ಮಲೆನಾಡಲ್ಲಿ ಕಡಿಮೆಯಾದ ಮಳೆ..!
– ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ನಿಧಾನ
– ಆಗುಂಬೆಯಲ್ಲಿ ನೂರು ಮಿ.ಮೀ.ಗಿಂತಲೂ ಹೆಚ್ಚು ವರ್ಷಧಾರೆ
– ಮಳೆ ತಗ್ಗಿದರೂ ಅನಾಹುತ ನಿಂತಿಲ್ಲ: ವಿದ್ಯುತ್, ನೆಟ್ವರ್ಕ್ ಇಲ್ಲ
NAMMUR EXPRESS NEWS
ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಕೊಂಚ ಕಡಿಮೆ ಆಗಿದೆ. ಜತೆಗೆ ಬಿಟ್ಟು ಬಿಟ್ಟು ಮಳೆ ಬರುತ್ತಿದೆ. ಆದರೆ ಮಳೆಯ ಅನಾಹುತ ಕಡಿಮೆ ಆಗಿಲ್ಲ.
ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡ ಭಾಗದಲ್ಲಿ ಮಳೆ ಕಡಿಮೆ ಆಗಿದೆ. ಮರಗಳು ವಿದ್ಯುತ್ ಕಂಬಗಳು ಬೀಳುತ್ತಿವೆ. ಇದರಿಂದ ವಿದ್ಯುತ್ ಮತ್ತು ನೆಟ್ವರ್ಕ್ ಇಲ್ಲದಾಗಿದೆ.
ತೀರ್ಥಹಳ್ಳಿಯಲ್ಲಿ ಮಳೆ ಕಡಿಮೆ
ತೀರ್ಥಹಳ್ಳಿ ತಾಲೂಕಿನಲ್ಲಿ ಮಳೆ ಕಡಿಮೆಯಾಗಿದೆ. ಕಳೆದ 24 ಗಂಟೆಯಲ್ಲಿ 36.10 ಮಿ.ಮೀ ಮಳೆಯಾಗಿದೆ. ತಾಲೂಕಿನ ಆಗುಂಬೆಯಲ್ಲಿ ಭಾರಿ ಮಳೆಯಾಗಿದೆ. ಇನ್ನು ತೀರ್ಥಹಳ್ಳಿಯ ತುಂಗಾ ನದಿಯಲ್ಲಿ ನೀರಿನ ಮಟ್ಟ ಕಮ್ಮಿಯಾಗಿದ್ದು, ಇದೀಗ ಮಲೆನಾಡು ಬಿಸಿಲಿನ ಮುಖ ನೋಡುತ್ತಿದೆ.
ಎಲ್ಲೆಲ್ಲಿ ಎಷ್ಟಾಗಿದೆ?
ತೀರ್ಥಹಳ್ಳಿ ತಾಲೂಕಿನ ಆಗುಂಬೆ – 124.2 ಮಿ.ಮೀ, ಆರಗ – 52.2 ಮಿ.ಮೀ, ದೇವಂಗಿ 32 2 ಮಿ.ಮೀ, 32.2 ಮಿ. ಮೀ, ಕೋಣಂದೂರು – 26.8 ಮಿ.ಮೀ, ಮಾಳೂರು – 55.4 ಮಿ. ಮೀ ಮೇಗರವಳ್ಳಿ – 50.2 ಮಿ.ಮೀ, ತೀರ್ಥಹಳ್ಳಿ- 24.6 ಮಿ.ಮೀ, ಕನ್ನಂಗಿ – 50.6 ಮಿ ಮೀ, ಮೃಗವಧೆ 34.6 ಮಿ. ಮೀ, ಮಂಡಗದ್ದೆ-31.4 ಮಿ.ಮೀ, ಹುಂಚದಕಟ್ಟೆ – 80.4 ಮಿ.ಮೀ ಮಳೆಯಾಗಿದೆ.