ಕಿಮ್ಮನೆ ಉಪವಾಸ ಸತ್ಯಾಗ್ರಹ ಯಶಸ್ವಿಯಾಯ್ತು!
– ಬಿಜೆಪಿ ಭರವಸೆ ಈಡೇರಿಸಿ ಆಮೇಲೆ ಮಾತನಾಡಲಿ
– ಜನರ ಬದುಕಿನ ಮೇಲೆ ಬರೆ ಎಳೆದಿದ್ದೇ ಬಿಜೆಪಿ ಸಾಧನೆ: ಕಿಮ್ಮನೆ
NAMMUR EXPRESS NEWS
ಶಿವಮೊಗ್ಗ: 9 ವರ್ಷ ಕಳೆದರೂ ಕೇಂದ್ರ ಸರ್ಕಾರ ತನ್ನ ಭರವಸೆ ಈಡೇರಿಸಿಲ್ಲ. ಮೊದಲು ತಾವು ಕೊಟ್ಟ ಭರವಸೆ ಈಡೇರಿಸಿ ಆಮೇಲೆ ಕಾಂಗ್ರೆಸ್ ಬಗ್ಗೆ ಮಾತನಾಡಿ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.
ಶಿವಮೊಗ್ಗ ಗಾಂಧಿ ಪಾರ್ಕ್ ಅಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ ಅವರು, ಬಿಜೆಪಿ ಕೊಟ್ಟ ಯಾವ ಭರವಸೆಗಳನ್ನೂ ಈಡೇರಿಸಿಲ್ಲ. ಮನೆಗಳನ್ನು ಹಂಚಿಕೆ ಮಾಡಲಿಲ್ಲಿ. ಉದ್ಯೋಗ ಕೊಡಲಿಲ್ಲ. ಡಾಲರ್ ದರ ಕಡಿಮೆ ಮಾಡುವುದಾಗಿ ಘೋಷಿಸಿದ್ದರು. ಅದನ್ನೂ ಮಾಡಿಲ್ಲ. ಈಗ ಕಾಂಗ್ರೆಸ್ ತನ್ನ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು ಅದನ್ನು ಇವರಿಗೆ ನೋಡಲು ಆಗುತ್ತಿಲ್ಲ ಎಂದು ಆರೋಪಿಸಿದರು.
ಹಿಂದು ಧರ್ಮದ ಪ್ರತಿಪಾದಕ ಗಾಂಧೀಜಿಯವರನ್ನೇ ದೂರ ತಳ್ಳುತ್ತಿದ್ದಾರೆ. ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವ ಧೈರ್ಯವು ಇಲ್ಲ. ಹಿಂದು ಧರ್ಮದಲ್ಲಿ ಇರುವ ನ್ಯೂನತೆ ಸರಿಪಡಿಸುವ ಬಗ್ಗೆ ಮಾತಾಡುವುದೇ ಇಲ್ಲ ಎಂದು ದೂರಿದರು.
ಕೇಂದ್ರ ಸರ್ಕಾರದ ವಿರುದ್ಧ ಕಿಮ್ಮನೆ ಅವರು ಉಪವಾಸ ನಡೆಸಿದರು. ಇನ್ನು ಹಲವು ಮುಖಂಡರು ಸಾಥ್ ನೀಡಿದರು. ಕಾರ್ಯಕರ್ತರು ಗಾಂಧಿ ಪಾರ್ಕ್ನಲ್ಲಿ ಸಂಜೆವರೆಗೆ ಧರಣಿ ನಡೆಸಿ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್, ಪ್ರಮುಖರಾದ ಆರ್.ಎಂ. ಮಂಜುನಾಥ್ ಗೌಡ, ಆರ್. ಪ್ರಸನ್ನಕುಮಾರ್, ಎನ್. ರಮೇಶ್, ಎಸ್.ಪಿ. ದಿನೇಶ್, ವಿಜಯಕುಮಾರ್, ಹೆಚ್.ಸಿ. ಯೋಗೇಶ್, ಚಂದ್ರಭೂಪಾಲ್, ವಿಜಯ್, ಕಲೀಂ ಪಾಷಾ, ಇಸ್ಮಾಯಿಲ್ ಖಾನ್, ವಿನೋದ್ಕುಮಾರ್, ಕಲಗೋಡು ರತ್ನಾಕರ್, ಹೆಚ್.ಪಿ.ಗಿರೀಶ್, ಕೆ. ದೇವೇಂದ್ರಪ್ಪ, ವಿನಯ್ ತಾಂಡ್ಲೆ, ಬಾಲಾಜಿ ಶೆಟ್ಟಿ, ವಿಶ್ವನಾಥಕಾಶಿ, ಮಧುಸೂದನ್, ಚೇತನ್, ಸುವರ್ಣ ನಾಗರಾಜ್, ನಾಗರಾಜ್, ಮಂಜುನಾಥ್ ಪುರಲೆ, ಆರೀಫ್, ಯಮುನಾ ರಂಗೇಗೌಡ, ಕವಿತಾ ರಾಘವೇಂದ್ರ, ವೇದಾ ವಿಜಯಕುಮಾರ್ ಮತ್ತಿತರರಿದ್ದರು
ಇದನ್ನೂ ಓದಿ : ಲಕ್ಷಕ್ಕೆ ಬರುತ್ತಾ ಅಡಿಕೆ ದರ?
HOW TO APPLY : NEET-UG COUNSELLING 2023