ದತ್ತಪೀಠ ಅರ್ಚಕರಿಗೆ ವೇತನ ನೀಡಲು ಪಟ್ಟು!
– ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕ
– ಹಿಂದೂ ಪರಿಷತ್ ಹಾಗೂ ಬಜರಂಗದಳದಿಂದ ಹೋರಾಟಕ್ಕೆ ಸಜ್ಜು
– ಸಂಭಾವನೆ ನೀಡದಿದ್ದರೆ ಜೋಳಿಗೆ ಅಭಿಯಾನ: ಮಹೇಂದ್ರ ಹೇಳಿಕೆ
NAMMUR EXPRESS NEWS
ಬಾಳೆಹೊನ್ನೂರು: ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕ ಮಾಡಿ 15 ತಿಂಗಳು ಕಳೆದಿದ್ದರೂ ಇದುವರೆಗೆ ದತ್ತಪೀಠದ ಅರ್ಚಕರಿಗೆ ವೇತನ ನೀಡಿಲ್ಲ. ಇನ್ನು 17 ದಿನದೊಳಗೆ ಅರ್ಚಕರಿಗೆ ಸಂಭಾವನೆ ನೀಡದಿದ್ದರೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದಿಂದ ಜೋಳಿಗೆ ಆರಂಭಿಸಲಾಗುವುದು ಎಂದು ವಿಹಿಂಪ ಹಾಸನ ವಿಭಾಗದ ಸಹ ಕಾರ್ಯದರ್ಶಿ ಅಭಿಯಾನ ಆರ್.ಡಿ.ಮಹೇಂದ್ರ ಹೇಳಿದ್ದಾರೆ.
ಕಳೆದ ಒಂದೂವರೆ ತಿಂಗಳ ಹಿಂದೆ ಮಾಧ್ಯಮಗಳ ಮೂಲಕ ಜಿಲ್ಲಾಡಳಿತ, ಸರ್ಕಾರ ಹಾಗೂ ವ್ಯವಸ್ಥಾಪನಾ ಸಮಿತಿಗೆ ತಕ್ಷಣದಲ್ಲಿ ಅಥವಾ ಲೋಕಸಭಾ ಚುನಾವಣೆ ನೀತಿ ಸಂಹಿತೆ ಮುಗಿದ ಕೂಡಲೇ ಅರ್ಚಕರಿಗೆ ಸಂಭಾವನೆ ನೀಡಬೇಕು ಎಂದು ಆಗ್ರಹಿಸಲಾಗಿತ್ತು. ಸರ್ಕಾರ, ಜಿಲ್ಲಾಡಳಿತ, ಮುಜರಾಯಿ ಇಲಾಖೆ ಹಾಗೂ ದತ್ತಪೀಠದ ವ್ಯವಸ್ತಪನಾ ಸಮಿತಿ ಇಂದಿಗೂ ಕೂಡ ಆರ್ಚಕರಿಗೆ ಸಂಭಾವನೆ ನೀಡಿಲ್ಲ. ಅರ್ಚಕರಿಗೆ ಕೂಡಲೇ ವೇತನ ನೀಡದಿದ್ದಲ್ಲಿ ಸಂಘಟನೆಯಿಂದ ರಾಜ್ಯಾದ್ಯಂತ ಪ್ರತೀ ಹಿಂದೂಗಳ ಮನೆಗೆ ತೆರಳಿ ಅರ್ಚಕರ ವೇತಕ್ಕೆ ಜೋಳಿಗೆ ಅಭಿಯಾನ ಪ್ರಾರಂಭಿಸಲಾಗುವುದು. ಅರ್ಚಕರಿಗೆ ವೇತನ ನೀಡುವ ಬಗ್ಗೆ ಒತ್ತಾಯಿಸಿ ಒಂದೂವರೆ ತಿಂಗಳೇ ಕಳೆದಿದೆ. ಈವರೆಗೆ ಈ ಬಗ್ಗೆ ಯಾವ ಕ್ರಮ ಕೈಗೊಂಡಿದ್ದಾರೆ ಎಂಬುದನ್ನು ಬಹಿರಂಗಪಡಿಸಿಲ್ಲ, ಸಂಘಟನೆ ಆಗ್ರಹದ ಪ್ರಕಾರ ಕೇವಲ ಹದಿನೇಳು ದಿನಗಳು ಬಾಕಿ ಉಳಿದಿದ್ದು, 17 ದಿನಗಳ ಒಳಗೆ ಆರ್ಚಕರ ವೇತನ ನಿಗದಿ ಮಾಡಿ, ನೀಡದಿದ್ದಲ್ಲಿ ವಿಹಿಂಪ ಪ್ರಾಂತ ಪ್ರಮುಖರ ಜೊತೆಗೆ ಚರ್ಚಿಸಿ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಎಲ್ಲಾ ಗ್ರಾಮಗಳಲ್ಲಿ ಹಿಂದೂ ಮನೆಗೆ ತೆರಳಿ ದತ್ತ ಭಕ್ತರು, ಸಂಘಟನೆ ಕಾರ್ಯಕರ್ತರು ಜೋಳಿಗೆ ಹಿಡಿದು ಹಣ ಸಂಗ್ರಹ ಅಭಿಯಾನ ನಡೆಸಲಾಗುವುದು ಎಂದು ಹೇಳಿದ್ದಾರೆ.
ಕೋರ್ಟ್ ಆದೇಶದಂತೆ ಕೇವಲ ದತ್ತಪೀಠಕ್ಕೆ ಹಿಂದೂ ಆರ್ಚಕರ ನೇಮಕ ಮಾಡಿ ದತ್ತಭಕ್ತರ ಕಣ್ಮರೆಸುವ ತಂತ್ರ ಮಾಡಿದರೆ ಸಾಲದು. ದತ್ತಪೀಠದಲ್ಲಿ ಮುಜಾವರ್ ನೇಮಕವನ್ನೂ ಮಾಡಲಾಗಿದೆ. ಆದರೆ ಮುಜಾವರ್ಗೆಗೆ ಇದೂವರೆಗೆ ಒಂದೂ ತಿಂಗಳು ವೇತನ ಸರ್ಕಾರ ನಿಲ್ಲಿಸಿಲ್ಲ. ಪ್ರತೀ ತಿಂಗಳು ಸಮಯಕ್ಕೆ ಸರಿಯಾಗಿ ವೇತನ ನೀಡಲಾಗುತ್ತಿದೆ. ದತ್ತಪೀಠದಲ್ಲಿ ಇರುವ ಇತರೆ ಎಲ್ಲಾ ಕಾರ್ಮಿಕರಿಗೆ ವೇತನ ಕಾಲಕಾಲಕ್ಕೆ ನೀಡಲಾಗುತ್ತಿದೆ. ಕೇವಲ ಹಿಂದೂ ಆರ್ಚಕರು ಎಂಬ ಉದ್ದೇಶದಿಂದ ಮಾತ್ರ ವೇತನ ನೀಡದೆ ಸತಾಯಿಸಲಾಗುತ್ತಿದೆ ಎಂದು ಆರೋಪಿಸಿದರು. ದತ್ತಪೀಠದ ಅಭಿವೃದ್ಧಿಗೆ ರಚನೆಯಾದ ವ್ಯವಸ್ಥಾಪನ ಸಮಿತಿ ಇದ್ದರೂ ಪ್ರಯೋಜನ ವಿಲ್ಲ, ದತ್ತಾತ್ರೇಯರು ಹಾಗೂ ಸಂಘಟನೆ ಹಿರಿಯರ ಶ್ರಮದ ಫಲವಾಗಿ ಇಂದು ದತ್ತಪೀಠದಲ್ಲಿ ದತ್ತಾತ್ರೇಯ ಪಾದುಕೆಗೆ ತ್ರಿಕಾಲ ಪೂಜೆಯಾಗುತ್ತಿದೆ. ಇಲ್ಲಿ ವಿಧಿವತ್ತಾಗಿ ಪೂಜೆ ನಡೆಸುತ್ತಿರುವ ಆರ್ಚಕರಿಗೆ ನೀಡದಿರುವುದು ಖಂಡನೀಯ ಎಂದರು.
