ತರುಣ್- ಸೋನಲ್ ಮದುವೆಯಲ್ಲಿ ಮನಗೆದ್ದ ಸನ್ನಿಧಿ ಕೆಟರರ್..!
– ತೀರ್ಥಹಳ್ಳಿ ಮೂಲದವರ ಅಡುಗೆಯ ಸ್ವಾಧಕ್ಕೆ ಅತಿಥಿಗಳ ಮೆಚ್ಚುಗೆ
– ಸುಭಾಷ್ ಜೆ ಎಸ್, ಸಂತೋಷ್ ಶೆಟ್ಟಿ ಮಾಲೀಕತ್ವದ ಸಂಸ್ಥೆ
– 450 ಅಡುಗೆ ಸಿಬ್ಬಂದಿಯಿಂದ ಸಸ್ಯಾಹಾರಿ ಭೋಜನ ತಯಾರಿ
– ರಾಜ್ಯ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಸಂಸ್ಥೆಗೆ ಅಭಿನಂದನೆಗಳು
NAMMUR EXPRESS NEWS
ಬೆಂಗಳೂರು: ಖ್ಯಾತ ನಿರ್ದೇಶಕ ತರುಣ್ ಸುಧೀರ್
ಹಾಗೂ ಸೋನಲ್ ಮದುವೆ ಬೆಂಗಳೂರಿನಲ್ಲಿ ಭಾನುವಾರ ಅದ್ದೂರಿಯಾಗಿ ನಡೆದಿದ್ದು ಈ ಮದುವೆಯಲ್ಲಿ ಮಲೆನಾಡಿನ ತೀರ್ಥಹಳ್ಳಿ ಮೂಲದ ಸನ್ನಿಧಿ ಕೆಟರರ್ ಸಂಸ್ಥೆ ತನ್ನ ಅಡುಗೆ ಸೇವೆ ನೀಡಿತು.
ತರುಣ್ ಸೋನಲ್ ಮದುವೆಗೆ ಶುದ್ಧ ಸಸ್ಯಾಹಾರಿ ಅಡುಗೆಯನ್ನು
ಬೆಂಗಳೂರಿನ ಸನ್ನಿದಿ ಕೇಟರರ್ಸ್ ಸಂಸ್ಥೆ ಮಾಡಿದ್ದು ಎಲ್ಲಾ ಸಿನಿಮಾ ನಟ ನಟಿಯರು ಸೇರಿ ಅತಿಥಿಗಳ ಮೆಚ್ಚುಗೆಗೆ ಪಾತ್ರವಾಯಿತು.
ತೀರ್ಥಹಳ್ಳಿ ತಾಲೂಕು ಗುಡ್ಡೆಕೊಪ್ಪ ಸುಭಾಷ್ ಜೆ ಎಸ್ ಹಾಗೂ ಸಂತೋಷ್ ಶೆಟ್ಟಿ ಮಾಲೀಕತ್ವದ ಈ ಸಂಸ್ಥೆ ಅಚ್ಚುಕಟ್ಟಿನ ಆಯೋಜನೆ ಮಾಡಿತ್ತು.
ವಿಶೇಷ ಸೇವೆ ಜತೆಗೆ ಭೂರಿ ಭೋಜನ!
ಮದುವೆಗೆ ಸುಮಾರು 450 ಬಾಣಸಿಗರಿಂದ ಅಡುಗೆ ತಯಾರಿಸಿದ್ದರು. ಅದರಲ್ಲಿ 85 ಜನ ಮಹಿಳಾ ಸ್ವಾಗತಕಾರರು, ಜೊತೆಗೆ 50 ಜನ ಹೋಟೆಲ್ ಸೇವಾ ಸಿಬ್ಬಂದಿ ಹುಡುಗರು ಇದ್ದರು. 4 ಕಡೆ ವಿಶಾಲವಾದ ಅಡುಗೆ ಮನೆಯಲ್ಲಿ ಅಡುಗೆ ಸಿದ್ದಗೊಂಡಿದ್ದು ಜೊತೆಗೆ 5 ಸಾಮಾನ್ಯ ಕೌಂಟರ್, ವಿ.ಐ.ಪಿ 3 ಕೌಂಟರ್ ಇದ್ದವು. ಹಿಂದಿನ ದಿನದ ರಿಸೆಪ್ಟನ್ ಗೆ 180 ತರಹದ ಖಾದ್ಯಗಳು ಹಾಗೂ ಮುಹೂರ್ತಕ್ಕೆ 60 ತರಹದ ಖಾದ್ಯಗಳಿದ್ದವು, ರಾತ್ರಿ ಸುಮಾರು 6 ಸಾವಿರದಿಂದ 7 ಸಾವಿರ ಜನಕ್ಕೆ ಅಡುಗೆ ಮಾಡಲಾಗಿದ್ದು, ಮದುವೆ ದಿನ ಮದ್ಯಾಹ್ನ ಸುಮಾರು 3 ಸಾವಿರ ಜನರಿಗೆ ಅಡುಗೆ ಮಾಡಲಾಗಿತ್ತು. ಅತ್ಯುತ್ತಮ ಶುಚಿ ರುಚಿ ವಿಭಿನ್ನತೆ ಅಡುಗೆ ಸೇವೆ ನೀಡಿದ ಸಂಸ್ಥೆ ಮಾಲೀಕರಾದ ಸುಭಾಷ್ ಜೆ ಎಸ್ ಹಾಗೂ ಸಂತೋಷ್ ಶೆಟ್ಟಿ ಅವರಿಗೆ ತರುಣ್ ಸುಧೀರ್ ಹಾಗೂ ಸೋನಲ್ ವೇದಿಕೆ ಮೇಲೆ ಕರೆದು ಗೌರವಿಸಿದರು.