ಶೃಂಗೇರಿ ಜೆಸಿಬಿಎಂ ಕಾಲೇಜಲ್ಲಿ ಎ. ಐ ವಿಚಾರ ಸಂಕಿರಣ
– ವಿದ್ಯಾರ್ಥಿಗಳಿಗೆ ಜ್ಞಾನ ನೀಡಿದ ವಿಚಾರ ವಿನಿಮಯ
NAMMUR EXPRESS NEWS
ಶೃಂಗೇರಿ: ಶ್ರೀ ಜೆಸಿಬಿಎಂ ಕಾಲೇಜಿನಲ್ಲಿ ” ಕೃತಕ ಬುದ್ಧಿ ಮತ್ತು ಯಂತ್ರ ಕಲಿಕೆ ಹಾಗೂ ದತ್ತಾಂಶ ಸಂಗ್ರಹಣೆ” ಎಂಬ ವಿಷಯದ ರಾಜ್ಯ ಮಟ್ಟದ ವಿಚಾರಣ ಸಂಕೀರ್ಣವನ್ನು ಕಾಲೇಜು ಐ ಕ್ಯೂ ಎ ಸಿ ಯ ಸಹಯೋಗದೊಂದಿಗೆ ಗಣಕಶಾಸ್ತ್ರ ವಿಭಾಗ ಹಾಗೂ ಬಿಸಿಎ ವಿಭಾಗಗಳಿಂದ ಆಯೋಜಿಸಲಾಗಿದ್ದು ವಿದ್ಯಾರ್ಥಿಗಳಿಗೆ ಜ್ಞಾನ ನೀಡಿತು.
ಕಾರ್ಯಕ್ರಮವನ್ನು ಕುವೆಂಪು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ.ಎಂ ರವಿ ಕುಮಾರ್ ಉದ್ಘಾಟಿಸಿದರು.
ಪ್ರಸ್ತುತ ಸನ್ನಿವೇಶದಲ್ಲಿ ವಿಶ್ವದಾದ್ಯಂತ ಎಲ್ಲಾ ಕ್ಷೇತ್ರಗಳಲ್ಲೂ ಕೂಡ ಕೃತಕ ಬುದ್ಧಿಮತ್ತೆಯನ್ನು ಉಪಯೋಗಿಸುತ್ತಿದ್ದು, ಇನ್ನಷ್ಟು ಹೆಚ್ಚು ವಿಚಾರ ಸಂಕೀರ್ಣಗಳನ್ನು ಆಯೊಜಿಸಿ ವಿದ್ಯಾರ್ಥಿಗಳ ಭೌದ್ಧಿಕ ಮಟ್ಟವನ್ನು ಹೆಚ್ಚಿಸಬೇಕೆಂದು ಆಶಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಬಿ.ಆರ್ ಪ್ರಕಾಶ್, ಡಾ.ಶೋಯಬ್ ಅಹಮ್ಮದ್ ಹಾಗೂ ಟಿ.ಜೆ ಹಾಲೇಶ್ ವಿಚಾರ ಸಂಕೀರ್ಣದ ವಿಷಯವಾಗಿ ವಿಸ್ತೃತ ಉಪನ್ಯಾಸ ನೀಡಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ ಸ್ವಾಮಿ ವಹಿಸಿದ್ದರು ಹಾಗೂ ನ್ಯಾಕ್ ಸಂಸ್ಥಾಪಕರಾದ ಪ್ರೊ.ಎನ್ ಹೆಚ್ ಲಕ್ಷ್ಮೀನಾರಾಯಣ್,ಐಕ್ಯುಎಸಿ ಸಂಚಾಲಕರಾದ ಪ್ರೊ.ನಾಗಭೂಷಣ್ ಬಿ.ಆರ್,ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಡಾ.ಕೆ.ಪಿ ಪ್ರಕಾಶ್,ಗಣಕ ಶಾಸ್ತ್ರದ ಮುಖ್ಯಸ್ಥರಾದ ಶ್ರೀ ಅಶೋಕ್ ಎಸ್.ಎಸ್.ಮತ್ತು ಬಿ.ಸಿ.ಎ ಮುಖ್ಯಸ್ಥರಾದ ಶ್ರೀಮತಿ ದಶಮಿ ಆವರುಗಳು ಉಪಸ್ಥಿತರಿದ್ದರು.