ತೀರ್ಥಹಳ್ಳಿಯಲ್ಲಿ ಯಶಸ್ವಿಯಾಗಿ ನಡೆದ ರಸಪ್ರಶ್ನೆ ಸ್ಪರ್ಧೆ
– ತೀರ್ಥಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆ ಆಯೋಜನೆ
– ಹುರುಪಿನಿಂದ ಭಾಗಿಯಾದ ಮಕ್ಕಳು: ಗಣ್ಯರ ಸಾಥ್
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಜಾನಪದ ಪರಿಷತ್ತು, ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ನ.28ರಂದು ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ವಿಭಾಗಕ್ಕೆ ಏರ್ಪಡಿಸಿದ ಕನ್ನಡ ನಾಡು ನುಡಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ರಸಪ್ರಶ್ನೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಸಾಂಸ್ಕೃತಿಕ ವೇದಿಕೆಯ ಗೌರವ ಅಧ್ಯಕ್ಷರಾದ ಸುಧೀಷ್ಣಾ ಕುಮಾರಿಯವರು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಉದ್ದೇಶ ಹಾಗೂ ಅಗತ್ಯತೆಗಳ ಬಗ್ಗೆ ಸಭೆಗೆ ತಿಳಿಸಿದರು. ಪತ್ರಕರ್ತ ಡಾನ್ ರಾಮಣ್ಣ ಶೆಟ್ಟಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ರಮೇಶ್ ಶೆಟ್ಟಿ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾದ ಗೀತಾ ರಮೇಶ್, ನೌಕರರ ಸಂಘದ ಅಧ್ಯಕ್ಷರಾದ ರಾಘವೇಂದ್ರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಪುಟ್ಟಪ್ಪ ಕೆ ವಿ, ಅಕ್ಷರ ದಾಸೋಹ ನೋಡಲ್ ಅಧಿಕಾರಿಯಾದ ಪ್ರವೀಣ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿಗಳಾದ ಗಾಯತ್ರಿ ಶೇಷಗಿರಿ, ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಚೈತ್ರ ಅರುಣ್ ಇವರು ಪ್ರಾರ್ಥಿಸಿದರು. ಸರ್ಕಾರಿ ಬಾಲಕಿಯರ ಪ್ರೌಢಶಾಲೆ ತೀರ್ಥಹಳ್ಳಿಯ ಮಕ್ಕಳು ನಾಡಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು. ಶ್ರೀ ಮಹಾಬಲೇಶ್ವರ ಹೆಗಡೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಹಕಾರಿಯ ಅಧ್ಯಕ್ಷರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಸಾಂಸ್ಕೃತಿಕ ವೇದಿಕೆಯ ಕಾರ್ಯದರ್ಶಿಗಳಾದಲೀಲಾವತಿಯವರು ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆಯು ಪ್ರಾರಂಭವಾಗಿ ತನ್ನ ಒಂದು ವರ್ಷದ ಕಾರ್ಯ ಚಟುವಟಿಕೆಗಳನ್ನು ನಡೆಸಿದ್ದು ಅದರ ವರದಿಯನ್ನು ಸಭೆಗೆ ವಾಚಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರೇಣುಕಾ ಹೆಗಡೆಯವರು ರಸಪ್ರಶ್ನೆ ಕಾರ್ಯಕ್ರಮದ ಬಗ್ಗೆ ಹಾಗೂ ವೇದಿಕೆ ಬಗ್ಗೆ ಮಾಹಿತಿ ನೀಡಿದರು. ಶ್ರೀಮತಿ ಮೂಕಾಂಬಿಕಾ ಸಾಂಸ್ಕೃತಿಕ ವೇದಿಕೆ ಸದಸ್ಯರು ಸರ್ವರನ್ನು ಸ್ವಾಗತಿಸಿದರು. ಶ್ರೀಮತಿ ಸುರೇಖಾ ಎಸ್ಆರ್ ಸಾಂಸ್ಕೃತಿಕ ವೇದಿಕೆಯ ಸಂಘಟನಾ ಕಾರ್ಯದರ್ಶಿಗಳು ಸರ್ವರನ್ನು ವಂದಿಸಿದರು. ಶ್ರೀಮತಿ ವಿಜಯಲಕ್ಷ್ಮಿ, l ನಿರೂಪಿಸಿದರು. ರಸಪ್ರಶ್ನೆ ಸಂಪನ್ಮೂಲ ವ್ಯಕ್ತಿಗಳಾದ ರಾಘವೇಂದ್ರ ತೂದೂರು, ಸುಬ್ರಹ್ಮಣ್ಯ ಗುಡ್ಡೇಕೇರಿ, ನಾಗರಾಜ್ ಅಡಿಗ ಅರಳಸುರುಳಿ ಹಾಗೂ ಸಹಾಯಕರಾಗಿ ನಾಗರಾಜ್ ಆರ್ ಎ ಹಾಗೂ ಅರುಣ್ ಇವರು ರಸಪ್ರಶ್ನೆ ಸ್ಪರ್ಧೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು .ಶಾಲೆಗಳಿಂದ ನೃತ್ಯ. ರೂಪಕ ಮುಂತಾದ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಸ್ಪರ್ಧೆಯಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳು
ಪ್ರಾಥಮಿಕ ಶಾಲಾ ವಿಭಾಗ:- ವೈಷ್ಣವಿ ಕೆ ಪಿ ಮತ್ತು ಸಾನಿಧ್ಯ ಕೆ.ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೆಗ್ಗೋಡು.
