ಮನೆಗೆ ನುಗ್ಗಿ ಒಂಟಿ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿ ಅರೆಸ್ಟ್!
– ಕಲ್ಲಡ್ಕದಲ್ಲಿ ನಡೆದ ಘಟನೆ: ಹಾಸನ ಮೂಲದ ಆರೋಪಿ ಬಂಧನ
– ರಿಕ್ಷಾದಲ್ಲಿ ಬಾಡಿಗೆ ಹೋಗಿದ್ದಾಗ ಮಾತುಕತೆ: ಏನಿದು ಘಟನೆ
NAMMUR EXPRESS NEWS
ಕಲ್ಲಡ್ಕ: ಮನೆಯಲ್ಲಿದ್ದ ಒಂಟಿಯಾಗಿದ್ದ ವೇಳೆ ಮನೆಗೆ ನುಗ್ಗಿ ಮಹಿಳೆಗೆ ವ್ಯಕ್ತಿಯೋರ್ವ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ಕೊಲೆ ಬೆದರಿಕೆ ಹಾಕಿದ ಘಟನೆ ಜೂನ್ 11ರಂದು ಕಲ್ಲಡ್ಕದಲ್ಲಿ ನಡೆದಿದೆ. ಘಟನೆ ಸಂಬಂಧಿಸಿದಂತೆ ಹಾಸನ ಮೂಲದ ಬೇಲೂರು ನಿವಾಸಿ ರಿಕ್ಷಾ ಚಾಲಕ ಪ್ರಮೋದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಕಲ್ಲಡ್ಕ ಸಮೀಪದ ಬೊಂಡಾಲ ಎಂಬಲ್ಲಿ ಈ ಘಟನೆ ನಡೆದಿದ್ದು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನಲೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ರಿಕ್ಷಾದಲ್ಲೇ ಹೋಗಿದ್ದಾಗ ನಂಬರ್ ಪಡೆದು ಕೀಟಲೆ!
ಮಹಿಳೆಯ ತವರು ಮನೆ ಹಾಸನ ತಾಲೂಕಿನ ಬೇಲೂರು ಆಗಿದ್ದು, ಈಕೆಯನ್ನು ಕಲ್ಲಡ್ಕಕ್ಕೆ ಮದುವೆ ಮಾಡಿ ಕೊಡಲಾಗಿತ್ತು. ಸಂತ್ರಸ್ತ ಮಹಿಳೆಗೆ ಈತ ಊರಿನವನಾದ ಕಾರಣ ಪರಿಚಯಸ್ಥನಾದ ಹಿನ್ನಲೆ ಒಂದೆರಡು ಬಾರಿ ತವರು ಮನೆಗೆ ಹೋಗುವ ವೇಳೆ ಈತನ ರಿಕ್ಷಾದಲ್ಲಿ ಬಾಡಿಗೆ ಮಾಡಿ ಹೋಗಿದ್ದರು. ಇದೇ ವೇಳೆ ಮೊಬೈಲ್ ಸಂಖ್ಯೆಯನ್ನು ಆತ ಪಡೆದುಕೊಂಡಿದ್ದ ಎನ್ನಲಾಗಿದೆ. ಆದಾದ ಬಳಿಕ ಮೊಬೈಲ್ ಮೂಲಕ ಈತನ ಸಂಪರ್ಕ ಅತಿಯಾಗಿ ಕಳೆದ ಕೆಲ ಸಮಯದ ಹಿಂದೆ ಗಂಡನ ಮನೆ ಕಲ್ಲಡ್ಕಕ್ಕೆ ಬಂದಿದ್ದ. ಮನೆಗೆ ಬಂದ ಈತ ಮಹಿಳೆಗೆ ಕೀಟಲೆ ನಡೆಸಿ, ಮನೆಯೊಳಗಿದ್ದ ಅನೇಕ ಬೆಲೆ ಬಾಳುವ ವಸ್ತುಗಳನ್ನು ದ್ವಂಸ ಮಾಡಿದ್ದ. ಈ ಸಂದರ್ಭದಲ್ಲಿ ಆತನಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗಿತ್ತು ಎಂದು ಹೇಳಲಾಗಿದೆ.
