ಕೋಣಂದೂರಲ್ಲಿ ನ.24ಕ್ಕೆ ಕಾರ್ತಿಕ ದೀಪೋತ್ಸವ!
– ಶ್ರೀ ಮಹಾಗಣಪತಿ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ದೀಪೋತ್ಸವ
– ಝೀ ಟಿವಿ ಸರಿಗಮಪ ಕಲಾವಿದರಿಂದ ‘ಸ್ವರ ನಿನಾದ’ ಸಂಗೀತ ಕಾರ್ಯಕ್ರಮ
– ಧಾರ್ಮಿಕ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ
NAMMUR EXPRESS NEWS
ಕೋಣಂದೂರು: ಶ್ರೀ ಮಹಾಗಣಪತಿ ಶ್ರೀಬನಶಂಕರಿ ದೇವಸ್ಥಾನದಲ್ಲಿ ನವಂಬರ್ 24ರ ಭಾನುವಾರದಂದು ವಾರ್ಷಿಕ ಕಾರ್ತಿಕ ದೀಪೋತ್ಸವವು ಶ್ರೀ ದೇವರ ಸನ್ನಿಧಿಯಲ್ಲಿ ಜರುಗಲಿದೆ. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 9-30ರಿಂದ ಕ್ಷೀರಾಭಿಷೇಕ, ಪಂಚಾಮೃತ ವಿಶೇಷ ಪೂಜೆ, ಶ್ರೀ ಬನಶಂಕರಿ ಪಾರಾಯಣ, 11-35ಕ್ಕೆ ಮಹಾಮಂಗಳಾರತಿ, ಉಡಿತುಂಬುವ ಕಾರ್ಯಕ್ರಮವಿರುತ್ತದೆ. ಸಂಜೆ 5-30ರಿಂದ ಕುಂಕುಮಾರ್ಚನೆ ಇರಲಿದ್ದು, ರಾತ್ರಿ 9-30ಕ್ಕೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಇರುತ್ತದೆ.
ಈ ಎಲ್ಲಾ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನದ ಧರ್ಮದರ್ಶಿಗಳಾದ ಹೆಚ್.ರಾಮ ಚಂದ್ರ ಜೋಯ್ಸ್ ಮತ್ತು ಕುಟುಂಬ ವರ್ಗದವರು ವಿನಂತಿಸಿದ್ದಾರೆ.
ಸ್ವರ ನಿನಾದ’ ಸಂಗೀತ ಕಾರ್ಯಕ್ರಮ
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅತ್ರಿ ಪ್ರಶಸ್ತಿ, ಸದ್ಭಾವನಾ ಪ್ರಶಸ್ತಿ ಪುರಸ್ಕೃತರಾದ ಕೆ.ಜಿ.ಶಶಿಕುಮಾರ ಕಾರಂತ ಸಂಯೋಜನೆಯಲ್ಲಿ ‘ಸ್ವರ ನಿನಾದ’ ಸಂಗೀತ ಕಾರ್ಯಕ್ರಮ ಜರುಗಲಿದ್ದು ಝೀಟಿವಿ ಸರಿಗಮಪ ಸೀಸನ್ 19ರ ರನ್ನರ್ ಅಪ್ ಕರಾವಳಿಗಾನ ಕೋಗಿಲೆ ತನುಶ್ರೀ ಮಂಗಳೂರು ಮತ್ತು ದಕ್ಷಿಣ ಕನ್ನಡದ ಹೆಸರಾಂತ ಕಲಾವಿದರ ಸಾಂಗತ್ಯದಲ್ಲಿ ಭಕ್ತಿ-ಭಾವ ಆಯ್ದ ಮಾಧುರ್ಯ ಪ್ರಧಾನ ಚಲನಚಿತ್ರ ಗೀತೆಗಳ ಸಂಗೀತ ಕಾರ್ಯಕ್ರಮ ಜರುಗಲಿದೆ.