ಭೀಮನಕಟ್ಟೆಯಲ್ಲಿ ಭೀಮನ ಅಮಾವಾಸ್ಯೆ!
– ನೂರಾರು ದಂಪತಿಗಳಿಂದ ಭೀಮೇಶ್ವರನಿಗೆ ಪೂಜೆ
ಆರಗ ಯೂನಿಯನ್ ಬ್ಯಾಂಕ್ ಸಿಬ್ಬಂದಿ ಮಹೇಂದ್ರ ನಿವೃತ್ತಿ
– ಸೇವೆಯಿಂದ ನಿವೃತ್ತರಾದ ಸಂದರ್ಭದಲ್ಲಿ ಬೀಳ್ಕೊಡುಗೆ
ಕಳಪೆ ಮಾಂಸ: ತಪ್ಪಿಸ್ಥರ ಮೇಲೆ ಕ್ರಮಕ್ಕೆ ತೀರ್ಥಹಳ್ಳಿಯಲ್ಲಿ ಹೋರಾಟ
– ಹಿಂದೂ ಸಂಘಟನೆಗಳ ಪ್ರಮುಖರಿಂದ ತಹಸೀಲ್ದಾರ್ ಮನವಿ
NAMMUR EXPRESS NEWS
ತೀರ್ಥಹಳ್ಳಿ: ಆರಗದ ಯೂನಿಯನ್ ಬ್ಯಾಂಕ್ ನಲ್ಲಿ ಸುಮಾರು 34 ವರ್ಷಗಳ ಸುಧೀರ್ಘ ಕಾಲ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಮಹೇಂದ್ರ ಅವರು ಜುಲೈ 31ರಂದು ಸೇವೆಯಿಂದ ನಿವೃತ್ತರಾದರು.
ಆರಗ ಯೂನಿಯನ್ ಬ್ಯಾಂಕ್ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಯೂನಿಯನ್ ಬ್ಯಾಂಕ್ ಸಿಬ್ಬಂದಿಗಳು,ಆರಗ ಗ್ರಾಮಸ್ಥರುಗಳು ನಿವೃತ್ತರಾದ ಮಹೇಂದ್ರರವರಿಗೆ ದಂಪತಿ ಸಮೇತ ಶಾಲು ಹೊದಿಸಿ ಫಲ ಪುಷ್ಪಗಳನ್ನು ನೀಡಿ ಗೌರವಿಸಿ ಶುಭ ಹಾರೈಸಿದರು.
ಬ್ಯಾಂಕ್ ಸಿಬ್ಬಂದಿ ಮತ್ತು ಗ್ರಾಮಸ್ಥರ ಗೌರವ ಸ್ವೀಕರಿಸಿ ಮಾತನಾಡಿದ ಮಹೇಂದ್ರ ಪ್ರಾಮಾಣಿಕವಾಗಿ ಕೆಲಸ ಮಾಡಿ ನಿವೃತ್ತಿ ಹೊಂದುತ್ತಿರುವ ತೃಪ್ತಿ ನನಗಿದ್ದು, ಬ್ಯಾಂಕ್ ಸೇವೆಯನ್ನು ಗ್ರಾಮದ ಪ್ರತಿಯೊಬ್ಬರಿಗೂ ತಲುಪಲು ನಿಸ್ವಾರ್ಥವಾಗಿ ಕರ್ತವ್ಯ ನಿರ್ವಹಿಸಿದ್ದೇನೆ ಎಂದರು.
ಈ ಸಮಾರಂಭದಲ್ಲಿ ಗ್ರಾಹಕರಾದ ಎಚ್ಎಸ್ ವೆಂಕಟೇಶ್ ಶಾಸ್ತ್ರಿ, ಎಸ್ ಎನ್ ಮಂಜುನಾಥ್ ,ಬ್ಯಾಂಕಿನ ಮ್ಯಾನೇಜರ್ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.