ಇದಾದ ಕೆಲ ಸಮಯದ ನಂತರ ಹಾಸನದಿಂದ ಬಂಟ್ವಾಳಕ್ಕೆ ಬಂದಿಳಿದ ಆರೋಪಿ ಪ್ರಮೋದ್ ಮತ್ತೆ ಗಂಡನಿಲ್ಲದ ಸಮಯ ನೋಡಿಕೊಂಡು ಮಹಿಳೆಯ ಮನೆಗೆ ನುಗ್ಗಿದ್ದಾನೆ. ಮಹಿಳೆಯನ್ನು ತಬ್ಬಿ ಹಿಡಿದು ಲೈಂಗಿಕವಾಗಿ ಉಪಯೋಗಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಮಹಿಳೆ ಜೋರಾಗಿ ಬೊಬ್ಬೆ ಹೊಡೆದಾಗ ಮನೆಯ ಸಮೀಪದ ದೇವಾಲಯದೊಳಗೆ ಇದ್ದ ಗಂಡ ಧಾವಿಸಿ ಬಂದು ರಕ್ಷಣೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಗಂಡ ಮಗುವಿನ ಜೊತೆ ಸೇರಿಸಿ ಕೊಲ್ಲುವ ಬೆದರಿಕೆ ಒಡ್ಡಿದ್ದಾನೆ ಎಂದು ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಆಸ್ಟ್ರೇಲಿಯದಲ್ಲಿ ಸಮುದ್ರದಲ್ಲಿ ಮುಳುಗಿ ಕಾಸರಗೋಡು ಮೂಲದ ಮಹಿಳೆ ಸೇರಿದಂತೆ ಇಬ್ಬರು ಸಾವು*
ಕಾಸರಗೋಡು : ಆಸ್ಟ್ರೇಲಿಯದಲ್ಲಿ ಸಮುದ್ರದಲ್ಲಿ ಮುಳುಗಿ ಕಾಸರಗೋಡು ಮೂಲದ ಮಹಿಳೆ ಸೇರಿದಂತೆ ಇಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ. ಘಟನೆಯಲ್ಲಿ ಮತ್ತೋರ್ವ ಯುವತಿ ಪಾರಾಗಿದ್ದಾಳೆ.
ಕಾಸರಗೋಡು ತಾಯಲಂಗಾಡಿಯ ಡಾ. ಸಿರಾಜುದ್ದೀನ್ ರವರ ಪತ್ನಿ ಮರ್ವ ಹಾಸಿಮಾ ( ೩೫) ಮತ್ತು ಕೋಜಿಕ್ಕೋಡ್ ಕೇಳತ್ತರದ ಹ್ಯಾರಿಶ್ ಎಂಬವರ ಪತ್ನಿ ನೀರ್ಷಾ ಹಾರಿಸ್ ಯಾನೆ ಶಾನಿ (೩೮) ಮೃತಪಟ್ಟವರು. ಮರ್ವ ಕಣ್ಣೂರು ಕಾರ್ಪೋರೇಷನ್ ಕೌನ್ಸಿಲರ್ ಫಿರೋಝಾ ಹಾಶಿಮ್ ಅವರ ಪುತ್ರಿಯಾಗಿದ್ದು ನೀರ್ಷಾ ಸಹೋದರಿ ರೋಷ್ನಾ ಅಪಾಯದಿಂದ ಪಾರಾಗಿದ್ದಾರೆ. ಸಿಡ್ನಿ ಸದರ್ ಲ್ಯಾ೦ಡ್ ಕರ್ನೆಲ್ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಆಯತಪ್ಪಿ ಸಮುದ್ರಕ್ಕೆ ಬಿದ್ದಿದ್ದು , ನಿರ್ಷಾರ ಸಹೋದರಿ ಕೂಡಾ ಅವಘಡಕ್ಕೆ ಸಿಲುಕಿದ್ದು , ಈಕೆಯನ್ನು ರಕ್ಷಣಾ ತಂಡ ಕೂಡಲೇ ಮೇಲಕ್ಕೆತ್ತಿ ರಕ್ಷಿಸಿದೆ. ನಿರ್ಷಾ ಹಾಗೂ ಹಾಸಿಮಾಳನ್ನು ಹೆಲಿಕಾಪ್ಟರ್ ಸಹಾಯದಿಂದ ಸಮುದ್ರದಲ್ಲಿ ಶೋಧಾ ನಡೆಸಿ ಮೇಲಕ್ಕೆತ್ತಿ ಆಸ್ಪತ್ರೆಗೆ ತಲಪಿಸಿದರೂ ಆಗಲೇ ಮೃತಪಟ್ಟಿದ್ದರು. ಸಮುದ್ರ ಬಂಡೆಕಲ್ಲುಗಳ ಮೂಲಕ ನಡೆದುಕೊಂಡು ಹೋಗುತ್ತಿದ್ದಾಗ ಅಲೆಗಳ ರಭಸಕ್ಕೆ ಸಮುದ್ರ ಪಾಲಾಗಿದ್ದರು ಎನ್ನಲಾಗಿದೆ. ಈ ಪ್ರದೇಶವನ್ನು ಸ್ಥಳೀಯರು ಬ್ಯ್ಲಾಕ್ ಸ್ಪಟ್ ಎಂದು ಗುರುತಿಸಿದ್ದು ಈ ಹಿಂದೆಯೂ ಇಂತಹ ಅವಘಡ ನಡೆದಿತ್ತು.
ಕಾಸರಗೋಡು ತಾಯಲಂಗಾಡಿ ಡಾ . ಸಿರಾಜುದ್ದೀನ್ ಕುಟುಂಬವು ಹತ್ತು ವರ್ಷಗಳಿಂದ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದು , ರಜೆಯ ಹಿನ್ನಲೆಯಲ್ಲಿ ಪ್ರವಾಸಕ್ಕೆ ತೆರಳಿದ್ದರು.