ಶಿವಮೊಗ್ಗ ಡಿಸಿಸಿ ಬ್ಯಾಂಕ್ ಹಗರಣ ಮತ್ತೆ ತನಿಖೆ?!
– 62 ಕೋಟಿ ಬಂಗಾರದ ಸಾಲ ಪ್ರಕರಣಕ್ಕೆ ಹೊಸ ಟ್ವಿಸ್ಟ್
– ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯ ಎಂಟ್ರಿ
– ಯಾರಿಗೆ ಸುತ್ತಲಿದೆ ತನಿಖೆ ಉರುಳು?!
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ನಗರದ ಡಿಸಿಸಿ ಬ್ಯಾಂಕಿನಲ್ಲಿ ನಡೆದಿದ್ದ 62 ಕೋಟಿ ರೂಪಾಯಿ ಬಂಗಾರದ ಅಡಮಾನ ಸಾಲ ಪ್ರಕರಣಕ್ಕೆ ದೇಶದ ಆರ್ಥಿಕ ಅವ್ಯವಹಾರಗಳ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯ ಎಂಟ್ರಿಯಾಗುವ ಸಾಧ್ಯತೆ ಇದೆ.
ಸಾಕ್ಷಿ ಎಂಬಂತೆ ಸದ್ಯ ಜಾರಿ ನಿರ್ದೇಶನಾಲಯದ ಬೆಂಗಳೂರು ಪ್ರಾದೇಶಿಕ ಕಚೇರಿಯ ಸಹಾಯಕ ನಿರ್ದೇಶಕ ಅಜಯ್ ಚೌದರಿ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಿಗೆ ಪ್ರಮುಖ ಮಾಹಿತಿಗಳನ್ನು ಮೂರು ದಿನಗಳಲ್ಲಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ತನಿಖೆಯಲ್ಲಿ ಕೇಳಿದ್ದೇನು?
ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಗರ ಶಾಖೆಗೆ ಸಂಬಂಧಿಸಿದ 2012 ರಿಂದ 2014 ರ ಅವಧಿಯ, 62 ಕೋಟಿ ರೂಪಾಯಿ ಬಂಗಾರ ಅಡಮಾನದ ಪ್ರಕರಣಕ್ಕೆ ಸಂಬಂಧಿಸಿದ 34 ಸಾಲ ಖಾತೆಗಳಿಗೆ ಸಂಬಂಧಿಸಿದ ಎಲ್ಲಾ ಕೆವೈಸಿ ದಾಖಲೆಗಳನ್ನು ಸಲ್ಲಿಸಬೇಕು
ಹಗರಣ ನಡೆದ ಅವಧಿಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ, ಆಡಳಿತ ಮಂಡಳಿ ನಿರ್ದೇಶಕರೆಲ್ಲರ ಹೆಸರು, ವಿಳಾಸ, ಫೋನ್ ನಂ,, ಈ-ಮೇಲ್ ಐಡಿ ಹಾಗೂ ಅವರುಗಳ ಹೊಣೆ ವಿವರ ನೀಡುವಂತೆ ಸೂಚಿಸಲಾಗಿದೆ.
ಸದರಿ ಅವಧಿಯಲ್ಲಿನ ಡಿಸಿಸಿ ಬ್ಯಾಂಕಿನ ಜನರಲ್ ಮ್ಯಾನೇಜರ್, ಉಪ ಮತ್ತು ಸಹಾಯಕ ಜನರಲ್ ಮ್ಯಾನೇಜರ್ ಆಗಿದ್ದವರು, ಶಾಖಾ ವ್ಯವಸ್ಥಾಪಕರು, ಸಿಇಒ, ಕ್ಯಾಷಿಯರ್, ಬಂಗಾರದ ವ್ಯಾಲ್ಯುಯರ್ ಆಗಿದ್ದವರ ಹೆಸರು, ವಿಳಾಸ, ಫೋನ್ ನಂ.ಈ-ಮೇಲ್ ಐಡಿ, ಅವರುಗಳ ಜವಾಬ್ದಾರಿ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ.
ಜೊತೆಗೆ ಸದರಿ ಬ್ಯಾಂಕ್ ಶಾಖೆಯ ಹಾಲಿ ಶಾಖಾ ವ್ಯವಸ್ಥಾಪಕರ ವಿವರ ನೀಡಬೇಕೆಂದು ಸೂಚಿಸಲಾಗಿದೆ.
ಏನಿದು ಪ್ರಕರಣ?
