ಕುಕ್ಕೆ ಸುಬ್ರಮಣ್ಯದಲ್ಲಿ ಇಂದು ಲಕ್ಷ ದೀಪೋತ್ಸವ!
– ಬೀದಿ ಉರುಳು ಸೇವೆ ಆರಂಭ: ಗಾಯನಕ್ಕೆ ಭಜನೆ ತಂಡಗಳ ಹೆಜ್ಜೆ
– ಚಂಪಾಷಷ್ಠಿ ಜಾತ್ರೋತ್ಸವದ ಸಂಭ್ರಮ: ಸಾವಿರಾರು ಭಕ್ತರು ಭಾಗಿ
NAMMUR EXPRESS NEWS
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಜಾತ್ರೋತ್ಸವದ ಪ್ರಯುಕ್ತ ನ.30ರಂದು ಲಕ್ಷದೀಪೋತ್ಸವ ನೆರವೇರಲಿದೆ.ಈ ನಿಮಿತ್ತ ಶ್ರೀ ದೇವರ ಚಂದ್ರ ಮಂಡಲ ರಥೋತ್ಸವ ನಡೆಯಲಿದ್ದು, ಈ ಸಂದರ್ಭ ದೇಗುಲ ಸಹಿತ ಗೋಪುರದ ಬಳಿಯಿಂದ ಕಾಶಿಕಟ್ಟೆ ತನಕ ಹಾಗೂ ಆದಿ ಸುಬ್ರಹ್ಮಣ್ಯ ದೇಗುಲ ಪರಿಸರದಲ್ಲಿ ಲಕ್ಷ ದೀಪಗಳು ಬೆಳಗಲಿವೆ. ಜತೆಗೆ ವಿಶೇಷವಾಗಿ ಸುಮಾರು 120 ತಂಡಗಳಿಂದ ಅಖಂಡ ಕುಣಿತ ಭಜನೆ ಸೇವೆ ನೆರವೇರಲಿದೆ.
ಸಂಜೆ 6ರಿಂದ ರಾತ್ರಿ 8ರ ತನಕ ರಥೋತ್ಸವದ ಮೊದಲು ಕುಣಿತ ಭಜನೆ ನಡೆಯಲಿದೆ. ರಾಜಗೋಪುರದ ಬಳಿಯಿಂದ ರಥಬೀದಿ ಮತ್ತು ಅಡ್ಡಬೀದಿ ಯಲ್ಲಿ ಕುಣಿತ ಭಜನೆ ನಡೆಯಲಿದೆ. ಮುಖ್ಯ ಗುರು ಮತ್ತು ಗಾಯಕ ಕಾರ್ಕಳದ ಯೋಗೀಶ್ ಕಿಣಿ ಅವರ ಗಾಯನಕ್ಕೆ ಭಜನೆ ತಂಡಗಳು ಹೆಜ್ಜೆ ಹಾಕಲಿವೆ. ಕಾಶಿಕಟ್ಟೆಗೆ ಆಗಮಿಸುವ ದೇವರಿಗೆ ಮಹಾಗಣಪತಿ ಸನ್ನಿಧಾನ ದಲ್ಲಿ ಗುರ್ಜಿ ಪೂಜೆ ಜರಗಲಿದೆ. ಭಕ್ತರು ರಾತ್ರಿ ಬೀದಿ ಉರುಳು ಸೇವೆಯನ್ನು ಭಕ್ತರು ಆರಂಭಿಸು ತ್ತಾರೆ. ಸ್ವಯಂಸ್ಫೂರ್ತಿಯಿಂದ ಈ ಸಾಂಪ್ರದಾಯಿಕ ಸೇವೆಯನ್ನು ಭಕ್ತರು ಚಂಪಾಷಷ್ಠಿ ಮಹಾರಥೋತ್ಸವದ ವರೆಗೆ ನೆರವೇರಿಸುತ್ತಾರೆ.