ಉಡುಪಿ: ಬೆಂಗಳೂರು ಇಬ್ಬರು ಯುವಕರು ಕುಂದಾಪುರ ಬೀಚ್ ನಲ್ಲಿ ನೀರುಪಾಲು!
– ಮುಲ್ಕಿ: ಸಂಬಂಧಿತ ಕಾಯಿಲೆ ಉಲ್ಬಣಿಸಿ 7ನೇ ತರಗತಿಯ ವಿದ್ಯಾರ್ಥಿ ನಿಧನ!
– ಕಾಪು: ತ್ಯಾಜ್ಯ ಪೇಪರ್ ಸಾಗಾಟ ವಾಹನ ಪಲ್ಟಿ
NAMMUR EXPRESS NEWS
ಉಡುಪಿ: ಸಮುದ್ರದಲ್ಲಿ ಈಜಲು ತೆರಳಿದ್ದ ಇಬ್ಬರು ಸಮುದ್ರಪಾಲಾಗಿರುವ ಘಟನೆ ಅ.26 ಬೆಳಿಗ್ಗೆ ಬೀಜಾಡಿ ಬೀಚ್ ನಲ್ಲಿ ಸಂಭವಿಸಿದೆ. ಘಟನೆಯಲ್ಲಿ ಓರ್ವನ ಮೃತದೇಹ ಪತ್ತೆಯಾಗಿದ್ದು ಇನ್ನೋರ್ವನಿಗಾಗಿ ಹುಡುಕಾಟ ನಡೆಯುತ್ತಿದೆ. ಘಟನೆಯಲ್ಲಿ ನೀರುಪಾಲಾಗಿದ್ದ ಕುಂದಾಪುರ ಮೂಲದ ಅಜಯ್ ಮೃತಪಟ್ಟಿದ್ದು, ಬೆಂಗಳೂರು ದಾಸರಹಳ್ಳಿ ನಿವಾಸಿ ಸಂತೋಷ್ ನೀರುಪಾಲಾದ ಮತ್ತೊಬ್ಬ ಯುವಕ. ಈತನಿಗಾಗಿ ಹುಡುಕಾಟ ಮುಂದುವರೆದಿದೆ. ಜೊತೆಗೆ ಬಂದಿದ್ದ ಮೋಕ್ಷಿತ್ ಮತ್ತು ಶ್ರೀಯಾನ್ ಅಪಾಯದಿಂದ ಪಾರಾಗಿದ್ದಾರೆ. ಮದುವೆ ಕಾರ್ಯಕ್ರಮಕ್ಕೆಂದು ಇಬ್ಬರು ಬೆಂಗಳೂರಿನ ದಾಸರಹಳ್ಳಿಯಿಂದ ಕುಂದಾಪುರಕ್ಕೆ ಬಂದಿದ್ದು ಬೀಜಾಡಿ ಬೀಚ್ ಪಕ್ಕದ ರೆಸಾರ್ಟ್ ವೊಂದರಲ್ಲಿ ಉಳಿದುಕೊಂಡಿದ್ದರು ಎನ್ನಲಾಗಿದೆ. ಅದರಂತೆ ಅ. 26ರಂದು ಬೆಳಿಗ್ಗೆ ತನ್ನ ಇನ್ನಿಬ್ಬರು ಸ್ಥಳೀಯ ಸ್ನೇಹಿತರ ಜೊತೆ ಸಮುದ್ರದಲ್ಲಿ ಈಜಲು ತೆರಳಿದ ವೇಳೆ ಸಮುದ್ರಪಾಲಾಗಿದ್ದಾರೆ. ಈ ವೇಳೆ ಇಬ್ಬರು ಯುವಕರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.ಕುಂದಾಪುರ ಪೊಲೀಸ್ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮುಲ್ಕಿ: ಸಂಬಂಧಿತ ಕಾಯಿಲೆ ಉಲ್ಬಣಿಸಿ 7ನೇ ತರಗತಿಯ ವಿದ್ಯಾರ್ಥಿ ನಿಧನ!
