ಕರಾವಳಿಯಿಂದ ರಾಜಧಾನಿಗೆ ಕ್ರಿಯೇಟಿವ್ ಪುಸ್ತಕ ಮನೆ
– ಕನ್ನಡದ ಪ್ರಸಿದ್ಧ ಬರಹಗಾರರ 6 ಕೃತಿಗಳು ಡಿ.15ಕ್ಕೆ ಬಿಡುಗಡೆ
– ಸರ್ವರನ್ನು ಸ್ವಾಗತಿಸಿದ ಅಶ್ವತ್ ಎಸ್. ಎಲ್
NAMMUR EXPRESS NEWS
ಮೌಲ್ಯಯುತ ಪುಸ್ತಕಗಳನ್ನು ಓದುಗ ವರ್ಗಕ್ಕೆ ನೀಡಬೇಕೆಂಬ ನಮ್ಮ ಆಸೆಗೆ ಬಹಳ ಪ್ರೀತಿಯಿಂದ ತಮ್ಮ ಅಮೂಲ್ಯ ಬರಹಗಳ ಪುಸ್ತಕಗಳನ್ನು ನೀಡಿದ ಕನ್ನಡದ ಪ್ರಸಿದ್ಧ ಬರಹಗಾರರ 6 ಕೃತಿಗಳು ಬೆಂಗಳೂರಿನ ಚಾಮರಾಜಪೇಟೆಯ ಶ್ರೀ ಕೃಷ್ಣರಾಜ ಪರಿಷತ್ ಮಂದಿರದಲ್ಲಿ ಡಿಸೆಂಬರ್ 15ರಂದು ನಡೆಯಲಿದೆ.
ಪುಸ್ತಕ ಪ್ರಸರಣದ ನಮ್ಮ ಪ್ರಯತ್ನ ಕರಾವಳಿಗೆ ಮಾತ್ರ ಸೀಮಿತವಾಗದೆ ರಾಜ್ಯದಾದ್ಯಂತ ಸಾಗಬೇಕು ಎನ್ನುವ ಅಭಿಲಾಷೆಯೊಂದಿಗೆ ಕಾರ್ಯಕ್ರಮ ರೂಪಿಸುತ್ತಿದ್ದೇವೆ ವಿಶಿಷ್ಟ ಸಾಹಿತ್ಯ ಕಾರ್ಯಕ್ರಮದಲ್ಲಿ ತಾವುಗಳು ನಮ್ಮೊಡನೆ ಜೊತೆಗೂಡಲೇಬೇಕೆಂಬ ಪ್ರೀತಿಯ ಕರೆಯೊಂದಿಗೆ…
ಅಶ್ವತ್ ಎಸ್. ಎಲ್.
ಕ್ರಿಯೇಟಿವ್ ಪುಸ್ತಕ ಮನೆ, ಕಾರ್ಕಳ