ತುಂಗಾ ನದಿ ತೀರಕ್ಕೆ ಹೋಗಬೇಡಿ ಹುಷಾರ್..!
– ತೀರ್ಥಹಳ್ಳಿಯಲ್ಲಿ ಅಪಾಯಕಾರಿಯಾದ ನದಿ
– ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತಾರ ಎಚ್ಚರಿಕೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ತುಂಗಾ ನದಿ ರಾಮ ಮಂಟಪ ಮುಳುಗಿದ್ದು, ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ತುಂಗಾ ನದಿ ಸೇರಿದಂತೆ ಯಾವುದೇ ನದಿ ತೀರದಲ್ಲಿ ನದಿ ನೋಡುವುದು, ಸೆಲ್ಫಿ ತೆಗೆಯುವುದು ಅಪಾಯಕಾರಿ. ತೀರ್ಥಹಳ್ಳಿ ಜನ ಈ ಬಗ್ಗೆ ಜಾಗೃತಿ ವಹಿಸಬೇಕು ಎಂದು ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತಾರ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ತೀರ್ಥಹಳ್ಳಿ ಪಟ್ಟಣದಲ್ಲಿ ಈಗಾಗಲೇ ಬ್ಯಾರಿಕೇಡ್ ಹಾಕಿ ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ. ಜನತೆ ನದಿ ಹಾಗೂ ಹಳ್ಳ, ಕೊಳ್ಳಗಳ ತೀರಗಳ ಬಳಿ ಜನ ಹೋಗಬಾರದು ಎಂದು ಗಜಾನನ ವಾಮನ ಸುತಾರ ಮನವಿ ಮಾಡಿದ್ದಾರೆ.
ತೀರ್ಥಹಳ್ಳಿಯ ಎಲ್ಲಾ ನದಿಗಳು ಫುಲ್
ತೀರ್ಥಹಳ್ಳಿ ತಾಲೂಕಿನ ತುಂಗಾ ನದಿ ಸೇರಿದಂತೆ ಮಾಲತಿ, ಕುಶಾವತಿ, ಶರಾವತಿ ಸೇರಿ ಎಲ್ಲಾ ನದಿಗಳು ಹಳ್ಳಗಳು ಈ ಸಲ ಅತೀ ಹೆಚ್ಚು ಮಳೆ ಸುರಿದಿದೆ.