ಪ್ರಜ್ಞೆ ತಪ್ಪುವ ವಿಷ ಇಟ್ಟು 30 ಮಂಗಗಳ ಹೊಡೆದು ಕೊಂದರು!
– ಎನ್.ಆರ್ ಪುರ ತಾಲೂಕಿನ ದ್ಯಾವಣ ಗ್ರಾಮದಲ್ಲಿ ನಡೆದ ಘಟನೆ
– ಬೆಳೆ ನಾಶ ಮಾಡಿದ್ದಕ್ಕೆ ಹತ್ಯೆ?: ಇದೆಂತಾ ವಿಕೃತಿ…?
NAMMUR EXPRESS NEWS
ನರಸಿಂಹರಾಜಪುರ: ಪ್ರಜ್ಞೆ ತಪ್ಪುವ ಔಷಧವಿಟ್ಟು 30 ಮಂಗಗಳ ಮಾರಣಹೋಮ ನಡೆಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್ಆರ್ ಪುರ ತಾಲೂಕಿನ ದ್ಯಾವಣ ಗ್ರಾಮದಲ್ಲಿ ನಡೆದಿದೆ. ಹತ್ಯೆಯಾದ ಮಂಗಗಳ ಪೈಕಿ 16 ಗಂಡು, 14 ಹೆಣ್ಣು, 4 ಮರಿ ಮಂಗಗಳು ಸೇರಿವೆ. ಮೊದಲಿಗೆ ತೋಟದ ಬಾಳೆಹಣ್ಣಿಗೆ ಪ್ರಜ್ಞೆ ತಪ್ಪುವ ಔಷಧ ಬೆರೆಸಿರುವ ಪಾಪಿಗಳು. ಬಾಳೆಹಣ್ಣು ತಿಂದ ಬಳಿಕ ಪ್ರಜ್ಞೆ ತಪ್ಪಿ ಬಿದ್ದ ಮಂಗಗಳ ತಲೆಗೆ ಬಲವಾಗಿ ಹೊಡೆದು ಕೊಂದಿರುವ ನರರಾಕ್ಷಸರು ನಂತರ ರಸ್ತೆಗೆ ಎಸೆದು ಹೋಗಿದ್ದಾರೆ.
30 ಮಂಗಗಳ ತಲೆಯಲ್ಲೂ ಒಂದೇ ರೀತಿ ಗಾಯ, ರಕ್ತ ಸುರಿದು ಮೃತಪಟ್ಟಿವೆ. ಮೂವತ್ತು ಮಂಗಗಳಿಗೆ ತಲೆಗೆ ಹೊಡೆದು ಕೊಂದಿದ್ದು ಕೊಲೆ ಕಾರಣ ತಿಳಿದುಬಂದಿಲ್ಲ.
ತೋಟದ ಬೆಳೆ ನಾಶ ಮಾಡುತ್ತವೆಂದು ಕೊಂದಿರಬಹುದಾ? ಅಥವಾ ಬೇರೆ ಏನಾದರೂ ಕಾರಣ ಇದ್ದಿರಬಹುದಾ? ಒಟ್ಟಿನಲ್ಲಿ ಮೂಕ ಪ್ರಾಣಿಗಳನ್ನ ರೀತಿ ಮನುಷ್ಯತ್ವಹೀನರಂತೆ ಹೊಡೆದುಕೊಂದಿರುವುದು ಪ್ರಾಣಿಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಬಳಿಕ ಸ್ಥಳಕ್ಕೆ ಡಿಎಫ್ಓ, ಆರ್ಎಫ್ಓ, ಪಿಎಸ್ಐ, ಪಶುಸಂಗೋಪನೆ, ಪಶುವೈದ್ಯರು, ಪಂಚಾಯ್ತಿ, ಆಶಾ ಕಾರ್ಯಕರ್ತೆಯರು ಸೇರಿ ವಿವಿಧ ಇಲಾಖೆಯ ಎಲ್ಲ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎನ್ಆರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.