ಕರಾವಳಿ ಟಾಪ್ ನ್ಯೂಸ್
ಪಿಲಿಕುಳದಲ್ಲಿ ನ.17ರಿಂದ ಕಂಬಳ?
– ಈ ಬಾರಿ ಬೆಂಗಳೂರಲ್ಲಿ ಇಲ್ವಾ ಕಂಬಳ?
– ಪಿಲಿಕುಳ ಮೃಗಾಲಯಕ್ಕೆ ಪ್ರಾಣಿ, ಪಕ್ಷಿಗಳ ಆಗಮನ
NAMMUR EXPRESS NEWS
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಂಬಳ ಆಯೋಜನೆಗೆ ಈವರೆಗೆ ದಿನಾಂಕ ನಿಗದಿಯಾಗಿಲ್ಲ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಪಿಲಿಕುಳದಲ್ಲಿ ನ.17ಕ್ಕೆ ಕಂಬಳ ನಡೆಯಲಿದೆ ಎಂದು ರಾಜ್ಯ ಸರಕಾರ ಹೈಕೋರ್ಟ್ಗೆ ತಿಳಿಸಿದೆ.
ಬೆಂಗಳೂರಿನಲ್ಲಿ ಕಂಬಳ ಆಯೋಜಿಸಲು ಅನುಮತಿ ನೀಡದಂತೆ ಪೀಪಲ್ ಫಾರ್ ದಿ ಎಥಿಕಲ್ ಟ್ರೇಟ್ಮೆಂಟ್ ಆಫ್ ಅನಿಮಲ್ (ಪೆಟಾ) ಸ್ವಯಂ ಸೇವಾ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾ. ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತು. ಬೆಂಗಳೂರು ಕಂಬಳ ಸಮಿತಿ ಪರ ವಕೀಲ ಬಿ. ವಿನೋದ್ ಕುಮಾರ್ ವಾದ ಮಂಡಿಸಿ ಅರ್ಜಿ ಸಂಬಂಧ ತಮ್ಮ ಆಕ್ಷೇಪಣೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದರು. ಅಡ್ವಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ವಾದ ಮಂಡಿಸಿ, ‘ಬೆಂಗಳೂರಿನಲ್ಲಿ ಕಂಬಳ ಆಯೋಜನೆಗೆ ಈವರೆಗೆ ದಿನಾಂಕ ನಿಗದಿಯಾಗಿಲ್ಲ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಪಿಲಿಕುಳದಲ್ಲಿ ಇದೇ 17ರಂದು ಕಂಬಳ ನಡೆಯಲಿದೆ,” ಎಂದು ತಿಳಿಸಿದರು. ಆಕ್ಷೇಪವಿಲ್ಲ ಆದರೆ ಅದಕ್ಕೆ ಅರ್ಜಿದಾರರ ಪರ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ “ನಮಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಥವಾ ಪಿಲಿಕುಳದಲ್ಲಿ ಕಂಬಳ ಆಯೋಜನೆಗೆ ಆಕ್ಷೇಪವಿಲ್ಲ, ಆದರೆ, ಪಿಲಿಕುಳದಲ್ಲಿ ಮೃಗಾಲಯದ ಪಕ್ಕದಲ್ಲಿ ಕಂಬಳ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಅದಕ್ಕೆ ನಮ್ಮ ಆಕ್ಷೇಪವಿದೆ. ಅಷ್ಟೇ ಅಲ್ಲ, ಸ್ವತಃ ಮೃಗಾಲಯ ನಿರ್ದೇಶಕರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಕಂಬಳದ ಸಂದರ್ಭದಲ್ಲಿ ಉಂಟಾಗುವ ಕೂಗಾಟದಿಂದ ಬೇರೆ ಪ್ರಾಣಿಗಳಿಗೆ ಸಮಸ್ಯೆಯಾಗುತ್ತದೆಂದು ಹೇಳಿದ್ದಾರೆ ನಮ್ಮದೂ ಅದೇ ವಾದವಾಗಿದೆ,” ಎಂದರು ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ನ.12ಕ್ಕೆ ಮುಂದೂಡಿತು.