ಮುಲ್ಕಿ: ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ತಾಳಿಪಾಡಿ ಗ್ರಾಮದ ಅಂಗಾರಗುಡ್ಡೆ ನಿವಾಸಿ ಲಕ್ಕಿ ಕುಮಾರ್ (13) ಹೃದಯ ಸಂಬಂಧಿತ ಕಾಯಿಲೆ ಉಲ್ಬಣಿಸಿ ಆಸ್ಪತ್ರೆಯಲ್ಲಿ ಅ. 24ರಂದು ನಿಧನರಾದರು.
ಅವರು ಮುಲ್ಕಿ ಸಮೀಪದ ಮೇಡಲಿನ್ ಶಾಲೆಯಲ್ಲಿ 7ನೇ ತರಗತಿಯ ವಿದ್ಯಾರ್ಥಿಯಾಗಿದ್ದರು.
ಮೃತ ವಿದ್ಯಾರ್ಥಿ ತಂದೆ ತಾಯಿ ಹಾಗೂ ಅಪಾರ ಬಂಧು ಬಳಗವನ್ನ ಅಗಲಿದ್ದಾರೆ.ಶಾಲೆಯಲ್ಲಿ ಮೃತ ಬಾಲಕನ ನಿಧನಕ್ಕೆ ಮೌನ ಪ್ರಾರ್ಥನೆ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
* ಕಾಪು: ತ್ಯಾಜ್ಯ ಪೇಪರ್ ಸಾಗಾಟ ವಾಹನ ಪಲ್ಟಿ
ಕಾಪು: ಕೊಪ್ಪಲಂಗಡಿಯಲ್ಲಿ ಪೇಪರ್ ತ್ಯಾಜ್ಯ ಸಾಗಾಟ ಲಾರಿಯೊಂದು ಪಲ್ಟಿಯಾಗಿ ಚಾಲಕ ಅದೃಷ್ಟವಶಾತ್ ಪಾರಾದ ಘಟನೆ ನಡೆದಿದೆ. ಮಂಗಳೂರಿನಿಂದ ಭದ್ರಾವತಿಗೆ ಪೇಪರ್ ತ್ಯಾಜ್ಯವನ್ನು ಸಾಗಿಸಲಾಗುತ್ತಿತ್ತು. ಅನಿವಾರ್ಯ ಕಾರಣಕ್ಕೆ ಕಾರ್ಕಳದ ಅಜೆಕಾರಿಗೆ ಹೋಗಿ ಹಣ ಪಡೆಯಬೇಕಾಗಿತ್ತು. ಈ ಹಿನ್ನಲೆ, ಪಡುಬಿದ್ರಿ ಮೂಲಕ ಕಾರ್ಕಳ ತಲುಪಲು ಲಾರಿಯನ್ನು ಕೊಪ್ಪಲಂಗಡಿ ಹೆದ್ದಾರಿ ಡೈವರ್ಷನಲ್ಲಿ ಯೂ ಟರ್ನ್ ಹೊಡೆದಾಗ ಶಬ್ದ ಬಂದದನ್ನು ಗಮನಿಸಿ ಅಲ್ಲೇ ನಿಲ್ಲಿಸಿ ಕೆಳಗಿಳಿದು ಗಮನಿಸುತ್ತಿದಂತೆ, ಲಾರಿಯ ಬಾಡಿಭಾಗ ಚೇಸ್ನಿಂದ ಬೇರ್ಪಟ್ಟು ಮುಗುಚಿ ಬಿದ್ದಿದೆ.
ಆ ಸಂದರ್ಭ ಯಾವುದೇ ವಾಹನ ಸಂಚಾರ ಇಲ್ಲದ ಕಾರಣ ಯಾವುದೇ ಸಾವು ನೋವು ಸಂಭವಿಸಿಲ್ಲ. ಬಾರೀ ಹಳೆಯ ವಾಹನ ಇದಾಗಿದ್ದು ಹೆದ್ದಾರಿಯಲ್ಲಿ ಸಂಚರಿಸಲು ಯೋಗ್ಯವೇ ಇಲ್ಲದ ಈ ವಾಹನವನ್ನು ಸಂಚರಿಸಲು ಅನುಮತಿಸಿದ ಆರ್ಟಿಓ ಇಲಾಖೆಯ ವಿರುದ್ಧ ಸ್ಥಳದಲ್ಲಿ ಸೇರಿದ ಜನ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.