ಈಗ ತೆಂಗಿನಕಾಯಿಗೆ ಬೆಲೆ ಏರಿಕೆ!
– ತೆಂಗಿನಕಾಯಿಗೆ ಭರ್ಜರಿ ಬೇಡಿಕೆ ಆರಂಭ: 50 ರೂ. ನತ್ತ ಕಾಯಿ
– ಎಳೆನೀರಿಗೆ ಹೆಚ್ಚಿದ ಡಿಮ್ಯಾಂಡ್: ಕಾಯಿಗೆ ಬೇಡಿಕೆ ಹೆಚ್ಚಳ
– ರೋಗ ಹೆಚ್ಚಳ, ಇಳುವರಿ ಕಡಿಮೆ ಎಫೆಕ್ಟ್
NAMMUR EXPRESS NEWS
ಬೆಂಗಳೂರು: ತೆಂಗಿನ ಕಾಯಿ ಬೆಲೆ ಈಗ ಏರುತ್ತಿದ್ದು ರೈತರು ಸಂತಸದಲ್ಲಿದ್ದಾರೆ. ಆದರೆ ಒಂದು ಕಡೆ ಕಾಂಡ ರಸ ಸೇರಿದಂತೆ ಅನೇಕ ರೋಗಗಳು ಕೂಡ ಬಾಧಿಸುತ್ತಿವೆ. ಏರಿಳಿತ ಕಾಣುತ್ತಿದ್ದ ತೆಂಗಿನ ಧಾರಣೆ ಮತ್ತೆ ಚೇತರಿಕೆಯ ಹಾದಿ ಹಿಡಿದಿದ್ದು, ಒಂದು ವಾರಗಳ ಹಿಂದೆ ಪ್ರತೀ ಕಿಲೋಗೆ 43 ರೂ. ಇದ್ದ ದರ ಇದೀಗ 45 ರಿಂದ 48 ರೂ.ವರೆಗೆ ಖಾಸಗಿ ಮಾರುಕಟ್ಟೆಗಳಲ್ಲಿ ಖರೀದಿಯಾಗುತ್ತಿದೆ. ಕರಾವಳಿ ಭಾಗದಲ್ಲಿ ದರ ಹೆಚ್ಚಾಗಿದೆ.
ತೆಂಗಿನಕಾಯಿಗೆ ಭರ್ಜರಿ ಬೇಡಿಕೆ ಹೊರ ಮಾರುಕಟ್ಟೆಗಳಲ್ಲಿ ತೆಂಗಿನ ಕಾಯಿಗೆ ಬೇಡಿಕೆ ಹೆಚ್ಚಿದ್ದು, ಇದರ ಪರಿಣಾಮ ಬೆಲೆ ಕೂಡ ಏರಿಕೆಯಾಗುತ್ತಿದೆ.
ಎಳೆ ನೀರಿಗಾಗಿ ಕೊಯ್ಲು: ತೆಂಗಿನ ಕಾಯಿ ಇಲ್ಲ
ಇತ್ತೀಚಿನ ಕೆಲ ವರ್ಷಗಳಿಂದ ಎಳನೀರಿಗೆ ಬೇಡಿಕೆ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಘಟ್ಟ ಪ್ರದೇಶದ ಹೆಚ್ಚಿನ ರೈತರು ತೆಂಗಿನ ಕಾಯಿಗೂ ಮೊದಲೇ ಎಳನೀರು ಕೊಯ್ಲು ಮಾಡುತ್ತಿದ್ದಾರೆ. ಇದರ ಪರಿಣಾಮ ಅಲ್ಲಿನ ಭಾಗದಲ್ಲಿ ತೆಂಗಿನ ಕಾಯಿಗೆ ಈಗ ಬೇಡಿಕೆ ಬಂದಿದೆ ಎನ್ನಲಾಗುತ್ತಿದೆ. ಇನ್ನೊಂದು ಕಡೆ ಇಳುವರಿ ಕಡಿಮೆ, ರೋಗ ಹೆಚ್ಚಳ ಕೂಡ ದರ ಏರಿಕೆಗೆ ಕಾರಣವಾಗಿದೆ.
ರೋಗಕ್ಕೆ ತೆಂಗಿನ ಮರಗಳು ಬಲಿ!
ತುಮಕೂರು,ಮಂಡ್ಯ,ಚಿತ್ರದುರ್ಗ,ಹಾಸನ,ಶಿವಮೊಗ್ಗ ಜಿಲ್ಲೆಯಲ್ಲಿ ತೆಂಗಿನ ಇಳುವರಿ ವಿವಿಧ ರೋಗಗಳ ಕಾರಣ ಕಡಿಮೆ ಆಗುತ್ತಿದೆ. ಇದು ಇದೀಗ ರೈತರ ಆತಂಕಕ್ಕೆ ಕಾರಣವಾಗಿದೆ.
ಜಿಗಿದ ಕೊಬರಿ ದರ
ಕಳೆದ ಮೂರು ನಾಲ್ಕು ವರ್ಷಗಳ ಹಿಂದೆ ಕ್ವಿಂಟಲ್ 6000- 9000 ಸಾವಿರ ಇದ್ದ 14-15,000 ರೂ ಕ್ವಿಂಟಲ್ ಆಗಿದೆ.ಇದು ಕೂಡ ತೆಂಗು ಬೆಳೆಗಾರರಿಗೆ ಸಂತಸ ತಂದಿದೆ.