ನ.10ಕ್ಕೆ ತೀರ್ಥಹಳ್ಳಿಯಲ್ಲಿ ಡಾನ್ಸ್ ಹಬ್ಬ!
– ಡ್ಯಾನ್ಸ್ ಪ್ಯಾಲೇಸ್ ತೀರ್ಥಹಳ್ಳಿ ವತಿಯಿಂದ ಆಯೋಜನೆ.
– ವರ್ಲ್ಡ್ ಡ್ಯಾನ್ಸ್ ಸೆಲೆಬ್ರೇಶನ್ 2024-25
– ದೇಶ ವಿದೇಶದ ಪ್ರಸಿದ್ಧ ಡ್ಯಾನ್ಸ್ ಕಲಾವಿದರ ಸಮಾಗಮ
– ಮಲೆನಾಡಲ್ಲಿ ಮೊದಲ ಬಾರಿಗೆ ಪ್ರಯೋಗ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಡ್ಯಾನ್ಸ್ ಪ್ಯಾಲೇಸ್ ಅಕಾಡೆಮಿ ಇವರ ಸಹಯೋಗದಲ್ಲಿ ವರ್ಲ್ಡ್ ಡ್ಯಾನ್ಸ್ ಸೆಲೆಬ್ರೇಶನ್ ನವೆಂಬರ್ 10ನೇ ತಾರೀಕು ಭಾನುವಾರ ಸಂಜೆ 6.00ಕ್ಕೆ ಯು.ಆರ್.ಅನಂತಮೂರ್ತಿ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆ.
ಡ್ಯಾನ್ಸ್ ಪ್ಯಾಲೇಸ್ ಅಕಾಡೆಮಿ ಮುಖ್ಯಸ್ಥ ಭರತ್ ಅವರ ಕನಸಿನ ಕೂಸು ಈ ಕಾರ್ಯಕ್ರಮ. ಜತೆಗೆ ರಾಜ್ಯದಲ್ಲೇ ಇಂತಹ ಕಾರ್ಯಕ್ರಮ ಎಲ್ಲೂ ನಡೆದಿಲ್ಲ. ದೇಶ ವಿದೇಶದ ನೃತ್ಯಗಳು, ದೇಶದ ಪ್ರಸಿದ್ಧ ಡ್ಯಾನ್ಸ್ ತಾರೆಯರು ಈ ಕಾರ್ಯಕ್ರಮದಲ್ಲಿ ಡಾನ್ಸ್ ಮಾಡಲಿದ್ದಾರೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಗರ್ತಿಕೆರೆ ರಾಘಣ್ಣ ಅವರು ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನ ಭರತ್ ವಡೆಗದ್ದೆ ಡ್ಯಾನ್ಸ್ ಪ್ಯಾಲೇಸ್ ಅಕಾಡೆಮಿ ಮಾಲೀಕರು ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆರಗ ಜ್ಞಾನೇಂದ್ರ, ಕಿಮ್ಮನೆ ರತ್ನಾಕರ್, ಆರ್ ಎಂ ಮಂಜುನಾಥ ಗೌಡರು, ವಿ.ಟಿ ರತ್ನಾಕರ್, ರೆಹಮತ್ ಉಲ್ಲಾ ಅಸಾದಿ, ಸಿರಿಬೈಲ್ ಧರ್ಮೇಶ್, ಸುರೇಶ್ ಕಂಪನಗದ್ದೆ, ಇಬ್ರಾಹಿಂ ಶರೀಫ್, ಗಜಾನನ ವಾಮನ ಸುತಾರ, ಪ್ರದೀಪ್ ಕುಮಾರ್ ಮತ್ತು ಕಟ್ಟೆ ಕರುಣ್ ಅವರು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದಾರೆ. ವರ್ಡ್ ಡ್ಯಾನ್ಸ್ ಸೆಲೆಬ್ರೇಶನ್ ಸೆಲೆಬ್ರಿಟಿಯಲ್ಲಿ ನೃತ್ಯ ನಿರ್ದೇಶಕರು ಮತ್ತು ಪ್ರಸಿದ್ಧ ನಟರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ರುದ್ರ ಮಾಸ್ಟರ್, ಪವನ್ ಮಾಸ್ಟರ್, ತಾರಕ್ ಮಾಸ್ಟರ್, ಹುಲಿ ಕಾರ್ತಿಕ್, ವಿಕಾಸ್ ಉತಯ್ಯ, ರಾಧಾ ಭಗವತಿ, ಅಭಿಜಿತ್ ತೀರ್ಥಹಳ್ಳಿ ಇವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 20 ವಿಶಿಷ್ಟ ನೃತ್ಯ ಪ್ರದರ್ಶನ ಹಾಗೂ ಲೈವ್ ಬ್ಯಾಂಡ್ ಇನ್ಸ್ಟ್ರುಮೆಂಟಲ್ ಮ್ಯೂಸಿಕ್ ನೊಂದಿಗೆ ಜನರನ್ನ ಮನರಂಜನೆ ನೀಡಲಿದ್ದಾರೆ. ಇದು ಅದ್ದೂರಿ ಡ್ಯಾನ್ಸ್ ಕಾರ್ಯಕ್ರಮ ಆಗಿದ್ದು ಪ್ರವೇಶ ಉಚಿತವಾಗಿರಲಿದೆ. ಸರ್ವರನ್ನು ಅಯೋಜಕರು ಸ್ವಾಗತಿಸಿದ್ದಾರೆ.