ಅನುದಾನಿತ ಪ್ರೌಢಶಾಲೆ, ಪಿಯು ಬೋಧಕ ಹುದ್ದೆ ಭರ್ತಿ
– 306 ಪ್ರೌಢಶಾಲೆಗಳ ಉನ್ನತೀಕರಣಕ್ಕೆ ಸರ್ಕಾರದ ಪ್ಲಾನ್: ಮಧು ಬಂಗಾರಪ್ಪ
– ವಸತಿ ಶಾಲೆಗಳಲ್ಲಿ ಪಿಯುಸಿ ಆರಂಭ
NAMMUR EXPRESS NEWS
ಬೆಂಗಳೂರು: ಆರ್ಥಿಕ ಇಲಾಖೆಯ ಸಹಮತಿ ಪಡೆದು 306 ಸರಕಾರಿ ಪ್ರೌಢಶಾಲೆಗಳನ್ನು ಪದವಿಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸಲು ಕ್ರಮ ವಹಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್ನಲ್ಲಿ ಸೋಮವಾರ ಕಾಂಗ್ರೆಸ್ನ ಪ್ರಕಾಶ್ ಹುಕ್ಕೇರಿ ಪ್ರಶ್ನೆಗೆ, “”667 ಸರಕಾರಿ ಪ್ರೌಢಶಾಲೆ ಗಳನ್ನು ಪಿಯು ಕಾಲೇಜುಗಳನ್ನಾಗಿ ಮೇಲ್ದರ್ಜೆಗೇರಿ ಸುವ ಪ್ರಸ್ತಾವನೆ ಇದೆ. ಆರ್ಥಿಕ ಪರಿಸ್ಥಿತಿ ಹಿನ್ನೆಲೆಯಲ್ಲಿ 361 ಪ್ರೌಢಶಾಲೆಗಳಿಗೆ ಇದು ಸಾಧ್ಯವಿಲ್ಲ. 2 ವರ್ಷ ಮುಂದೂಡುವಂತೆ ಆರ್ಥಿಕ ಅಭಿಪ್ರಾಯಿಸಿದೆ,” ಎಂದು ತಿಳಿಸಿದರು.
ಇಲಾಖೆ ಆರ್ಥಿಕ ಇಲಾಖೆ ಕೆಲ ಮಾಹಿತಿ ಕೋರಿದ್ದು ಅದನ್ನು ಕ್ರೋಢೀಕರಿಸಲಾಗುತ್ತಿದೆ. 2023 – 24ನೇ ಸಾಲಿನಲ್ಲಿ 8 ಸರಕಾರಿ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಉನ್ನತೀಕರಿಸಲಾಗಿದೆ. ಪ್ರೌಢಶಾಲೆ ಅಗತ್ಯ ವಿರುವ ಕಡೆಗಳಲ್ಲೂ ಮೇಲ್ದರ್ಜೆಗೇರಿಸಲು ಕ್ರಮ ವಹಿಸಲಾಗುವುದು ಹೊಸ ಸರಕಾರಿ ಪಿಯು ಕಾಲೇಜುಗಳ ಮಂಜೂರಾತಿಯ ಪ್ರಸ್ತಾವನೆಯೂ ಪರಿಶೀಲನೆಯಲ್ಲಿದೆ,” ಎಂದರು.
ಬೋಧಕ ಹುದ್ದೆಗಳ ಭರ್ತಿಗೆ ಅನುಮತಿ:
ಅನುದಾನಿತ ಪ್ರೌಢಶಾಲೆ ಮತ್ತು ಪಿಯು ಕಾಲೇಜುಗಳಲ್ಲಿ 2015ರ ಡಿ.31ರ ಅಂತ್ಯಕ್ಕೆ ಖಾಲಿ ಇರುವ 5,190 ಬೋಧಕ ಹುದ್ದೆಗಳ ಭರ್ತಿಗೆ ಅನುಮತಿ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಬಿಜೆಪಿ ಸದಸ್ಯ ಶಶೀಲ್ ಜಿ.ನಮೋಶಿ ಪ್ರಶ್ನೆಗೆ ‘2015ರ ಡಿ.31ರ ಪೂರ್ವದಲ್ಲಿ ಅನುದಾನಿತ ಪ್ರೌಢಶಾಲೆಗಳಲ್ಲಿ ಖಾಲಿ ಆಗಿರುವ ಎಲ್ಲ ಬೋಧಕ ಹುದ್ದೆಗಳ ಭರ್ತಿಗೆ ಅನುಮತಿ ಕೋರಿ ಬಂದ ಪ್ರಸ್ತಾವನೆ ಪರಿಶೀಲಿಸಿ, ಅನುದಾನ ಸಹಿತವಾಗಿ ಅನುಮೋದಿಸ ಲಾಗಿದೆ,” ಎಂದು ಹೇಳಿದರು.
