ಆರ್.ಎಂ ಉಸ್ತುವಾರಿ ಹೋಬಳಿ ಅತೀ ಹೆಚ್ಚು ಲೀಡ್!
– ಬಿಜೆಪಿ, ಜೆಡಿಎಸ್ ಪಕ್ಷ, ಕುಟುಂಬ ರಾಜಕೀಯವನ್ನು ಜನ ತಿರಸ್ಕಾರ ಮಾಡಿದ್ದಾರೆ ಎಂದ ಸಹಕಾರ ನಾಯಕ ಮಂಜುನಾಥ ಗೌಡ
– ಕ್ಷೇತ್ರದಲ್ಲಿಯೇ ಹೊಂಗನೂರು ಹೋಬಳಿ ಅತೀ ಹೆಚ್ಚು ಮತ ಗಳಿಕೆ
NAMMUR EXPRESS NEWS
ಚನ್ನಪಟ್ಟಣ/ ತೀರ್ಥಹಳ್ಳಿ: ರಾಜ್ಯದಲ್ಲಿ ನಡೆದ ಉಪ ಚುನಾವಣೆ ಪೈಕಿ ಮಹತ್ವ ಪಡೆದಿದ್ದ ಚನ್ನ ಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ಎದುರು ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಭಾರೀ ಬಹುಮತದಿಂದ ಗೆಲವು ಸಾಧಿಸಿದ್ದಾರೆ.
ಈ ಮೂಲಕ ಉಪ ಮುಖ್ಯಮಂತ್ರಿ ತಮ್ಮ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲ್ಲಿಸುವಲ್ಲಿ ಯಶಸ್ವಿಯಾಗುವ ಜತೆಗೆ ಒಕ್ಕಲಿಗ ಪ್ರಭಾವಿ ನಾಯಕ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಇನ್ನು ಚನ್ನಪಟ್ಟಣ ಗೆಲುವಲ್ಲಿ ತೀರ್ಥಹಳ್ಳಿ ಸಹಕಾರ ನಾಯಕರಾದ ಮಂಜುನಾಥ ಗೌಡ ಕೂಡ ಪಕ್ಷಕ್ಕಾಗಿ ತಮ್ಮ ಸೇವೆ ಸಲ್ಲಿಸಿದ್ದಾರೆ. ಮಂಜುನಾಥ ಗೌಡ ಉಸ್ತುವಾರಿ ಹೋಬಳಿಯೇ ಕ್ಷೇತ್ರದಲ್ಲಿ ಅತೀ ಹೆಚ್ಚು ಲೀಡ್ ಕೊಟ್ಟ ಹೋಬಳಿಯಾಗಿದೆ. ಡಿಸಿಸಿ ಬ್ಯಾಂಕ್ ನೇತೃತ್ವದಲ್ಲಿ 174ಕ್ಕೂ ಹೆಚ್ಚು ಹಾಲಿನ ಸೊಸೈಟಿ ಪ್ರಮುಖರನ್ನು ಭೇಟಿ ಮಾಡಿ ಮನವೊಲಿಸಿದ್ದರು. ಅಲ್ಲದೆ ಬೃಹತ್ ಸಾರ್ವಜನಿಕ ಸಭೆಯನ್ನು ಮಂಜುನಾಥ ಗೌಡ ಆಯೋಜಿಸಿದ್ದರು. ಇನ್ನು ಯೋಗೇಶ್ವರ್ ಕಾಂಗ್ರೆಸ್ ಸದಸ್ಯತ್ವ ಪಡೆಯುವ ವೇಳೆಯೂ ಸೇರಿದಂತೆ ಅವರನ್ನು ಪಕ್ಷಕ್ಕೆ ಕರೆ ತರಲು ಮಂಜುನಾಥ ಗೌಡ ಮತ್ತು ಬೇಳೂರು ಗೋಪಾಲಕೃಷ್ಣ ಪ್ರಮುಖ ಪಾತ್ರ ವಹಿಸಿದ್ದರು.
ಕುಟುಂಬ ರಾಜಕೀಯಕ್ಕೆ ಜನರ ತಿರಸ್ಕಾರ
ಜನ ಬೆಜೆಪಿ ಮತ್ತು ದಳದ ಮೈತ್ರಿ ರಾಜಕೀಯ ಹಾಗೂ
ಕುಟುಂಬ ರಾಜಕಾರಣವನ್ನು ತಿರಸ್ಕಾರ ಮಾಡಿದ್ದಾರೆ ಎಂದು ಸಹಕಾರ ನಾಯಕರಾದ ಡಾ.ಆರ್. ಎಂ. ಮಂಜುನಾಥ ಗೌಡ ಹೇಳಿದ್ದಾರೆ.
ನಮ್ಮೂರ್ ಎಕ್ಸ್ ಪ್ರೆಸ್ ಜತೆ ಮಾತನಾಡಿದ ಡಾ.ಆರ್.ಎಂ.ಮಂಜುನಾಥ ಗೌಡ ಅವರು ಶಿಗ್ಗಾವಿಯಲ್ಲಿ ಭರತ್ ಬೊಮ್ಮಾಯಿ ಅವರನ್ನು oಒತ್ತಾಯಪೂರ್ವಕವಾಗಿ ನಿಲ್ಲಿಸಿದ್ದಾರೆ. ರಾಮ ನಗರ ಜಿಲ್ಲೆಯಲ್ಲಿ ಕುಮಾರಸ್ವಾಮಿ, ದೇವೇಗೌಡ ಅವರ ರಾಜಕೀಯ ಅಂತ್ಯವಾಗಿದೆ ಎಂದರು
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಸೇರಿದಂತೆ ಕಾಂಗ್ರೆಸ್ ಸರ್ಕಾರದ ಕೆಲಸಗಳನ್ನು ಬಿಜೆಪಿಗೆ ಹಿನ್ನಡೆ. ಮಾಡುವಂತೆ ಮಾಡಿದೆ. ಕುಮಾರಸ್ವಾಮಿ ತವರು ಕ್ಷೇತ್ರ ದಲ್ಲಿ ಈಗ ಒಂದು ಗೆದ್ದಿದ್ದು ಇಲ್ಲ. ದಳದ ನೆಲೆ ಸಂಪೂರ್ಣ ಹೋಗಿದೆ. ಡಿಕೆಶಿ ಮತ್ತು ಸಿದ್ದರಾಮಯ್ಯ ಅವರ ನಾಯಕತ್ವ ವರ್ಕ್ಔಟ್ ಆಗಿದೆ ಎಂದರು.