ಪಿಲಿಕುಳ ಮೃಗಾಲಯಕ್ಕೆ ಪ್ರಾಣಿ, ಪಕ್ಷಿಗಳ ಆಗಮನ
ಮಂಗಳೂರು: ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಕೇಂದ್ರ ಮೃಗಾಲಯದ ಒಪ್ಪಿಗೆ ಪಡೆದು ಒಡಿಶಾದ ನಂದನ್ ಕಾನನ್ ಮೃಗಾಲಯ ದಿಂದ ಆರು ವರ್ಷದ ಏಷ್ಯಾಟಿಕ್ ಗಂಡು ಸಿಂಹ, ತೋಳ, ಎರಡು ಘರಿಯಲ್ ಮೊಸಳೆ ಮತ್ತು ಅಪರೂಪದ ಪಕ್ಷಿಗಳಾದ ಎರಡು ಸಿಲ್ವರ್ ಫೆಸೆಂಟ್, ಎರಡು ಯೆಲ್ಲೋ ಗೋಲ್ಡನ್ ಫೆಸೆಂಟ್ಗಳನ್ನು ಮಂಗಳವಾರ ಪಿಲಿಕುಳ ಮೃಗಾಲಯಕ್ಕೆ ತರಲಾಯಿತು. ಪಿಲಿಕುಳದಿಂದ ನಾಲ್ಕು ಕಾಡು ನಾಯಿ/ಧೋಲ್, ಅಪರೂಪದ ನಾಲ್ಕು ರೆಟಿಕ್ಯುಲೇಟೆಡ್ ಹೆಬ್ಬಾವು, ಎರಡು ಬ್ರಾಹ್ಮಣಿ ಗಿಡುಗಗಳು, ಮೂರು ಏಷ್ಯನ್ ಪಾಮ್ ಸಿವೇಟ, ಎರಡು ಲಾರ್ಜ್ ಇಗರೇಟ್ಗಳನ್ನು ನಂದನ್ ಕಾನನ್ ಮೃಗಾಲಯಕ್ಕೆ ನೀಡಲಾಗಿದೆ. ವಿನಿಮ ಯದಲ್ಲಿ ಪಿಲಿಕುಳದಿಂದ ರವಾನೆ ಯಾಗುತ್ತಿರುವ ಪ್ರಾಣಿಗಳು ಪಿಲಿಕುಳ ಮೃಗಾಲಯದಲ್ಲೇ ಜನಿಸಿದವುಗಳಾಗಿವೆ. ಮೃಗಾಲಯದಲ್ಲಿ ಜತೆಯಿಲ್ಲದ ಪ್ರಾಣಿಗಳಿಗೆ ಜತೆಗಾಗಿ ಮತ್ತು ಶುದ್ಧ ರಕ್ತ ಸಂಬಂಧಗಳನ್ನು ಉಳಿಸಿಕೊಳ್ಳಲು ಪ್ರಾಣಿ ವಿನಿಮಯ ಕಾರ್ಯಕ್ರಮ ಮಾಡಲಾಗುತ್ತದೆ. ಪಿಲಿಕುಳದಲ್ಲಿ ಮೂರು ಸಿಂಹಗಳಿದ್ದು, ಜತೆಗಾರನಾಗಿ ಒಂದು ಗಂಡು ಏಷ್ಯ್ಯಾಟಿಕ್ ಸಿಂಹವನ್ನು ತರಿಸಲಾಗಿದೆ. ಏಷ್ಯ್ಯಾಟಿಕ್ ಗಂಡು ಸಿಂಹಗಳ ಸಂಖ್ಯೆ ಭಾರತದ ಮೃಗಾಲಯಗಳಲ್ಲಿ ಅತಿ ಕಡಿಮೆ ಇರುವುದರಿಂದ ಒಡಿಶಾದ ನಂದನ್ ಕಾನನ್ ಮೃಗಾಲಯದಿಂದ ತರಿಸಲಾಗಿದೆ.