ಶಿವಮೊಗ್ಗದಿಂದ ವಿಮಾನ ಯಾನ ಫಿಕ್ಸ್!
– ಎಲ್ಲೆಲ್ಲಿಗೆ ಹಾರುತ್ತೆ ವಿಮಾನ? ಇಲ್ಲಿದೆ ಡೀಟೇಲ್ಸ್
– ಆಗಸ್ಟ್ 11ರಿಂದ ವಿಮಾನ ಹಾರಾಟ ಆರಂಭ
NAMMUR EXPRESS NEWS
ಶಿವಮೊಗ್ಗದ ಸೋಗಾನೆಯಲ್ಲಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟಕ್ಕೆ ದಿನಾಂಕ ನಿಗದಿಯಾಗಿದೆ. ಈ ಮಧ್ಯೆ ಉಡಾನ್ ಯೋಜನೆ ಅಡಿ ಶಿವಮೊಗ್ಗದಿಂದ ಇನ್ನೂ ನಾಲ್ಕು ಮಾರ್ಗದಲ್ಲಿ ವಿಮಾನ ಹಾರಾಟಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆಗಸ್ಟ್ 11ರಿಂದ ಶಿವಮೊಗ್ಗದಿಂದ ವಿಮಾನ ಹಾರಾಟ ಆರಂಭವಾಗಲಿದೆ.
ಶಿವಮೊಗ್ಗ – ಬೆಂಗಳೂರು ಮಧ್ಯೆ ವಿಮಾನಯಾನ ಸೇವೆ ಶುರುವಾಗಲಿದೆ. ಈ ಸಂಬಂಧ ಇಂಡಿಗೋ ಸಂಸ್ಥೆ ಈಗಾಗಲೇ ಒಪ್ಪಂದ ಮಾಡಿಕೊಂಡಿದ್ದು, ವಿಮಾನ ಹಾರಾಟಕ್ಕೆ ಸಿದ್ಧತೆ ನಡೆಸುತ್ತಿದೆ. ಇನ್ನೊಂದೆಡೆ ನಾಲ್ಕು ಹೊಸ ಮಾರ್ಗದಲ್ಲಿ ವಿಮಾನ ಹಾರಾಟಕ್ಕೆ ಒಪ್ಪಿಗೆ ಸಿಕ್ಕಿದೆ.
ನಾನ್ ರೀಜನಲ್ ಕನೆಕ್ಟಿವಿಟಿ ಸ್ಕೀಮ್ ಅಡಿಯಲ್ಲಿ ನಾಲ್ಕು ಮಾರ್ಗದಲ್ಲಿ ವಿಮಾನ ಹಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. 11 ಮಾರ್ಗವನ್ನು ಪರಿಗಣಿಸುವಂತೆ ವಿಮಾನಯಾನ ಸಚಿವಾಲಯಕ್ಕೆ ಮನವಿ ಮಾಡಿದ್ದೆ. ಈಗ ನಾಲ್ಕು ಮಾರ್ಗದಲ್ಲಿ ವಿಮಾನ ಹಾರಾಟಕ್ಕೆ ಅನುಮತಿ ಲಭಿಸಿದೆ.
ಎಲ್ಲೆಲ್ಲಿಗೆ ವಿಮಾನ?
ರೂಟ್ 1 – ಹೈದರಾಬಾದ್ – ಶಿವಮೊಗ್ಗ – ಗೋವಾ – ಶಿವಮೊಗ್ಗ – ತಿರುಪತಿ – ಶಿವಮೊಗ್ಗ – ಹೈದರಾಬಾದ್
ರೂಟ್ 2 – ಹೈದರಾಬಾದ್ – ಶಿವಮೊಗ್ಗ – ದೆಹಲಿ – ಶಿವಮೊಗ್ಗ – ಚೆನ್ನೈ – ಶಿವಮೊಗ್ಗ – ಬೆಂಗಳೂರು – ಶಿವಮೊಗ್ಗ – ಹೈದರಾಬಾದ್
ರೂಟ್ 3 – ಹೈದರಾಬಾದ್ – ಶಿವಮೊಗ್ಗ – ಹೈದರಾಬಾದ್
ರೂಟ್ 4 – ಬೆಂಗಳೂರು – ಸೇಲಂ – ಕೊಚ್ಚಿನ್ – ಸೇಲಂ – ಬೆಂಗಳೂರು – ಶಿವಮೊಗ್ಗ – ಬೆಂಗಳೂರು
ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!
HOW TO APPLY : NEET-UG COUNSELLING 2023