- ಧಾರವಾಡ ಕಾರ್ಯಕ್ರಮದಲ್ಲಿ ಮೋದಿಯಿಂದಲೇ ಪ್ರಸ್ತಾಪ
- ಫೆ.27ರಂದು ಶಿವಮೊಗ್ಗದಲ್ಲಿ ಉದ್ಘಾಟನೆ ಆಗಿದ್ದ ಏರ್ ಪೋರ್ಟ್
NAMMUR EXPRESS NEWS
ಧಾರವಾಡ: ಧಾರವಾಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದ ಹೆಸರನ್ನು ಪ್ರಸ್ತಾಪಿಸಿದ ನರೇಂದ್ರ ಮೋದಿ ಅವರು ಕುವೆಂಪು ನಿಲ್ದಾಣ' ಎಂದು ಕರೆದಿದ್ದಾರೆ. ಈ ಮೂಲಕ ಕುವೆಂಪು ಹೆಸರು ಅಧಿಕೃತ ಎಂದು ಘೋಷಣೆ ಆಗಲಿದೆ. ಶಿವಮೊಗ್ಗದಲ್ಲಿ ಉದ್ಘಾಟನೆಯಾದ ನಿಲ್ದಾಣಕ್ಕೆ ಯಾವುದೇ ಹೆಸರನ್ನು ಅಂತಿಮಗೊಳಿಸಿರಲಿಲ್ಲ. ನಿಲ್ದಾಣಕ್ಕೆ
ಕುವೆಂಪು ಅವರ ನಾಯಕ ಬಿ.ಎಸ್.ಯಡಿಯೂರಪ್ಪ ಕೇಂದ್ರವನ್ನು ಕೋರಿದ್ದರು. ಫೆ.27ರಂದು ವಿಮಾನ ನಿಲ್ದಾಣ ಅದ್ದೂರಿಯಾಗಿ ಉದ್ಘಾಟನೆ ಆಗಿತ್ತು. ಪ್ರಧಾನಿ ಮೋದಿ, ಸಿಎಂ ಬಸವರಾಜ್ ಬೊಮ್ಮಾಯಿ, ಯಡಿಯೂರಪ್ಪ ಸೇರಿ ಅನೇಕ ನಾಯಕರು ಆಗಮಿಸಿದ್ದರು. 1 ಲಕ್ಷಕ್ಕೂ ಹೆಚ್ಚು ಜನ ಆಗಮಿಸಿದ್ದರು.
ಮಂಡ್ಯದಲ್ಲಿ ಮೋದಿ ಹವಾ: ಬೆಂಗಳೂರು ಮೈಸೂರು
ಎಕ್ಸ್ಪ್ರೆಸ್ವೇ ಉದ್ಘಾಟನೆ
ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ಮೈಸೂರಿನ ಮಂಡಕಳ್ಳಿ ಏರ್ಪೋರ್ಟ್ ಮೂಲಕ ಮಂಡ್ಯಕ್ಕೆ ಆಗಮಿಸಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯದ ನಾಯಕರು ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ.
ಪ್ರವಾಸಿಮಂದಿರ ವೃತ್ತದಿಂದ ನಂದಾ ಸರ್ಕಲ್ವರೆಗೆ ರೋಡ್ಶೋ ನಡೆಯಲಿದ್ದು ರೋಡ್ ಶೋ ವೇಳೆ ಪ್ರಧಾನಿ ಮೋದಿ ಮೇಲೆ ಪುಷ್ಪಾರ್ಚನೆ ಮಾಡಲಾಗಿದೆ. ಮಾರ್ಗಮಧ್ಯೆ ಕಾರು ನಿಲ್ಲಿಸಿ ಮೋದಿ ಜನರತ್ತ ಕೈಬೀಸಿದ್ದಾರೆ.ಇಕ್ಕೆಲಗಳಲ್ಲಿ ಜನರು ಕಿಕ್ಕಿರಿದು ಸೇರಿದ್ದಾರೆ. ದೂರದೂರುಗಳಿಂದ ಬೆಳಗ್ಗಿನಿಂದಲೇ ಜನರು ಬರಲಾರಂಭಿಸಿದ್ದು, ಮೋದಿ ಮೋದಿ ಎಂದು ಘೋಷಣೆ ಕೂಗುತ್ತಾ ಮೋದಿಯವರ ಕಾರಿನತ್ತ ಹೂವಿನ ಮಳೆಯನ್ನೇ ಹರಿಸಿದರು.