ಮಳೆ ನಡುವೆ ಮನೆಗೆ ನುಗ್ಗಿದ ಕಳ್ಳರು!
– ಬೆಜ್ಜವಳ್ಳಿಯಲ್ಲಿ ಎರಡು ಮನೆ ಕಳ್ಳತನ ಯತ್ನ
– ಕೋಣಂದೂರಲ್ಲಿ ಶವ ಸಂಸ್ಕಾರಕ್ಕೆ ಮಳೆ ಅಡ್ಡಿ
– ಮಳೆ ಹಿನ್ನೆಲೆ: ಹೊಸನಗರ ಕೆಲ ಶಾಲೆಗಳಿಗೆ ರಜೆ
NAMMUR EXPRESS NEWS
ತೀರ್ಥಹಳ್ಳಿ: ಮಳೆ ನಡುವೆ ಕಳ್ಳರು ತಮ್ಮ ಕರಾಮತ್ತು ಶುರು ಮಾಡಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿಯಲ್ಲಿ ಚಾಲಕ ಇಮಿಯಾಜ್ ಹಾಗೂ ಶಾಂತ ಎಂಬುವರ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಗುರುವಾರ ರಾತ್ರಿ ನಡೆದಿದೆ. ಇಮ್ಮಿಯಾಜ್ ಅವರ ಮನೆಯ ಬೆಳಗಿನ ಜಾವಾ 3.30ರ ಸಮಯದಲ್ಲಿ ಹಂಚು ತೆಗೆದು ಕೆಳಗೆ ಇಳಿದಿದ್ದಾರೆ.
ಆ ಸಮಯದಲ್ಲಿ ಗಾಜು ಹೊಡೆದು ಹೋಗಿದ್ದು ಶಬ್ದ ಆದ ತಕ್ಷಣಕ್ಕೆ ಮನೆಯವರು ಎದ್ದು ನೋಡಿದಾಗ ಎಚ್ಚರಗೊಂಡಿರುವ ಮನೆಯವರನ್ನು ಕಂಡು ಹಿಂಭಾಗಲಿನಿಂದ ಕಳ್ಳರು ಓಡಿದ್ದಾರೆ. ಬಳಿಕ
ಶಾಂತ ಎಂಬುವರ ಮನೆಯೊಳಗೆ ನುಗ್ಗಿದ್ದಾರೆ. ಅಪರಿಚಿತ ವ್ಯಕ್ತಿಯನ್ನು ಕಂಡು ಮನೆಯವರು ಕಿರುಚಿದ ಕೂಡಲೇ ಮೊಬೈಲನ್ನು ಕದ್ದು ಕಳ್ಳರು ಓಡಿ ಹೋಗಿದ್ದಾರೆ. ಮಾಳೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಶವ ಸಂಸ್ಕಾರಕ್ಕೆ ಮಳೆ ಅಡ್ಡಿ!
ತೀರ್ಥಹಳ್ಳಿ ತಾಲೂಕು ಕೋಣಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಕೆರೆ ಗ್ರಾಮದಲ್ಲಿರುವ ಸ್ಮಶಾನದಲ್ಲಿ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆ ನಡೆಸಲು ಸಂಬಂಧಿಕರು ಪರದಾಟ ನಡೆಸಿದ್ದಾರೆ. ಮಳೆಗೆ ಮೇಲ್ಬಾವಣಿಯ ಶೀಟುಗಳು ಹಾರಿ ಹೋಗಿದ್ದು, ಮಳೆಯ ನೀರು ಚಿತೆಯ ಮೇಲೆಯೇ ಬಿದ್ದಿದೆ.ಸ್ಮಶಾನದಲ್ಲಿ ಸೂಕ್ತ ವ್ಯವಸ್ಥೆ ಹಾಗೂ ನಿರ್ವಹಣೆ ಇಲ್ಲದೆ ಇರುವುದರಿಂದ ಈ ರೀತಿ ಸಮಸ್ಯೆ ಆಗಿದೆ.
ಹೊಸನಗರದ ಕೆಲವೆಡೆ ಶಾಲೆ ಕಾಲೇಜುಗಳಿಗೆ ರಜೆ!
ಹೊಸನಗರ ತಾಲೂಕಿನ ನಗರ ಹೋಬಳಿ ಮತ್ತು ನಿಟ್ಟೂರು ಕ್ಲಸ್ಟರ್ ವ್ಯಾಪ್ತಿಯಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿದ್ದು ಅಲ್ಲಲ್ಲಿ ಜೋರಾಗಿ ಗಾಳಿ ಸಹ ಬೀಸುತ್ತಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತಾ ಹಿತದೃಷ್ಟಿಯಿಂದ ಶನಿವಾರ ಶಾಲೆಗಳಿಗೆ ರಜೆ ಘೋಷಿಸಲು ಬಿಇಒ ಅನುಮತಿ ನೀಡಿದ್ದಾರೆ.
ಈ ಬಗ್ಗೆ ಜಿಲ್ಲಾ ಉಪನಿರ್ದೇಶಕರೊಂದಿಗೆ ಚರ್ಚಿಸಿರುವ ಅವರು, ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ ಎಸ್ ಡಿ ಎಂ ಸಿ ಮತ್ತು ಶಾಲಾ ಆಡಳಿತ ಮಂಡಳಿ ಹಂತದಲ್ಲಿ ಚರ್ಚಿಸಿ ರಜೆ ನೀಡುವುದು ಅಗತ್ಯ ಎನಿಸಿದಲ್ಲಿ ಕೂಡಲೇ ತೀರ್ಮಾನಿಸಿ ಮುಂದೆ ಶಾಲಾ ದಿನಗಳನ್ನು ಸರಿದೂಗಿಸುವ ಷರತ್ತಿಗೆ ಒಳಪಟ್ಟು ಶನಿವಾರ ರಜೆ ಘೋಷಣೆ ಮಾಡಲು ಅನುಮತಿ ನೀಡಲಾಗಿದೆ ಎಂದು ಹೊಸನಗರ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಇದನ್ನೂ ಓದಿ : ರೈತರಿಗೆ ಶೂನ್ಯ ಬಡ್ಡಿದರದಲ್ಲಿ 5 ಲಕ್ಷವರೆಗೆ ಸಾಲ!
HOW TO APPLY : NEET-UG COUNSELLING 2023