ಶಿವಮೊಗ್ಗದಲ್ಲೇ ಮತ್ತೆ ಘರ್ಷಣೆ: ಪೊಲೀಸ್ ಬಂದೋಬಸ್ತ್!
– ಸಣ್ಣ ಪುಟ್ಟ ವಿಚಾರಕ್ಕೆ ಗಲಾಟೆ: ಇಬ್ಬರ ಬಂಧನ
– ಎನ್.ಆರ್.ಪುರದಲ್ಲಿ ರೈತ ಆತ್ಮಹತ್ಯೆ
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ಮತ್ತೆ ಯುವಕರ ನಡುವಿನ ಗಲಾಟೆ ಇದೀಗ ಪೊಲೀಸರಿಗೆ ತಲೆನೋವು ಉಂಟು ಮಾಡಿದೆ.
ಭಾನುವಾರ ನಡೆದ ಸಣ್ಣಪುಟ್ಟ ಗಲಾಟೆ ಸಂಘರ್ಷಕ್ಕೆ ತಿರುಗುವ ಸಾಧ್ಯತೆ ಹಿನ್ನೆಲೆ ಹೊರಜಿಲ್ಲೆಯಿಂದ ಪೊಲೀಸರನ್ನ ಕರೆಯಿಸಿಕೊಂಡು ನಗರದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಏನಿದು ಘಟನೆ?: ಭಾನುವಾರ ದೌಪದಮ್ಮ ವೃತ್ತ ಮತ್ತು ಟಿಪ್ಪುನಗರದಲ್ಲಿ ಯುವಕರ ಮೇಲೆ ನಡೆದ ಹಲ್ಲೆಯಲ್ಲಿ ಇಬ್ಬರಿಗೆ ಗಾಯಗಳಾಗಿವೆ. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಐಜಿಪಿ ತ್ಯಾಗರಾಜನ್ ನಗರಕ್ಕೆ ಆಗಮಿಸಿ ಸೂಕ್ಷ್ಮ ಪ್ರದೇಶದಲ್ಲಿ ರೌಂಡ್ಸ್ ಹಾಕಿದ್ದಾರೆ. ಎಡಿಜಿಪಿ ಹಿತೇಂದ್ರ ನಗರಕ್ಕೆ ಆಗಮಿಸಲಿದ್ದಾರೆ. ಅಧಿಕಾರಿಗಳ ಜೊತೆ ಸಭೆ ನಡೆಸುವ ನಿರೀಕ್ಷೆ ಇದೆ.
ಇಬ್ಬರ ಬಂಧನ: ಎರಡು ಪ್ರತ್ಯೇಕ ಘಟನೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದು ಇಬ್ಬರ ಹೆಸರು ಇನ್ನೂ ತಿಳಿದು ಬರಬೇಕಿದೆ.
ಹೊಸನಗರ: ಬಸ್ ನಿಲ್ದಾಣದಲ್ಲಿ ಶವ ಪತ್ತೆ
ರಿಪ್ಪನ್ಪೇಟೆ ಪಟ್ಟಣದ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ವಿನಾಯಕ ವೃತ್ತದಲ್ಲಿರುವ ಬಸ್ ನಿಲ್ದಾಣದಲ್ಲಿ ಸುಮಾರು 60 ವರ್ಷದ ಪಟ್ಟಣದಲ್ಲಿ ಛತ್ರಿ ರಿಪೇರಿ ಮಾಡಿಕೊಂಡಿದ್ದ ವ್ಯಕ್ತಿ ಮಲಗಿದ್ದಲ್ಲಿಯೇ ಮೃತಪಟ್ಟಿದ್ದಾರೆ. ಹೃದಯಾಘಾತದಿಂದ ಮೃತಪಟ್ಟಿರಬಹುದು ಎನ್ನಲಾಗುತ್ತಿದೆ. ಸ್ಥಳಕ್ಕೆ ಪಿಎಸ್ಐ ಎಸ್.ಪಿ ಪ್ರವೀಣ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಮೃತನನ್ನು ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ಕಾರೆಹೊಂಡದ ಗಂಗಪ್ಪ ಎನ್ನಲಾಗಿದೆ.
ಸಾಲದ ಬಾಧೆ ತಾಳದೆ ರೈತ ಆತ್ಮಹತ್ಯೆ
ನರಸಿಂಹರಾಜಪುರ ತಾಲೂಕಿನ ಸಿಂಸೆ ಗ್ರಾಮದ ಚಿಟ್ಟೋಡಿಯ ಕೃಷ್ಣಮೂರ್ತಿ (67) ಎಂಬಬಾತತ ಸಾಲಬಾಧೆ ತಾಳದೇ ಪ್ಲಾಂಟೇಶನ್ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ. ಬ್ಯಾಂಕು ಹಾಗೂ ಇತರೆ ಸಂಘ ಸಂಸ್ಥೆಗಳಲ್ಲಿ ಸಾಲ ಮಾಡಿಕೊಂಡಿದ್ದರು. ಶುಕ್ರವಾರ ಸಂಜೆ ಅಂತ್ಯಕ್ರಿಯೆ ನಡೆಯಿತು. ಪೊಲೀಸರು ರೈತ ಆತ್ಮಹತ್ಯೆ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ನೋಂದಣಿಗೆ ಹೊಸ ಲಿಂಕ್!
HOW TO APPLY : NEET-UG COUNSELLING 2023