ಬಿಹಾರದ 8, ಒಡಿಶಾದ 6, ಜಾರ್ಖಂಡ್ನ 3 ಮತ್ತು ಚಂಡೀಗಢದ 1 ಸ್ಥಾನಗಳಿಗೆ ಮತದಾನ ನಡೆಯಲಿದೆ.
ವಾರಣಾಸಿ ಸೇರಿದಂತೆ ಉತ್ತರ ಪ್ರದೇಶದ 11 ಜಿಲ್ಲೆಗಳ 13 ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ. ಗೋರಖ್ಪುರದಿಂದ ಭೋಜ್ಪುರಿ ನಟ ರವಿ ಕಿಶನ್ ಮತ್ತು ಮಿರ್ಜಾಪುರದಿಂದ ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಪುತ್ರ ನೀರಜ್ ಶೇಖರ್ ಕಣದಲ್ಲಿದ್ದಾರೆ.
ಹಿಮಾಚಲ ಪ್ರದೇಶದ 6 ಸ್ಥಾನಗಳಿಗೆ ಉಪಚುನಾವಣೆ
ಕೊನೆಯ ಹಂತದಲ್ಲಿ, ಒಡಿಶಾ ವಿಧಾನಸಭೆಯ ಉಳಿದ 42 ಸ್ಥಾನಗಳಲ್ಲದೆ, ಹಿಮಾಚಲ ವಿಧಾನಸಭೆಯ ಆರು ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅನುರಾಗ್ ಠಾಕೂರ್, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ, ನಟಿ ಕಂಗನಾ ರನೌತ್ ಮತ್ತು ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ಮಿಸಾ ಭಾರತಿ ಅವರ ಭವಿಷ್ಯ ಕೊನೆಯ ಹಂತದಲ್ಲಿ ನಿರ್ಧಾರವಾಗಲಿದೆ. ಈ ಹಂತದಲ್ಲಿ ಒಟ್ಟು 10.06 ಕೋಟಿ ಮತದಾರರು 904 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.
ಲೋಕಸಭಾ ಚುನಾವಣೆಯ ಏಳನೇ ಮತ್ತು ಅಂತಿಮ ಹಂತದಲ್ಲಿ, ಉತ್ತರ ಪ್ರದೇಶದ 13 ಕ್ಷೇತ್ರಗಳು ಸೇರಿದಂತೆ ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 57 ಸ್ಥಾನಗಳಿಗೆ ಶನಿವಾರ ಮತದಾನ ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಯವರೆಗೆ ನಡೆಯಲಿದೆ. ಇದರೊಂದಿಗೆ, ಏಪ್ರಿಲ್ 19 ರಂದು ಪ್ರಾರಂಭವಾದ 543 ಸ್ಥಾನಗಳಿಗೆ ಏಳು ಹಂತಗಳ ಮ್ಯಾರಥಾನ್ ಮತದಾನ ಪ್ರಕ್ರಿಯೆ ಕೊನೆಗೊಳ್ಳಲಿದೆ. ಜೂನ್ 4 ರಂದು ಮತ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಹೊರಬೀಳಲಿದೆ.
ಲೋಕಸಭಾ ಚುನಾವಣೆಯ ಫಲಿತಾಂಶ
ಕ್ಷಣ ಕ್ಷಣದ ಮಾಹಿತಿ
ಯಾರು ಗೆದ್ದರು? ಯಾರು ಸೋತರು?
ಸಂಪೂರ್ಣ ಫಲಿತಾಂಶ ವೀಕ್ಷಿಸಿ
nammurexpress.in
ಯೂಟ್ಯೂಬ್, ಫೇಸ್ ಬುಕ್, ವೆಬ್ ಸೈಟ್