ಮಾದಕ ವ್ಯಸನ ಮುಕ್ತಗೊಳಿಸಲು ಜನ ಜಾಗೃತಿ!
– ಆಶಾಕಿರಣ ಸಮಗ್ರ ಪುನರ್ವಸತಿ ಕೇಂದ್ರದ ಸಹಯೋಗ
NAMMUR EXPRESS NEWS
ಶಂಕರಘಟ್ಟ: ಆಶಾಕಿರಣ ಸಮಗ್ರ ಪುನರ್ವಸತಿ ಕೇಂದ್ರವು ಅಂತರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಮತ್ತು ಅಕ್ರಮ ಸಾಗಾಟದ ವಿರುದ್ಧ ದಿನದ ಅಂಗವಾಗಿ ಸೋಮವಾರ ಜಾಗೃತಿ ಕಾರ್ಯಕ್ರಮವನ್ನು ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ – ಶಂಕರಘಟ್ಟ ಶಿವಮೊಗ್ಗ ಮತ್ತು ಸಮಾಜ ಕಾರ್ಯ ವಿಭಾಗ – ಸಹ್ಯಾದ್ರಿ ಕಲಾ ಕಾಲೇಜು ಶಿವಮೊಗ್ಗ. ಸಹಯೋಗದಲ್ಲಿ ಆಯೋಜಿಸಲಾಗಿತ್ತು.
ಸಮಾಜವನ್ನು ಮಾದಕ ವ್ಯಸನ ಮುಕ್ತಗೊಳಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಆರಂಭಿಸಲಾಯಿತು. ಕಾರ್ಯಕ್ರಮದಲ್ಲಿ ಆಶಾಕಿರಣ ಐಆರ್ಸಿಎ ನಿರ್ದೇಶಕ ಫಾ. ಪ್ರಕಾಶ್ ಪಿಂಟೋ, ಡಾ.ಶ್ರೇಯಸ್ ಹರೀಶ್ ದೇಲಂತಬೆಟ್ಟು, ಕುಮಾರ್ ಸ್ವಾಮಿ ಎಸ್ ಎಸ್ (ಸಮಾಜಕಾರ್ಯ ವಿಭಾಗದ ಉಪನ್ಯಾಸಕರು ಸಹ್ಯಾದ್ರಿ ಕಾಲೇಜು, ಶಿವಮೊಗ್ಗ), ಡಾ.ಹರೀಶ್ ದೇಲಂತಬೆಟ್ಟು (ಮನೋವೈದ್ಯ, ಭದ್ರಾವತಿ) ಭಾಗವಹಿಸಿದ್ದರು. ದೀಪ ಬೆಳಗಿಸಿ ನಂತರ ಸಭಿಕರನ್ನುದ್ದೇಶಿಸಿ ಡಾ.ಶ್ರೇಯಸ್ ಹರೀಶ್ ದೇಲಂತಬೆಟ್ಟು ಮಾದಕ ವಸ್ತು ಸೇವನೆ ವಿರುದ್ಧ ಮಾತನಾಡಿದರು ನಂತರ ಡಾ.ಹರೀಶ್ ದೇಲಂತಬೆಟ್ಟು (ಮನೋವೈದ್ಯ, ಭದ್ರಾವತಿ) ಮಾದಕ ವಸ್ತುಗಳ ವಿರುದ್ಧ ಪ್ರತಿಜ್ಞಾವಿಧಿ ಬೋಧಿಸಿದರು. ,
ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದ ಸಚಿನ್ ಹೆಚ್.ಎಸ್, ಸ್ಯಾಂಡ್ರ ಸ್ಟಾನ್ಲಿ , ಅಭಿಷೇಕ್ ಎಂ ನಾಯ್ಕ್. ಕಾರ್ತಿಕ್ ಜೆ ಆರ್, ಮನೋಜ್ ಆರ್, ಅನುಷ ಎ ಜೆ. ಪ್ರೀತಿ ಎನ್ ಎಸ್, ಮದನ್ ಡಿ ಎಂ ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ನಾಟಕ ದಲ್ಲಿ ಭಾಗವಹಿಸಿದ್ದರು. ಸಮಾಜಕಾರ್ಯ ವಿಭಾಗದ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳು ನೃತ್ಯ ಮತ್ತು ಗಾಯನದಲ್ಲಿ ಪಾಲ್ಗೊಂಡರು.
ಆಶಾಕಿರಣ ಐಆರ್ಸಿಎ ನಿರ್ದೇಶಕ ಫಾ. ಪ್ರಕಾಶ್ ಪಿಂಟೋ ಅವರು ಮಾದಕ ವಸ್ತುವಿನ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ವಿದ್ಯಾರ್ಥಿಗಳು, ಸಿಬ್ಬಂದಿಗಳು ಮತ್ತು ರೋಗಿಗಳಲ್ಲಿ ಮಾದಕ ವಸ್ತುಗಳ ವಿರುದ್ಧ ಪ್ರತಿಜ್ಞೆ ಬೋಧಿಸಿದರು. ರೋಗಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅನುಭವ ಹಂಚಿಕೊಂಡರು. ರೋಗಿಗಳು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಆಶಾಕಿರಣ ಐಆರ್ಸಿಎ ಗೀತೆಯನ್ನು ಹಾಡುವುದರೊಂದಿಗೆ ಕಾರ್ಯಕ್ರಮವು ಕೊನೆಗೊಂಡಿತು.
ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!
HOW TO APPLY : NEET-UG COUNSELLING 2023