ಕರಾವಳಿ ಬ್ರೇಕಿಂಗ್
ಮತ್ತೆ ಬೆಚ್ಚಿಬಿದ್ದ ಸುಳ್ಯ: ತಲೆಗೆ ಕಲ್ಲು ಎತ್ತಿ ಹಾಕಿ ಯುವಕನ ಕೊಲೆ!
– ಕಳೆದ ವಾರವಷ್ಟೇ ಮಹಿಳೆ ಕೊಲೆ: ಈಗ ಮತ್ತೊಂದು ಹತ್ಯೆ
– ಅಜ್ಜಾವರದ ಬಳಿಯ ಶಾಲೆಯ ಜಗಲಿಯಲ್ಲಿ ಶವ ಪತ್ತೆ
NAMMUR EXPRESS NEWS
ಸುಳ್ಯ: ಕಳೆದ ವಾರವಷ್ಟೇ ಮಹಿಳೆಯ ಕೊಲೆಯಿಂದ ಬೆಚ್ಚಿ ಬಿದ್ದಿದ್ದ ಸುಳ್ಳದಲ್ಲಿ ಇದೀಗ ಮತ್ತೊಮ್ಮೆ ಕೊಲೆ ವಿಚಾರಕ್ಕೆ ಸುದ್ದಿಯಾಗಿದೆ. ಯುವಕನೋರ್ವನ ಮೃತದೇಹ ಕೊಲೆಗೈದ ಸ್ಥಿತಿಯಲ್ಲಿ ಸುಳ್ಯದ ಅಜ್ಜಾವರದ ಬಳಿಯ ಶಾಲೆಯ ಜಗಲಿಯಲ್ಲಿ ಜೂ. 17ರ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ.
ಅಜ್ಜಾವರ ಗ್ರಾಮದ ಕಾಂತಮಂಗಲ ಸರಕಾರಿ ಶಾಲಾ ವರಾಂಡದಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆಗೈದಿರುವುದು ಕಂಡುಬಂದಿದೆ.
ಮೃತಪಟ್ಟ ಯುವಕ ಸುಮಾರು 25-30 ವರ್ಷದವನಿರಬಹುದು ಎಂದು ಅಂದಾಜಿಸಲಾಗಿದೆ. ಯುವಕನ ಗುರುತು ಪತ್ತೆಯಾಗಿಲ್ಲ
ಸುಳ್ಯ ವೃತ್ತ ನಿರೀಕ್ಷಕ ಸತ್ಯನಾರಾಯಣ, ಸೇರಿದಂತೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಕಳೆದ ಭಾನುವಾರವಷ್ಟೇ ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯ ಕೊಲೆ ನಡೆದಿತ್ತು. ಇದು ಕೂಡ ತಲೆಗೆ ಕಲ್ಲು ಎತ್ತಿ ಹಾಕಿ ಕೃತ್ಯ ಎಸಗಲಾಗಿದ್ದು, ಆರೋಪಿಯ ಬಂಧನವಾಗಿತ್ತು