ಕಳಪೆ ಮಾಂಸ: ತಪ್ಪಿಸ್ಥರ ಮೇಲೆ ಕ್ರಮಕ್ಕೆ ತೀರ್ಥಹಳ್ಳಿಯಲ್ಲಿ ಹೋರಾಟ
ಬೆಂಗಳೂರಿಗೆ ಅಕ್ರಮ ಮತ್ತ ಕಳಪೆ ಮಾಂಸವನ್ನು ಸರಬುರಾಜು ಮಾಡುವವರ ಮೇಲೆ ಕ್ರಮ ಜರುಗಿಸಬೇಕು ಮತ್ತು ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿಯವರ ಮೇಲೆ ದೌರ್ಜನ್ಯ ಮಾಡಿದ ಎಸಿಪಿ ಚಂದನ್ ಕುಮಾರರವರನ್ನು ಅಮಾನತು ಮಾಡಿ ಮತ್ತು ರಾಮನಗರದ ಹೆಸರನ್ನು ’ದಕ್ಷಿಣ ಬೆಂಗಳೂರು’ ಎಂದು ಮರುನಾಮಕರಣ ಮಾಡಬಾರದ ಎಂದು ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ತೀರ್ಥಹಳ್ಳಿಯ ತಹಶಿಲ್ದಾರರಿಗೆ ಮನವಿ ಮಾಡಲಾಯಿತು.
ಸಾಗರದ ತಹಶಿಲ್ದಾರರಿಗೆ ಮತ್ತು ತೀರ್ಥಹಳ್ಳಿಯಲ್ಲಿ ತೀರ್ಥಹಳ್ಳಿ ತಾಲ್ಲೂಕು ತಹಶೀಲ್ದಾರ್ ರವರಾದ ಜಕ್ಕಣ್ಣ ಗೌಡರ್ ಇವರ ಮುಖಾಂತರ ರಾಜ್ಯಪಾಲರಿಗೆ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ವತಿಯಿಂದ ಮನವಿ ನೀಡಲಾಯಿತು. ಅಕ್ರಮ ಮಾಂಸ ಮಾರಾಟಮಾಡುವವರನ್ನು ಬಂಧನ ಮಾಡಬೇಕು ಮತ್ತು ಈ ಪ್ರಕರಣವನ್ನು ಉನ್ನತ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹ ಮಾಡಲಾಯಿತು. ರಾಜ್ಯ ಸರಕಾರವು ರಾಮನಗರ ಜಿಲ್ಲೆಯನ್ನು ’ಬೆಂಗಳೂರು ದಕ್ಷಿಣ’ ಎಂದು ಮರುನಾಮಕರಣ ಮಾಡಲು ಹೋರಟಿರುವ ನಿರ್ಧಾರವು ಅತ್ಯಂತ ಖಂಡನೀಯವಾಗಿದೆ. ಇದಕ್ಕೆ ರಾಜ್ಯಪಾಲರು ಅಂಕಿತ ಹಾಕಬಾರದು ಎಂದು ಆಗ್ರಹ ಮಾಡಲಾಯಿತು.
ತೀರ್ಥಹಳ್ಳಿಯಲ್ಲಿ ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಸದಸ್ಯರಾದ ಮೋಹನ್ ಕೆರೋಡಿ, ನಿವೃತ್ತ ದೈಹಿಕ ಶಿಕ್ಷಕರಾದ ಕಿರಣ್ ಕುಮಾರ್, ಹಿಂದೂ ಜಾಗರಣ ವೇದಿಕೆಯ ಸಂಯೋಜಕರಾದ ರಾಘವೇಂದ್ರ, ಹಿಂದೂ ಜನ ಜಾಗೃತಿ ಸಮಿತಿಯ ಹರೀಶ್ ಗೌಡ ಹಾಗೂ ಧರ್ಮಪ್ರೇಮಿಗಳಾದ ಅವಿನಾಶ್ ಭಟ್, ನಾರಾಯಣಗೌಡ, ಕಾಂತೇಶ ಪ್ರಭು, ರಾಜೇಂದ್ರ, ಇನ್ನಿತರರು ಉಪಸ್ಥಿತರಿದ್ದರು.
ತೀರ್ಥಹಳ್ಳಿ: ಭೀಮನಕಟ್ಟೆಯಲ್ಲಿ ಭೀಮನ ಅಮಾವಾಸ್ಯೆ
ತೀರ್ಥಹಳ್ಳಿ ತಾಲೂಕು ಭೀಮನಕಟ್ಟೆಯಲ್ಲಿ ಭೀಮನ ಅಮಾವಾಸ್ಯೆ ಆಚರಣೆ ಮಾಡಲಾಯಿತು. ನೂರಾರು ದಂಪತಿಗಳು ಹಾಗೂ ಭಕ್ತರು ಪೂಜೆ ಮಾಡಿದರು. ಮಳೆ ಕೊಂಚ ಬಿಟ್ಟಿದ್ದರಿಂದ ಜನ ಹೆಚ್ಚು ಸೇರಿದ್ದರು.