ದ್ವಿತೀಯ ಬಹುಮಾನ: -ಅನುಜ್ಞ ಆರ್ ಆರ್ ಕಶ್ಯಪ್ ಮತ್ತು ಅದ್ವಿತ್ ಗೌಡ ಕುವೆಂಪು ಮಾದರಿ ಹಿರಿಯ ಪ್ರಾಥಮಿಕ ಶಾಲೆ ತೀರ್ಥಹಳ್ಳಿ .
ತೃತೀಯ ಬಹುಮಾನ:- ಅದ್ವಿತಿ ಮತ್ತು ಅಭಿಷೇಕ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅರೇಹಳ್ಳಿ.
ಸಮಾಧಾನಕರ ಬಹುಮಾನ:- ಪೂರ್ವ ಕೆಸಿ ಮತ್ತು ದ್ರವ್ಯ ಪಿ ವಾಗ್ದೇವಿ ಆಂಗ್ಲ ಮಾಧ್ಯಮ ಶಾಲೆ ತೀರ್ಥಹಳ್ಳಿ.
ಪ್ರೌಢಶಾಲಾ ವಿಭಾಗ: –
ಪ್ರಥಮ ಬಹುಮಾನ: ಏಕತಾ ಡಿ ಎನ್ ಮತ್ತು ವಿನಯ್ ಕೆ ಆರ್ ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೆ ಕೇರಿ .
ದ್ವಿತೀಯ ಬಹುಮಾನ: -ಭಾಗ್ಯಶ್ರೀ ಟಿ ಆರ್ ಮತ್ತು ವರ್ಷ ವೈ ಕೆ ಸರ್ಕಾರಿ ಪ್ರೌಢಶಾಲೆ ತೂದೂರು. ತೃತೀಯ ಬಹುಮಾನ: -ಅನುಪ್ ಕೆ ಎಸ್ ಮತ್ತು ನಮಿತಾ ಹೆಚ್ ಹೆಚ್. ಸರ್ಕಾರಿ ಪ್ರೌಢಶಾಲೆ ಕನ್ನಂಗಿ ಸಮಾಧಾನಕರ ಬಹುಮಾನ ಅದಿತಿ ಜೀ ಜೆ ಮತ್ತು ಧನ್ಯ ಜಿ ಆರ್. ಸರ್ಕಾರಿ ಪ್ರೌಢಶಾಲೆ ಹುಂಚದ ಕಟ್ಟೆ.
ಪದವಿ ಪೂರ್ವ ಕಾಲೇಜು ವಿಭಾಗ :–
ಪ್ರಥಮ ಸ್ಥಾನ :ಪ್ರೀತಮ್ ಬಿಪಿ ಮತ್ತು ರಜತ್ ಜಿ ಆರ್ .ಸರ್ಕಾರಿ ಪದವಿ ಪೂರ್ವ ಕಾಲೇಜು. ತೀರ್ಥಹಳ್ಳಿ
ದ್ವಿತೀಯ ಸ್ಥಾನ: ಶ್ರೀರಕ್ಷಾ ಕೆ ವಿ ಮತ್ತು ದೀಪಿಕಾ ಕೆ ರಾವ್ .ವಾಗ್ದೇವಿ ಪಿಯು ತೀರ್ಥಹಳ್ಳಿ. ತೃತೀಯ ಬಹುಮಾನ:- ಸಂಯುಕ್ತ ಬಿ ಆರ್ ಗೌಡ ಮತ್ತು ಮನಸ್ವಿ ಭಟ್.ತುಂಗಾ ಪಿಯು ಕಾಲೇಜು ತೀರ್ಥಹಳ್ಳಿ. ಸಮಾಧಾನಕರ ಬಹುಮಾನ: ಶಂಕರ್ ಹಾಗೂ ಸುರೇಶ್ ಎಸ್ ಎಸ್ ತುಂಗಾ ಪಿಯು ಕಾಲೇಜು ತೀರ್ಥಹಳ್ಳಿ.