ತೀರ್ಥಹಳ್ಳಿಯ ಹಲವು ಹಳ್ಳಿಗಳಿಗೆ ಸರ್ಕಾರಿ ಬಸ್!
– ಸಾರಿಗೆ ಸಚಿವರಿಗೆ ಮಂಜುನಾಥ ಗೌಡ ಪತ್ರ
– ಎಲ್ಲೆಲ್ಲಿಗೆ ಬಸ್ ಬಿಡಲು ಮನವಿ… ಇಲ್ಲಿದೆ ಡೀಟೇಲ್ಸ್
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಕೆಲವು ಭಾಗಗಳಿಗೆ ಸರ್ಕಾರಿ ಬಸ್ ಕಲ್ಪಿಸುವಂತೆ ಸಾರಿಗೆ ಸಚಿವರಿಗೆ ಸಹಕಾರಿ ನಾಯಕ, ಮಾಜಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಡಾ.ಆರ್.ಎಂ.ಮಂಜುನಾಥ್ ಗೌಡ ಅವರು ಪತ್ರ ಬರೆದು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಬಹುತೇಕ ಕಡೆ ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಅನುಕೂಲ ಆಗುತ್ತಿದೆ. ಆದ್ದರಿಂದ ತೀರ್ಥಹಳ್ಳಿ ಭಾಗದವರಿಗೂ ಅನುಕೂಲ ಆಗುವಂತೆ ಅನೇಕ ಮಾರ್ಗದಲ್ಲಿ ಸರ್ಕಾರಿ ಬಸ್ ಬಿಡುವಂತೆ ಮನವಿ ಮಾಡಲಾಗಿದೆ.
ಈ ಭಾಗಗಳಲ್ಲಿ ಸರ್ಕಾರಿ ಸಾರಿಗೆ ಬಸ್ಸಿನ ವ್ಯವಸ್ಥೆ ಕಲ್ಪಿಸುವುದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ, ರೈತರಿಗೆ, ಮಹಿಳೆಯರಿಗೆ, ಕೆಲಸ ನಿರ್ವಹಿಸುವ,ಯುವಕ ಯುವತಿಯರಿಗೆ ಗ್ರಾಮೀಣ ಜನತೆಯ ಅನುಕೂಲಕ್ಕಾಗಿ ತಕ್ಷಣ ಈ ಮಾರ್ಗಗಳಿಗೆ ಸರ್ಕಾರಿ ಸಾರಿಗೆ ಬಸ್ಸಿನ ವ್ಯವಸ್ಥೆ ಕಲ್ಪಿಸಬೇಕು, ಈ ಮಾರ್ಗಗಳಲ್ಲಿ ಖಾಸಗಿ ಬಸ್ಸಿನ ವ್ಯವಸ್ಥೆಯು ಸಹ ಇರುವುದಿಲ್ಲ ಈ ಬಗ್ಗೆ ತಕ್ಷಣ ಗಮನ ಹರಿಸಿ ತೀರ್ಥಹಳ್ಳಿಯ ಜನತೆಯ ಪ್ರಯಾಣದ ಅನುಕೂಲಕ್ಕಾಗಿ ಸರ್ಕಾರಿ ಸಾರಿಗೆ ಬಸ್ ಸಂಪರ್ಕ ಕಲ್ಪಿಸಬೇಕು ಎಂಬುದಾಗಿ ಸರ್ಕಾರದ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗ ರೆಡ್ಡಿ ಅವರಿಗೆ ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕರು, ಮಾಜಿ ಅಧ್ಯಕ್ಷ ಬ್ಯಾಂಕ್ ಅಧ್ಯಕ್ಷರಾದ ಆರ್.ಎಂ.ಮಂಜುನಾಥ್ ಗೌಡರು ಮನವಿ ಮಾಡಿಕೊಂಡಿದ್ದಾರೆ..
ಎಲ್ಲೆಲ್ಲಿಗೆ ಬಸ್ ಬಿಡಲು ಮನವಿ?
1.ಆಗುಂಬೆ- ಬಿದರಗೋಡು- ಗುಡ್ಡೇಕೇರಿ -ತೀರ್ಥಹಳ್ಳಿ.
2.ಕೊಲ್ಲೂರು- ನಗರ- ತೀರ್ಥಹಳ್ಳಿ- ಶಿವಮೊಗ್ಗ.
3.ಶೃಂಗೇರಿ- ಬೇಗಾರು- ಕಮ್ಮರಡಿ ತೀರ್ಥಹಳ್ಳಿ- ಶಿವಮೊಗ್ಗ.
4.ಹುಂಚ-ಕೋಣಂದೂರು- ತೀರ್ಥಹಳ್ಳಿ-ಹಣಗೇರಿ- ಶಿವಮೊಗ್ಗ.
5.ಮೃಗವದೆ- ಕಟ್ಟೆ ಹಕ್ಕಲು- ದೇವಂಗಿ- ತೀರ್ಥಹಳ್ಳಿ- ಶಿವಮೊಗ್ಗ.
ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ..ಕಾಳು ಮೆಣಸು ದರ ಎಷ್ಟು?
HOW TO APPLY : NEET-UG COUNSELLING 2023