ತೀರ್ಥಹಳ್ಳಿಯಲ್ಲಿ ಸಂಭ್ರಮದ ನಾಗರ ಪಂಚಮಿ!
– ರಾಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ
– ಅನ್ನದಾನ ಸಮಿತಿಯಿಂದ 600 ಮಂದಿಗೆ ಊಟ
– ನಂಟೂರು, ಆರಗ, ರಾಮನ ಸರ, ಹಡ್ಸೆ ಸೇರಿ ಹಲವೆಡೆ ಪೂಜೆ
NAMMUR EXPRESS NEWS
ತೀರ್ಥಹಳ್ಳಿ: ನಾಗರ ಪಂಚಮಿಯಂದು ತೀರ್ಥಹಳ್ಳಿ ತಾಲೂಕಿನ ಪಟ್ಟಣದ ರಾಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಅಲ್ಲಿನ ನಾಗರ ಕಲ್ಲಿಗೆ ಪೂಜೆ ನಡೆಯಿತು. ಸಾವಿರಾರು ಭಕ್ತರು ಭಾಗವಹಿಸಿದ್ದರು.
ಎಲ್ಲಾ ಕಡೆ ನಾಗರ ಕಲ್ಲಿಗೆ ಪೂಜೆ ಪುನಸ್ಕಾರಗಳು ನಡೆದವು. ಇನ್ನು ತೀರ್ಥಹಳ್ಳಿ ತಾಲೂಕಿನ ಪ್ರಸಿದ್ಧ ದೇವಾಲಯಗಳಾದ ನಂಟೂರು, ಆರಗ ಅಗ್ರಹಾರ, ಹಡ್ಸೆ, ರಾಮನ ಸರ ಸೇರಿ ಬಹುತೇಕ ನಾಗ ದೇವಾಲಯಗಳಲ್ಲಿ ಪೂಜೆ ನಡೆಯಿತು.
600ಕ್ಕೂ ಹೆಚ್ಚು ಮಂದಿಗೆ ಅನ್ನದಾನ ಸೇವ
ಶ್ರೀ ರಾಮೇಶ್ವರ ದೇವರ ನಿತ್ಯ ಅನ್ನ ಸಂತರ್ಪಣಾ ಮತ್ತು ಧಾರ್ಮಿಕ ಸೇವಾ ಸಮಿತಿಯು ನಾಗರ ಪಂಚಮಿಯಂದು ದಾನಿಗಳ ಸಹಾಯದಿಂದ 600ಕ್ಕೂ ಹೆಚ್ಚು ಮಂದಿಗೆ ಅನ್ನದಾನ ಮಾಡಿತು. ಕಷ್ಟದ ನಡುವೆ ಸೇವೆ ಮಾಡುತ್ತಿರುವ ಸೇವಾಕರ್ತರಿಗೆ ಇನ್ನಷ್ಟು ದಾನಿಗಳ ಸಹಕಾರ ಅಗತ್ಯವಿದೆ.