ಡಿಸಿಸಿ ಬ್ಯಾಂಕ್ ನಲ್ಲಿ 2014 ರಲ್ಲಿ ನಡೆದಿರುವ 62 ಕೋಟಿ ರೂ. ಬಂಗಾರದ ಅಡಮಾನ ಸಾಲದ ಹಗರಣ ದೇಶದ ಗಮನ ಸೆಳೆದಿತ್ತು. ಚಿನ್ನವನ್ನೆ ಅಡಮಾನವಾಗಿ ಇಡದೇ ಹಾಗೂ ನಕಲಿ ಬಂಗಾರವನ್ನು ಅಡಮಾನವಾಗಿ ಇಟ್ಟು ಸಾಲ ಹಾಗೂ ನಕಲಿ ಬಂಗಾರವನ್ನು ಅಡಮಾನವಾಗಿ ಇಟ್ಟು ಸಾಲ ನೀಡಿದ್ದ ಘಟನೆ ಬೆಳಕಿಗೆ ಬಂದಿತ್ತು. ಅಲ್ಲದೆ ಈ ಸಂಬಂಧ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಡಿಸಿಸಿ ಎಂಡಿ ದೂರು ಕೊಟ್ಟಿದ್ದರು. ಆಗಿನ ಎಸ್ಪಿ ಕೌಶಲೇಂದ್ರ ಕುಮಾ ಈ ಪ್ರಕರಣ ವಿಶೇಷ ತಂಡ ರಚಿಸಿ 18 ಮಂದಿ ಬಂಧಿಸಿದ್ದರು. ನಂತರ ಪ್ರಕರಣ ಸಿಒಡಿಗೆ ತೆಕ್ಕೆಗೆ ಹೋಗಿದ್ದು, ಅಲ್ಲಿ ಕೆಲವರಿಗೆ ಕ್ಲೀನ್ ಚಿಟ್ ಸಿಕ್ಕಿದ್ದು, ಇನ್ನೂ ಕೆಲವರ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆಯಾಗಿತ್ತು. ಇದರ ನಡುವೆ ಸಹಕಾರಿ ಇಲಾಖೆಯು ಸಹಕಾರ ಸಂಘಗಳ ಜಂಟಿ ನಿಬಂಧಕರು ಪಾಂಡುರಂಗ ಗರ್ಗ್ ಪ್ರಕರಣ ಇಲಾಖಾ ತನಿಖೆ ನಡೆಸಿ ವರದಿ ಸಲ್ಲಿಸಿದ್ದರು. ಅವ್ಯವಹಾರದಿಂದ ಬ್ಯಾಂಕ್ಗೆ ಆಗಿರುವ ನಷ್ಟವನ್ನು ಆಪಾದಿತರಿಂದ ವಸೂಲಿ ಮಾಡಬೇಕು ಎಂದು ಸಹಕಾರ ಸಂಘಗಳ ಜಂಟಿ ನಿಬಂಧಕರು ವರದಿಯಲ್ಲಿ ತಿಳಿಸಿದ್ದರು.
ಇದೆ ಕಾರಣಕ್ಕೆ ಆಡಳಿತ ಮಂಡಳಿಯ ಏಳು ಮಂದಿಯನ್ನು ಅನರ್ಹಗೊಳಿಸಿದ್ದರು. ಆನಂತರ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಅಲ್ಲಿ ಆಡಳಿತ ಮಂಡಳಿಯ ಸದಸ್ಯರ ಅನರ್ಹತೆಯನ್ನು ರದ್ದುಗೊಳಿಸಲಾಗಿತ್ತು. ಸದ್ಯ ಈ ಪ್ರಕರಣ ಸಂಬಂಧ ಜಾರಿನಿರ್ದೇಶನಾಲಯ ವಿವಿಧ ಮಾಹಿತಿಗಳನ್ನು ಕೇಳಿರುವುದು ಗಮನಾರ್ಹವಾಗಿದೆ.ಈ ನಿಟ್ಟಿನಲ್ಲಿ ಪ್ರಿವೆನ್ನನ್ ಆಫ್ ಮನಿ ಲಾಂಡರಿಂಗ್ ಕಾಯ್ದೆ 2003ರ ಸೆಕ್ಷನ್ 54ರಡಿ ಜಾರಿ ನಿರ್ದೇಶನಾಲಯ ನಕಲಿ ಬಂಗಾರ ಸಾಲ ಹಗರಣದ ತನಿಖೆ ನಡೆಸುವ ಸಾಧ್ಯತೆ ಇದೆ.
ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!
HOW TO APPLY : NEET-UG COUNSELLING 2023