ದತ್ತಪೀಠಕ್ಕೆ ಅರ್ಚಕರ ನೇಮಕವಾಗಿದ್ದರೂ ಸಹ ಅವರಿಗೆ ದತ್ತಪೀಠದಲ್ಲಿ ಇರಲು ವಸತಿ ಅಥವಾ ಮೂಲಭೂತ ಸೌಕರ್ಯ ಕಲ್ಪಿಸಿಲ್ಲ. ಅರ್ಚಕರು ಪ್ರತಿನಿತ್ಯ ಚಿಕ್ಕಮಗಳೂರಿನಿಂದ ಪೀಠಕ್ಕೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ. ಪೀಠಕ್ಕೆ ಅರ್ಚಕರ ನೇಮಕವಾದ ನಂತರ ದತ್ತಾತ್ರೇಯರ ಪಾದುಕೆ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಗಣನೀಯವಾಗಿ ಏರಿದೆ. ದತ್ತಪೀಠದ ಆದಾಯವೂ ಬಾರೀ ಪ್ರಮಾಣವೂ ಹೆಚ್ಚಿದೆ. ಆದರೆ ಜಿಲ್ಲಾಡಳಿತ ಅರ್ಚಕರಿಗೆ ವೇತನ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ. ಸರ್ಕಾರದ ಹಿಂದೂ ಸಮಾಜದ ವಿರೋಧಿ ನೀತಿ ಬಗ್ಗೆಯೂ ರಾಜ್ಯಾದ್ಯಂತ ಹೋರಾಟ ಮಾಡುವ ಯೋಚನೆಯೂ ಸಂಘಟನೆ ಮುಂದಿದೆ ಎಂದು ಹೇಳಿದರು.
ಧರ್ಮ ತಾರತಮ್ಯ ಏಕೆ..?
ಮಸೀದಿ ನೋಡಿಕೊಳ್ಳುವ ಮಾಲ್ವಿಯ ಸಂಬಳ ಹೆಚ್ಚಳ ಮಾಡುವ ಸಿದ್ದರಾಮಯ್ಯರವರ ಕಾಂಗ್ರೆಸ್ ಸರ್ಕಾರ, ಹಿಂದೂ ದೇವಾಲಯವನ್ನು ನೋಡಿಕೊಳ್ಳುವ ಅರ್ಚಕರ ಸಂಬಳ ಮಾತ್ರ ಹೆಚ್ಚಳ ಮಾಡುವುದಿರಲಿ, ಮಾಸಿಕ ವೇತನವೆ 15 ತಿಂಗಳಿಂದ ನೀಡಿರುವುದಿಲ್ಲ.
ಅಲ್ಪಸಂಖ್ಯಾತರಿಗೆ 10,000 ಕೋಟಿ ರೂಪಾಯಿ ಘೋಷಣೆ ಮಾಡುವ ಕಾಂಗ್ರೆಸ್ ಸರ್ಕಾರ, ದತ್ತಪೀಠದ ಅರ್ಚಕರಿಗೆ ಕನಿಷ್ಠ 10,000 ರೂಪಾಯಿ ಕೂಡ 15 ತಿಂಗಳಿಂದ ಕೊಟ್ಟಿಲ್ಲ.15 ದಿನದೊಳಗೆ ಸಂಬಳ ನೀಡದಿದ್ದರೆ ಜೋಳಿಗೆ ಅಭಿಯಾನ ಪ್ರಾರಂಭ ಮಾಡಲಾಗುವುದು ಎಂದು ಮಹೇಂದ್ರ ಎಚ್ಚರಿಕೆ ನೀಡಿದ್ದಾರೆ.