ಧರ್ಮಸ್ಥಳ: ಡಿ.ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 57ನೇ ವರ್ಧಂತ್ಯುತ್ಸವ
– ಛದ್ಮವೇಷ ಸ್ಫರ್ಧೆ: ಹೆಗ್ಗಡೆಯವರಿಗೆ ಭಕ್ತರ ಶುಭಾಶಯಗಳು
NAMMUR EXPRESS NEWS
ಧರ್ಮಸ್ಥಳ: ಧರ್ಮಸ್ಥಳದಲ್ಲಿ ಅ. 24ರಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 57ನೇ ವರ್ಧಂತ್ಯುತ್ಸವ ಪ್ರಯುಕ್ತ ನಡೆದ ಛದ್ಮವೇಷ ಸ್ಫರ್ಧೆ ನಡೆಯಿತು.
ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ, ಕೆ.ಪಿ.ಸಿ.ಸಿ. ಜಿಲ್ಲಾ ಘಟಕದ ಅಧ್ಯಕ್ಷ ಕೆ. ಹರೀಶ್ ಕುಮಾರ್, ದ.ಕ. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಡಿ. ಸಂಪತ್ಸಾಮ್ರಾಜ್ಯ, ಶಿರ್ತಾಡಿ, ದ.ಕ. ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ಕೆ. ರಾಜವರ್ಮ ಬಲ್ಲಾಳ್, ವಿಜಯಾ ಬ್ಯಾಂಕ್ ನಿವೃತ್ತ ಪ್ರಬಂಧಕ ಎಮ್. ಜಿನರಾಜ ಶೆಟ್ಟಿ, ಮಂಗಳೂರು, ಪಿ. ಜಯರಾಜ ಕಂಬಳಿ, ಪೆರಿಂಜೆಗುತ್ತು, ಪಡ್ಯಾರಬೆಟ್ಟ ಕೊಡಮಣಿತ್ತಾಯ ದೈವಸ್ಥಾನದ ಮೊಕ್ತೆಸರ ಜೀವಂಧರ ಕುಮಾರ್, ಕೆ. ಪ್ರದೀಪ್ಕುಮಾರ್ ಕಲ್ಕೂರ, ಹರಿಕೃಷ್ಣ ಪುನರೂರು, ಮೊದಲಾದ ಗಣ್ಯರು ಹೆಗ್ಗಡೆಯವರಿಗೆ ಗೌರವಾರ್ಪಣೆ ಮಾಡಿ ಅಭಿನಂದಿಸಿದರು.
ಛದ್ಮವೇಷ ಸ್ಫರ್ಧೆಯಲ್ಲಿ ವಿಜೇತರು ಯಾರ್ಯಾರು?
ಧರ್ಮಸ್ಥಳದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 57ನೇ ವರ್ಧಂತ್ಯುತ್ಸವ ಪ್ರಯುಕ್ತ ನಡೆದ ಛದ್ಮವೇಷ ಸ್ಫರ್ಧೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ತೃಷಿಕಾ ಡಿ. ಬಳಗ ಪ್ರಥಮ, ಅವಿಷ್ಖಾರ್ ಶೆಟ್ಟಿ : ದ್ವಿತೀಯ, ದೃವಿ ದೊಂಡೋಲೆ ತೃತೀಯ, ವಿರೂಷ್ ಗೌಡ ಪ್ರೋತ್ಸಾಹಕ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಶಕ್ತಿಪ್ರಿಯ ತಂಡ ಪ್ರಥಮ, ಮಹಿಳಾ ವಿಭಾಗದಲ್ಲಿ ವಿಮಲ ಮತ್ತು ಬಳಗ ಪ್ರಥಮ, ಪುಷ್ಪಾ ಮತ್ತು ತಂಡ ದ್ವಿತೀಯ, ವನಿತಾ ಮತ್ತು ತಂಡ ತೃತೀಯ, ಸೀನಿಯರ್ ವಿಭಾಗದಲ್ಲಿ ದೇವಸ್ಥಾನ ಕೌಂಟರ್ ಬಳಗ ಪ್ರಥಮ, ಜನಾರ್ದನ ಮತ್ತು ಬಳಗ ದ್ವಿತೀಯ, ಸೂಪರ್ ಸೀನಿಯರ್ ವಿಭಾಗದಲ್ಲಿ ಸಾಮರ್ ಸೆಟ್ ತಂಡ ಹಾಗೂ ರಂಗಶಿವಕಲಾ ಬಳಗ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.