- ಅಣ್ಣಾಮಲೈ ಭೇಟಿ ವಿರುದ್ಧ ಕಾಂಗ್ರೆಸ್ ಸಿಡಿಮಿಡಿ
- ಬೆಂಗಳೂರು ಜನರಿಗೆ ಮೋಸ ಮಾಡಿದ್ದ ಬಿಜೆಪಿ: ಆರೋಪ
NAMMUR EXPRESS NEWS
ಬೆಂಗಳೂರಿನಲ್ಲಿ ನೆಲೆಸಿರುವ ತೀರ್ಥಹಳ್ಳಿಗರ ಮತಕ್ಕಾಗಿ ಹತ್ತಾರು ಬಸ್ ಬುಕ್ ಮಾಡಿ ಕರೆ ತರುವ ದೊಡ್ಡ ಪ್ರಯತ್ನ ಬಿಜೆಪಿ ಮಾಡುತ್ತಿದೆ. ಬರುವವರಿಗೆ ಹಲವು ಆಮಿಷ ಒಡ್ಡುವ ಕೆಲಸವೂ ಸಾಂಗೋಪವಾಗಿ ನಡೆಯುತ್ತಿದೆ ಎನ್ನುವ ಮಾತಿದೆ. ಆದರೆ ಬರುವ ಮುನ್ನ ಈ ಮಾಹಿತಿ ನೋಡಿ ಬೆಂಗಳೂರಿನ ನಿವಾಸಿಗರೇ, ಬೆಂಗಳೂರಿನ ಶಾಶ್ವತ ಕುಡಿಯುವ ನೀರಿನ ಯೋಜನೆಯಾದ ಮೇಕೆದಾಟು ಯೋಜನೆಗೆ ಕನ್ನಡಿಗರು ಹೋರಾಟ ನಡೆಸುತ್ತಿದ್ದಾಗ, ಕಾಂಗ್ರೆಸ್ ಪಕ್ಷ ಧ್ವನಿಯಾಗಿ ಮೇಕೆದಾಟುವಿನಿಂದ ಪಾದಯಾತ್ರೆ ಹಮ್ಮಿಕೊಂಡಾಗ, ಸರ್ಕಾರವೇ ಬಜೆಟ್ ನಲ್ಲಿ ಈ ಯೋಜನೆಗೆ ಹಣ ಮೀಸಲಿರಿಸಿದಾಗ ಕರ್ನಾಟಕದ ವಿರುದ್ದ ಅಬ್ಬರಿಸಿದ್ದ, ಈ ಯೋಜನೆಯ ವಿರುದ್ದ ಉಪವಾಸ ಸತ್ಯಾಗ್ರಹ ಕೂತ ಅಣ್ಣಾಮಲೈ ಈಗ ತೀರ್ಥಹಳ್ಳಿಗೆ ಬಂದು ಶ್ರೀಯುತ ಆರಗ ಜ್ಞಾನೇಂದ್ರರವರೊಂದಿಗೆ ನಾಮಪತ್ರ ಸಲ್ಲಿಸಲು ಜೊತೆಯಾಗುತ್ತಿದ್ದಾರೆ.
ತಮಿಳುನಾಡಿನಲ್ಲಿ ನಿಂತು ಕರ್ನಾಟಕದ ವಿರುದ್ಧ ಮಾತಾಡುವ ಅಣ್ಣಾಮಲೈ ರವರನ್ನು ಕರೆತಂದು ನಾಮಪತ್ರ ಸಲ್ಲಿಸುವ ಕೃತ್ಯಕ್ಕೆ ಬಿಜೆಪಿ ಇಳಿಯಬಾರದಿತ್ತು ಎಂದು ಕಾಂಗ್ರೆಸ್ ಟೀಕೆ ಮಾಡಿದೆ.
ತೀರ್ಥಹಳ್ಳಿಯಲ್ಲಿ ಏ.18ಕ್ಕೆ ಅಣ್ಣಾ ಮಲೈ ಆಗಮಿಸಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ಹಾಗೂ ಬಹಿರಂಗ ಸಭೆ ಯಲ್ಲಿ ಭಾಗಿಯಾಗಲಿದ್ದಾರೆ.