ತೀರ್ಥಹಳ್ಳಿಯಲ್ಲಿ ಗೃಹ ಲಕ್ಷ್ಮೀ ಯೋಜನೆಗೆ ಚಾಲನೆ
– ಜು.19ಕ್ಕೆ ಎಲ್ಲೆಡೆ ಚಾಲನೆ: ಅರ್ಜಿ ಹಾಕುವ ಪ್ರಕ್ರಿಯೆ ಶುರು
– ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಶೀಲಾ ಶೆಟ್ಟಿ ಚಾಲನೆ
NAMMUR EXPRESS NEWS
ತೀರ್ಥಹಳ್ಳಿ: ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಪಂಚ ಯೋಜನೆಗಳ ಪೈಕಿ ಒಂದಾದಂತ ಗೃಹಲಕ್ಷ್ಮಿಯೋಜನೆಯ ಚಾಲನೆಯನ್ನು ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಗೋಪಾಲಗೌಡರ ರಂಗಮಂದಿರದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಸುಶೀಲಾ ಶೆಟ್ಟಿ ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿಯ ಉಪಾಧ್ಯಕ್ಷರಾದ ರಹಮತ್ ಉಲ್ಲಾ ಅಸಾದಿ, ಪಟ್ಟಣ ಪಂಚಾಯತಿ ಸದಸ್ಯರಾದ ರತ್ನಾಕರ ಶೆಟ್ಟಿ, ರಾಘವೇಂದ್ರ ಸೊಪ್ಪುಗುಡ್ಡೆ, ಶಬ್ನಂ, ಸಂದೇಶ್ ಜವಳಿ ಮಂಜುಳಾ ಹಾಗೂ ಮುಖ್ಯ ಅಧಿಕಾರಿ ಉಪಸ್ಥಿತರಿದ್ದರು.
ಏನಿದು ಗೃಹ ಲಕ್ಷ್ಮೀ ಯೋಜನೆ?
ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ರೇಷನ್ ಕಾರ್ಡ್ ಕಡ್ಡಾಯ ವಾಗಿದೆ. ಇದರ ಜೊತೆಗೆ ಕುಟುಂಬದ ಮುಖ್ಯಸ್ಥೆಯ ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಪುಸ್ತಕ ಮತ್ತು ಮೊಬೈಲ್ ತರಬೇಕು. ಗಂಡ ಜೀವಂತವಾಗಿದ್ದಲ್ಲಿ ಗಂಡನ ಆಧಾರ್ ಕಾರ್ಡ್ ತರಬೇಕು. ಕಡ್ಡಾಯವಾಗಿ ಕುಟುಂಬದ ಮುಖ್ಯಸ್ಥೆಯ ಬ್ಯಾಂಕ್ ಪಾಸ್ ಪುಸ್ತಕ ಬೇಕು. ಬೇರೆ ಸದಸ್ಯರ ಬ್ಯಾಂಕ್ ಪಾಸ್ ಪುಸ್ತಕ ಅಥವಾ ಜಂಟಿ ಖಾತೆಯ (Joint passbook) ಮಾನ್ಯ ಅಲ್ಲ. ಕುಟುಂಬದ ಮುಖ್ಯಸ್ಥೆ ಮರಣ ಹೊಂದಿದ್ದಲ್ಲಿ ತಾಲೂಕಿನ ಆಹಾರ ಶಾಖೆಗೆ ಹೋಗಿ ಮುಖ್ಯಸ್ಥೆ ಬದಲಾವಣೆ ಮಾಡಿ ನಂತರ ಅರ್ಜಿ ಸಲ್ಲಿಸಬೇಕು.
ಇದನ್ನೂ ಓದಿ : ಛೇ.. ಎಂಥಾ ನೀಚ ಕೃತ್ಯ…ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿ ಗ್ಯಾಂಗ್ ರೇಪ್!
HOW TO APPLY : NEET-UG COUNSELLING 2023