-ಜನವರಿ 19ರಂದು ಮುಂದಿನ ಮಾತುಕತೆ!
-ವಿವಿಧ ಗಡಿ ಪ್ರದೇಶಗಳಲ್ಲಿ ಪ್ರತಿಭಟನೆ
ನವದೆಹಲಿ: ಕೃಷಿ ಕಾನೂನುಗಳ ಕುರಿತು ನಿರಂತರವಾಗಿ ನಡೆಯುತ್ತಿರುವ ಪ್ರತಿಭಟನೆಯ 9ನೇ ಸುತ್ತಿನ ಮಾತುಕತೆ ವಿಫಲವಾಗಿದ್ದು, ಮುಂದಿನ ಸುತ್ತಿನ ಮಾತುಕತೆ ಜನವರಿ 19 ರಂದು ನಡೆಯಲಿದೆ.
ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದ ಸಾವಿರಾರು ರೈತರು ಕಳೆದ ವರ್ಷ ನವೆಂಬರ್ 26ರಿಂದ ದೆಹಲಿಯ ವಿವಿಧ ಗಡಿ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಅಂದ್ಹಾಗೆ, ಕೇಂದ್ರ ಸರ್ಕಾರದ ಜತೆ ಮಾತುಕತೆ ನಡೆಸುವ ಸೂಚನೆಯ ಹಿನ್ನೆಲೆಯಲ್ಲಿ, ಪ್ರತಿಭಟನಾ ನಿರತ ರೈತ ಮುಖಂಡರು ಗುರುವಾರ 9ನೇ ಸುತ್ತಿನ ಮಾತುಕತೆಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದರು.
ಭಾರತೀಯ ಕಿಸಾನ್ ಯೂನಿಯನ್ (ಏಕ್ತಾ ಉಗ್ರನ್) ಜೋಗಿಂದರ್ ಸಿಂಗ್ ಉಗ್ರನ್ ಪಿಟಿಐಗೆ ಈ ವಿಷಯ ತಿಳಿಸಿದ್ದು, ‘ನಾವು ನಾಳೆ ಸರ್ಕಾರದ ಜೊತೆ ಮಾತುಕತೆ ನಡೆಸಲಿದ್ದೇವೆ. ಶುಕ್ರವಾರದ ಸಭೆಯಲ್ಲಿ ನಮಗೆ ಹೆಚ್ಚಿನ ಭರವಸೆ ಇಲ್ಲ, ಏಕೆಂದರೆ ಸರ್ಕಾರವು ಎಸ್ ಸಿ ನೇಮಕ ಮಾಡಿದ ಸಮಿತಿಯನ್ನು ಉದಾಸೀನಾ ಮಾಡುತ್ತದೆ. ನಮ್ಮ ಸಮಸ್ಯೆಗಳನ್ನು ಬಗೆಹರಿಸುವ ಸದುದ್ದೇಶ ಸರ್ಕಾರಕ್ಕೆ ಇಲ್ಲ’ ಎಂದು ಹೇಳಿದ್ದರು.