ಮಾದಕ ವಸ್ತು, ಅತಿಯಾದ ಮೊಬೈಲ್ ಬಳಕೆ ಹುಷಾರ್
– ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಯಲ್ಲಿ ಮಕ್ಕಳಿಗೆ ಮಾಹಿತಿ
– ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತಾರ ಶಾಲೆಗೆ ಭೇಟಿ
NAMMUR EXPRESS NEWS
ತೀರ್ಥಹಳ್ಳಿ: ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೆಕೇರಿ ಶಾಲೆಗೆ ಭೇಟಿ ನೀಡಿದ ತೀರ್ಥಹಳ್ಳಿ ಡಿ ವೈ ಎಸ್ ಪಿ ಗಜಾನನ ವಾಮನ ಸುತಾರ ಅವರು ಮಕ್ಕಳಿಗೆ, ಮಾದಕ ವಸ್ತುಗಳು ಕೆಟ್ಟ ಪರಿಣಾಮ, ಮೊಬೈಲ್ ಬಳಕೆ ಸಾಧಕ ಬಾಧಕಗಳು, ಫೇಸ್ ಬುಕ್, ಇನ್ಸ್ಟಾಗ್ರಾಮ್, ಸ್ನ್ಯಾಪ್ ಚಾಟ್ ಆ್ಯಪ್ ಅಂತಹ ಸಾಮಾಜಿಕ ಜಾಲ ತಾಣಗಳ ಬಳಕೆಯ ಅಪಾಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಮಕ್ಕಳ ಸುರಕ್ಷತೆಯ ಬಗ್ಗೆ, ಹಾಗೂ ಪೋಕ್ಸೋ ಕಾಯ್ದೆಯ ಮತ್ತು ಕಾನೂನು ಮಾಹಿತಿಯನ್ನು ಹಂಚಿಕೊಂಡು, ಮಕ್ಕಳು ಕಲಿಕೆಯಲ್ಲಿ ಹೇಗೆ ತೊಡಗಿಕೊಳ್ಳಬೇಕು ಎಂದು ಮಾರ್ಗದರ್ಶನ ಮಾಡಿದರು.
ಕೊನೆಯಲ್ಲಿ ಶಾಲೆಗೆ ಅನೇಕ ಬಾರಿ ಸಹಕಾರ ನೀಡಿದ ಮಾನ್ಯರನ್ನು ಮಕ್ಕಳು, ಶಿಕ್ಷಕರು, ಮುಖ್ಯ ಶಿಕ್ಷಕರು ಗೌರವಿಸಿದರು. ಈ ಸಂದರ್ಭದಲ್ಲಿ, ಆಗುಂಬೆ ಆರಕ್ಷಕ ಉಪ ನಿರೀಕ್ಷಕ ರಂಗನಾಥ್ ಅಂತರಗಟ್ಟಿ, ಮುಖ್ಯ ಶಿಕ್ಷಕ ಮಂಜು ಬಾಬು ಹೆಚ್ ಪಿ, ಶಿಕ್ಷಕರಾದ ಸುಬ್ರಹ್ಮಣ್ಯ ಎಸ್, ಆನಂದನ್ ಎ, ವೀರೇಶ್ ಟಿ, ಬೀರಪ್ಪ ಇಟಗಿ, ಶೌಕತ್ ಆಲಿ, ಶ್ರೀಮತಿ ಸೌಮ್ಯ ಹಾಗೂ ಮಕ್ಕಳು ಹಾಜರಿದ್ದರು..