ಶೃಂಗೇರಿ ಶಾಸಕ ರಾಜೇಗೌಡರಿಗೆ ಮಹತ್ವದ ಸ್ಥಾನ?
– ಸರ್ಕಾರದ ಮಟ್ಟದಲ್ಲಿ ಕ್ಯಾಬಿನೆಟ್ ದರ್ಜೆ ಹುದ್ದೆ ಸಾಧ್ಯತೆ
– ಡಾ.ಅಂಶುಮಂತ್ ಅವರಿಗೂ ಮಹತ್ವದ ಸ್ಥಾನ
NAMMUR EXPRESS NEWS
ಚಿಕ್ಕಮಗಳೂರು: ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆ ನಡೆದು ಇದೀಗ ಹೊಸ ಸರ್ಕಾರ ಬಂದಿದೆ.
ಅನೇಕ ಅರ್ಹ ಶಾಸಕರು ತಮ್ಮ ಸಾಮಾಜಿಕ ಸೇವೆ ಮತ್ತು ಪಕ್ಷ ನಿಷ್ಠೆಯಿಂದ ಮತ್ತೆ ಗೆದ್ದು ಬಂದಿದ್ದಾರೆ. ಅಂತಹ ಶಾಸಕರಲ್ಲಿ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಕೂಡ ಒಬ್ಬರು.
ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಜತೆಗೆ ರಾಜೇಗೌಡ ಅವರು ಎರಡನೇ ಬಾರಿಗೆ ವಿಧಾನ ಸಭೆ ಪ್ರವೇಶ ಮಾಡಿದ್ದಾರೆ. ಎಲ್ಲಿಯೂ ಅವರು ಹುದ್ದೆ ಬಯಸಿದವರಲ್ಲ. ಆದರೂ ಜಿಲ್ಲೆ ಪ್ರಾತಿನಿಧ್ಯ ಬಂದಾಗ ಅವರಿಗೆ ಸಚಿವ ಸ್ಥಾನ ಪಕ್ಕಾ ಎನ್ನಲಾಗಿತ್ತು. ಆದರೆ ಅವರ ಪಕ್ಷ ನಿಷ್ಠೆ ಮತ್ತೊಮ್ಮೆ ತಾವು ಎಲ್ಲಿಯೂ ಸ್ಥಾನಕ್ಕಾಗಿ ಲಾಭಿ ನಡೆಸಿಲ್ಲ. ಇದೀಗ ಸರ್ಕಾರದ ಮುಂದಿನ ಸಚಿವ ಸಂಪುಟದಲ್ಲಿ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಜತೆಗೆ ರಾಜ್ಯದ ವಿವಿಧ ನಿಗಮ ಮಂಡಳಿಯ ಕ್ಯಾಬಿನೆಟ್ ಸ್ಥಾನ ಮಾನ ಸಿಗಲಿದೆ ಎಂದು ಹೇಳಲಾಗಿದೆ. ಈ ಹಿಂದೆ ಅವರು ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಜತೆಗೆ ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರ ಜತೆಗೂ ಉತ್ತಮ ಸ್ನೇಹ ಹೊಂದಿದ್ದಾರೆ. ಹೀಗಾಗಿ ದೊಡ್ಡ ಹುದ್ದೆ ಸಿಗುವ ಸಾಧ್ಯತೆಗಳಿವೆ. ಜತೆಗೆ ಅವರಿಗೆ ಉತ್ತಮ ಸ್ಥಾನ ಸಿಗಬೇಕು ಎಂಬ ಚರ್ಚೆ ಪಕ್ಷದ ವಲಯದಲ್ಲೂ ಇದೆ.
ಡಾ.ಅಂಶುಮಂತ್ ಅವರಿಗೂ ಮಹತ್ವದ ಸ್ಥಾನ
ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾಗಿ ಅತ್ಯುತ್ತಮ ಕೆಲಸವನ್ನು ಮಾಡಿರುವ ಡಾ.ಅಂಮಂತ್ ಅವರು ಕೂಡ ಅತ್ಯುತ್ತಮ ಸಂಘಟನೆ ಹಾಗೂ ಪಕ್ಷದ ಗೆಲುವಿಗೆ ಪ್ರಮುಖರಾಗಿದ್ದು ಇದೀಗ ಹೈಕಮಾಂಡ್ ಗಮನ ಸೆಳೆದಿದ್ದಾರೆ. ಈ ನಡುವೆ ಈಗಾಗಲೇ ಜಿಲ್ಲಾವಾರು ಹಾಗೂ ಪ್ರಾತಿನಿಧ್ಯವಾರು ಹಾಗೂ ಸಂಘಟನೆವಾರು ಸ್ಥಾನಮಾನ ಹಂಚಿಕೆ ವೇಳೆ ಡಾ.ಅಂಶುಮಂತ್ ಅವರಿಗೆ ಈ ಬಾರಿ ನಿಗಮ ಮಂಡಳಿಯಲ್ಲಿ ಉತ್ತಮವಾದ ಒಂದು ಹುದ್ದೆ ಸಿಗಲಿದೆ ಎಂದು ನಿರೀಕ್ಷೆ ಇದೆ. ಏಕೆಂದರೆ ಪಕ್ಷ ಸಂಘಟನೆಯಲ್ಲಿ ರಾಜ್ಯಮಟ್ಟದಲ್ಲಿ ಚಿಕ್ಕಮಗಳೂರು ರಾಜ್ಯ ಮಟ್ಟದಲ್ಲಿ ಎಲ್ಲಾ ವಿಧಾನ ಸಭಾ ಕ್ಷೇತ್ರ ಗೆಲ್ಲುವ ಮೂಲಕ ಗಮನ ಸೆಳೆದಿದೆ.
ಡಾ.ಅಂಶುಮಂತ್ ಅವರು ಚಿಕ್ಕಮಗಳೂರು ಜಿಲ್ಲೆ ಎನ್ ಆರ್ ಪುರ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಬಲವಾಗಿ ಪಕ್ಷ ಸಂಘಟಿಸಿದ್ದು,, ಕಳೆದ 3 ವರ್ಷದಿಂದ ಜಿಲ್ಲಾ ಮಟ್ಟದಲ್ಲೂ ಕೂಡ ಪಕ್ಷದ ಎಲ್ಲಾ ಅಭ್ಯರ್ಥಿಗಳ ಗೆಲುವಿಗೆ ಕಾರಣರಾಗಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆ ಪಕ್ಷ ಈ ಇಬ್ಬರು ನಾಯಕರಿಗೆ ಮಹತ್ವದ ಹುದ್ದೆ ನೀಡಲಿದೆ ಎಂಬ ಚರ್ಚೆ ಇದೆ. ಅಲ್ಲದೆ ಜಿಲ್ಲೆಯ ಜನರ ಅಭಿಪ್ರಾಯ ಕೂಡ ಇದೆ ಆಗಿದೆ.
ಇದನ್ನೂ ಓದಿ : ಯಾವ ಊರಲ್ಲಿ ಜು.9ಕ್ಕೆ ಅಡಿಕೆ ದರ ಎಷ್ಟು ?
HOW TO APPLY : NEET-UG COUNSELLING 2023