ಟಾಪ್ 3 ನ್ಯೂಸ್
– ಒಂದು ವಾರ ಭಾರೀ ಮಳೆ..!?
– ಚಿಕ್ಕಮಗಳೂರು: ದತ್ತಪೀಠದಲ್ಲಿನ ಗೋರಿಗಳಿಗೆ ಕುಂಕುಮ ಹಚ್ಚಿ ಪೂಜೆ
NAMMUR EXPRESS NEWS
ಈಗ ಚಳಿಗಾಲ.. ಆದರೂ ದಿನ ಬಿಟ್ಟು ದಿನ ಮಳೆ ಬರುತ್ತಲೇ ಇದೆ. ಇನ್ನೂ 10 ದಿನ ಇಡೀ ರಾಜ್ಯಾದ್ಯಂತ ಭಾರೀ
ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಬೆಳಗ್ಗೆಯಿಂದಲೇ ಬೆಂಗಳೂರಲ್ಲಿ ಮೋಡ
ಕವಿದ ವಾತಾವರಣ ಇರಲಿದೆ. ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಹಾಸನ, ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಮನೆಯಿಂದ ಹೊರ ಹೋಗುವಾಗ
ಮರೆಯದೆ ಛತ್ರಿ ತೆಗೆದುಕೊಂಡು ಹೋಗಿ. ಸಂಜೆ ಆದಷ್ಟು ಬೇಗ ಮನೆ ಸೇರಿಕೊಳ್ಳಿ ಮುಂದಿನ ದಿನ ಮತ್ತೆ ಭಾರೀ ಮಳೆಯಾಗುವ ಸಾಧ್ಯತೆ.
– ಚಿಕ್ಕಮಗಳೂರು: ದತ್ತಪೀಠದಲ್ಲಿನ ಗೋರಿಗಳಿಗೆ ಕುಂಕುಮ ಹಚ್ಚಿ ಪೂಜೆ
ಚಿಕ್ಕಮಗಳೂರು : ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿನ ಗೋರಿಗಳಿಗೆ ಅರ್ಚಕರು ಕುಂಕುಮ ಹಚ್ಚಿ, ಪೂಜೆ ಮಾಡಿದ್ದಾರೆ ಎಂದು ಮುಸ್ಲಿಂ ಸಮುದಾಯದ ಮುಖಂಡರು ಆರೋಪ ಮಾಡಿದ್ದಾರೆ. ಘಟನೆ ಖಂಡಿಸಿ ಶಾಖಾದ್ರಿ ಕುಟುಂಬಸ್ಥರು ದರ್ಗಾದ ಎದರು ಪ್ರತಿಭಟನೆ ಮಾಡಿದರು. ಈ ಸಂಬಂಧ ಶಾಖಾದ್ರಿ ಕುಟುಂಬಸ್ಥರು ಮತ್ತು ಮುಜರಾಯಿ ಇಲಾಖೆಯ ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ಇನ್ನು, ಈ ಹಿಂದೆ ಸೆಪ್ಟೆಂಬರ್ನಲ್ಲೂ ಇದೇ ರೀತಿಯಾದ ಘಟನೆ ನಡೆದಿದ್ದು, ಮುಸ್ಲಿಂ ಮುಖಂಡರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಸಂಬಂಧ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಮಾತನಾಡಿ, ದಾಖಲೆಯ ಪ್ರಕಾರ ಅದು ದತ್ತಾತ್ರೇಯ ಸ್ವಾಮಿಗಳಿರುವ ಜಾಗವಾಗಿದೆ. ಮುಜರಾಯಿ ಇಲಾಖೆಗೆ ಸೇರಿದ ಜಾಗದಲ್ಲಿ ಗೋರಿ ಕಟ್ಟಿರುವುದು ಅಪರಾಧ. ಮೊದಲು ಗೋರಿಗಳನ್ನು ಎತ್ತಿಕೊಂಡು ಹೋಗಬೇಕು. ಹಿಂದೂಗಳ ಎಂಡೋಮೆಂಟ್ನಲ್ಲಿ ,ದತ್ತಾತ್ರೇಯ ದೇವರ ಹೆಸರಿನ ಜಾಗದಲ್ಲಿ ಗೋರಿ ಕಟ್ಟಿ ಅಪರಾಧ ಮಾಡಲಾಗಿದೆ ಎಂದು ಹೇಳಿದರು. ಗೋರಿ ಅಂತ ಜಗಳಕ್ಕೆ ಬರುವವರು, ಗೋರಿಗಳನ್ನು ತೆಗೆದುಕೊಂಡು ನಾಗೇನಹಳ್ಳಿಗೆ ಹೋಗಲಿ. ತೆಗೆದುಕೊಂಡು ಹೋಗ ಬೇಕಿರುವುದು ಕುಂಕುಮ ಅಲ್ಲ, ಗೋರಿಗಳನ್ನು. ಬಾಬಾ ಬುಡನ್ ದರ್ಗಾ ನಾಗೇನಹಳ್ಳಿಯ ಸರ್ವೇ ನಂಬರ್ 57ರಲ್ಲಿದೆ. ದತ್ತಾತ್ರೇಯ ಪೀಠ ಸರ್ವೆ ನಂಬರ್ 198 ರಲ್ಲಿದೆ. ಅವರು ಗೋರಿಗಳನ್ನ ಸರ್ವೇ ನಂಬರ್ 57ರ ಬಾಬಾ ಬುಡನ್ ದರ್ಗಾಕ್ಕೆ ತೆಗೆದುಕೊಂಡು ಹೋಗಲಿ. ಬಾಬಾ ಬುಡನ್ ದರ್ಗಾ ಇರುವ ಜಾಗದಲ್ಲಿ ದತ್ತ ಪಾದುಕೆ ಇದ್ದರೆ ನಾವು ತೆಗೆದುಕೊಂಡು ಹೋಗುತ್ತೇವೆ ಎಂದರು.