ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೋಟ-ಚೌಟ ಮೋಡಿ
1 ಲಕ್ಷ ದಾಟಿದ ಕೋಟ ಅವರ ಮುನ್ನಡೆ; 1ಲಕ್ಷ ಸನಿಹಕ್ಕೆ ಚೌಟ ಅವರ ಮುನ್ನಡೆ
NAMMUR EXPRESS :
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಾಲಿಗೆ ಅತ್ಯಂತ ಸುರಕ್ಷಿತ ಕ್ಷೇತ್ರವಾಗಿರುವ ಕರಾವಳಿ ಭಾಗದ ದಕ್ಷಿಣ ಕನ್ನಡ ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಬಿಜೆಪಿ ಅಭ್ಯರ್ಥಿಗಳು ಭಾರೀ ಮುನ್ನಡೆ ಕಾಯ್ದುಕೊಂಡಿದ್ದಾರೆ. ದಕ್ಷಿಣ ಕನ್ನಡದಲ್ಲಿ ಬಿಜೆಪಿಯ ಬ್ರಿಜೇಶ್ ಚೌಟ ಅವರು ಎಂಟನೇ ಸುತ್ತಿ ಮುಕ್ತಾಯಗೊಂಡಾಗ, ಒಟ್ಟು 402107 ಮತಗಳನ್ನು ಪಡೆದು ಕಾಂಗ್ರೆಸ್ನ ಪದ್ಮರಾಜ್ ಅವರಿಂದ ಒಟ್ಟು 97,014 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಪದ್ಮರಾಜ್ ಅವರು ಈಗ 305093 ಮತಗಳನ್ನು ಪಡೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಸುಮಾರು 15 ಲಕ್ಷಕ್ಕೂ ಅಧಿಕ ಮತದಾರರು ಮತದಾನ ಮಾಡಿದ್ದು, ಇನ್ನು ಕೂಡ ಹಲವು ಸುತ್ತಿನ ಮತ ಎಣಿಕೆ ಕಾರ್ಯ ಬಾಕಿಯಿದೆ. ಹೀಗಿರುವಾಗ, ಯಾರು ಗೆಲುವು ಸಾಧಿಸುತ್ತಾರೆ ಎನ್ನುವುದು ಈಗಲೇ ಊಹಿಸುವುದು ಕಷ್ಟ.
ಇನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರು ಬೆಳಗ್ಗಿನಿಂದಲೇ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅವರು ಈಗಿನ ವರದಿಗಳ ಪ್ರಕಾರ ಒಟ್ಟು 269569 ಮತಗಳನ್ನು ಪಡೆದುಕೊಂಡು 101790 ಮತಗಳ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. ಈಗಾಗಲೇ ಒಂದು ಲಕ್ಷ ಲೀಡ್ ಪಡೆದುಕೊಂಡಿರುವ ಕೋಟ ಅವರಿಗೆ ಗೆಲುವು ಸುಲಭವಾಗುತ್ತಿರುವ ಟ್ರೆಂಡಿಂಗ್ನ್ನು ಸದ್ಯ ಕಾಣಬಹುದು. ಇನ್ನು ಎರಡು ಕ್ಷೇತ್ರಗಳಲ್ಲಿಯೂ ನೋಟಾ ಮತಗಳ ಸಂಖ್ಯೆ ಕೂಡ ಜಾಸ್ತಿಯಾಗಿದೆ. ದಕ್ಷಿಣ ಕನ್ನಡದಲ್ಲಿ 12734 ಮತಗಳು ನೋಟಾ ಪಾಲಾಗಿದೆ. ಇದು ಅತ್ಯಂತ ಗಂಭೀರ ವಿಚಾರ ಕೂಡ ಹೌದು. ಇನ್ನು ಉಡುಪಿಯಲ್ಲಿ 4287 ಮತಗಳು ನೋಟಾಕ್ಕೆ ಬಿದ್ದಿದೆ.