ತಿಂಗಳಾಂತ್ಯದೊಳಗೆ 2023-24ನೇ ಸಾಲಿನಲ್ಲಿ 1- 10ನೇ ಬಾಕಿ ಸಮವಸ್ತ್ರ ಪೂರೈಕೆ ತರಗತಿವರೆಗಿನ ಶೇ.83ರಷ್ಟು ಮಕ್ಕಳಿಗೆ ಸಮವಸ್ತ್ರ ತಲುಪಿಸಲಾಗಿದೆ. ಬಾಕಿ ಶೇ 17ರಷ್ಟು ಮಕ್ಕಳಿಗೆ ಈ ತಿಂಗಳಾಂತ್ಯದೊಳಗೆ ಪೂರೈಸಲಾಗುವುದು ಎಂದು ಮಧು ಬಂಗಾರಪ್ಪ ತಿಳಿಸಿದರು. ಕಾಂಗ್ರೆಸ್ನ ಮಂಜುನಾಥ ಭಂಡಾರಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಧು ಬಂಗಾರಪ್ಪ, “ಶಿಕ್ಷಕರಿಗೆ ಸಮವಸ್ತ್ರ ನಿಗದಿ ಕುರಿತು ಯಾವುದೇ ನಿಯಮಗಳು ಇಲ್ಲ, ಈ ರೀತಿಯ ಯಾವುದೇ ಪ್ರಸ್ತಾವನೆಯೂ ಸರಕಾರದ ಮುಂದೆ ಇಲ್ಲ.” ಎಂದರು.
”2016ರ ಜ.1ರಿಂದ 2020ರ ಡಿಸೆಂಬರ್ವರೆಗೆ ನಿವೃತ್ತಿ, ಮರಣ, ರಾಜೀನಾಮೆಯಿಂದ 6,942 ಹುದ್ದೆಗಳು ಖಾಲಿಯಾಗಿವೆ. 2015ರ ಪೂರ್ವದಲ್ಲಿ ಖಾಲಿಯಾಗಿರುವ ಹುದ್ದೆಗಳ ಭರ್ತಿಗಳಷ್ಟೇ ಆರ್ಥಿಕ ಇಲಾಖೆ ಅನುಮತಿ ನೀಡಿದೆ. 2016ರ ನಂತರ ಖಾಲಿ ಯಾಗಿರುವ ಹುದ್ದೆಗಳನ್ನೂ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು,” ಎಂದು ಭರವಸೆ ನೀಡಿದರು. ಶೀಘ್ರ ಶಿಥಿಲ ಕಟ್ಟಡಗಳ ದುರಸ್ತಿ: ಸರಕಾರಿ ಶಾಲೆಗಳ ಕೊಠಡಿಗಳ ನಿರ್ಮಾಣ, ದುರಸ್ತಿಗೆ ಬಜೆಟ್ನಲ್ಲಿ ಹಣ ಒದಗಿಸಲಾಗಿದೆ. ತಕ್ಷಣ ದುರಸ್ತಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ವಸತಿ ಶಾಲೆಗಳಲ್ಲಿ ಪಿಯುಸಿ ಆರಂಭ
833 ವಸತಿ ಶಾಲೆಗಳಲ್ಲಿ ಪಿಯು ಆರಂಭಿಸುವ ಸಂಬಂಧ ಈಗಾಗಲೇ ಸಿಎಂ ಜತೆಗೆ ಸಮಾಲೋಚನೆ ನಡೆಸಿದ್ದು, ಶೀಘ್ರವೇ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು.
ವಿಧಾನ ಪರಿಷತ್ನಲ್ಲಿ ಮರಿತಿಬ್ಬೇಗೌಡ, ವೈ.ಎ. ನಾರಾಯಣಸ್ವಾಮಿ ಮತ್ತಿತರರು ನಿಯಮ 330 ರ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಅವರು, ”ವಸತಿ ಶಾಲೆಗಳಲ್ಲಿ ಜಿಲ್ಲೆಗೊಂದು ಕಾಲೇಜು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ವತಿಯಿಂದ ಸಿಬಿಎಸ್ಇ ಶಾಲೆಗಳನ್ನೂ ಆರಂಭಿಸುವ ಪ್ರಸ್ತಾಪವೂ ಇದೆ,” ಎಂದರು.
”ವಸತಿ ಶಾಲೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿ, ಶಿಕ್ಷಣದ ಗುಣಮಟ್ಟ ಹೆಚ್ಚಳ, ಕಾಯಂ ಶಿಕ್ಷಕರಿಗೆ ವಿಶೇಷ ಭತ್ಯೆ, ಕೃಪಾಂಕದ ಮೂಲಕ ನೇಮಕವಾದ ಶಿಕ್ಷಕರಿಗೆ ಟಿಇಟಿ ತರಬೇತಿ ಮತ್ತು ಪರೀಕ್ಷೆ ಆಯೋಜಿಸು ವುದು ಸೇರಿದಂತೆ ಶಾಲೆಗಳ ಉನ್ನತೀಕರಣ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುವುದು,” ಎಂದು ಭರವಸೆ ನೀಡಿದರು.
ಇದನ್ನೂ ಓದಿ : ಯಾವ ಊರಲ್ಲಿ ಜು.9ಕ್ಕೆ ಅಡಿಕೆ ದರ ಎಷ್ಟು ?
HOW TO APPLY : NEET-UG COUNSELLING 2023