ತೀರ್ಥಹಳ್ಳಿ ಪಟ್ಟಣ ಇನ್ನು ಹಸಿರು ಹಸಿರು!
– ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಗಿಡ ನೆಡುವ ಯೋಜನೆ
– ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯ ವತಿಯಿಂದ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದ್ದು ಪಟ್ಟಣದಲ್ಲಿ ಸುಮಾರು 1000 ಗಿಡ ನೆಡುವ ಯೋಜನೆಗೆ ಚಾಲನೆ ಸಿಕ್ಕಿದೆ.
ರೋಟರಿ, ಲಯನ್ಸ್ ಕ್ಲಬ್, ಜೆಸಿಐ, ಇನ್ನರ್ ವೀಲ್, ಮಲ್ನಾಡ್ ಕ್ಲಬ್, ಸಾಹಿತ್ಯ ಪರಿಷತ್ ಮತ್ತು ಬೇರೆ ಬೇರೆ ಸಂಘಟನೆಗಳ ಸಹಯೋಗದಲ್ಲಿ ತೀರ್ಥಹಳ್ಳಿ ಪಟ್ಟಣದಲ್ಲಿ ಗಿಡ ನೆಡುವ ಯೋಜನೆಗೆ ಚಾಲನೆ ಸಿಕ್ಕಿದೆ.
ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಸುಶೀಲಾ ಶೆಟ್ಟಿ, ಉಪಾಧ್ಯಕ್ಷರಾದ ಅಸಾದಿ, ಸದಸ್ಯರಾದ ಗೀತಾ ರಮೇಶ್, ಶಬನಮ್, ಜಯಪ್ರಕಾಶ್ ಶೆಟ್ಟಿ, ಸಂದೇಶ್ ಜವಳಿ, ಸೊಪ್ಪುಗುಡ್ಡೆ ರಾಘವೇಂದ್ರ, ರತ್ನಾಕರ್ ಶೆಟ್ಟಿ, ರವೀಶ್, ನವೀನ್, ಮಂಜುಳಾ ನಾಗೇಂದ್ರ, ಜ್ಯೋತಿ ಗಣೇಶ್, ನಮ್ರತ್, ಮುಖ್ಯ ಅಧಿಕಾರಿ ಕುರಿಯಾ ಕೋಸ್, ಎಲ್ಲಾ ಸಿಬ್ಬಂದಿ ತೀರ್ಥಹಳ್ಳಿಯ ಕುಶಾವತಿ ಪಾರ್ಕಲ್ಲಿ ಯೋಜನೆಗೆ ಚಾಲನೆ ನೀಡಿದರು.
ತೀರ್ಥಹಳ್ಳಿ ಎಲ್ಲಾ ಪಾರ್ಕ್ ಇನ್ನು ಹಸಿರು!?
ವನ ಮಹೋತ್ಸವ ಅಂಗವಾಗಿ ತೀರ್ಥಹಳ್ಳಿಯ ಎಲ್ಲಾ ಪಾರ್ಕ್ ಅಲ್ಲಿ ಗಿಡಗಳನ್ನು ನೆಡಲು ಯೋಜನೆ ರೂಪಿಸಲಾಗಿದೆ. ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಗಿಡ ನೆಡಲು ಯೋಜನೆ ರೂಪಿಸಲಾಗಿದೆ.
ಇದನ್ನೂ ಓದಿ : ಯಾವ ಊರಲ್ಲಿ ಜು.9ಕ್ಕೆ ಅಡಿಕೆ ದರ ಎಷ್ಟು ?
HOW TO APPLY : NEET-UG COUNSELLING 2023