ಮಲೆನಾಡಲ್ಲಿ ಇನ್ನು ವಾಡಿಕೆ ಮಳೆ ಆಗಿಲ್ಲ!
– 687.87 ಮಿಮಿ ವಾಡಿಕೆ ಮಳೆ ಆಗಬೇಕಿತ್ತು!
– ಎರಡು ವರ್ಷದ ಹಿಂದೆ ಎಲ್ಲೆಡೆ ಬೆಟ್ಟ ಕುಸಿದಿತ್ತು
NAMMUR EXPRESS NEWS
ಮಲ್ನಾಡ್ : ಮಲೆನಾಡಲ್ಲಿ ಇನ್ನು ವಾಡಿಕೆ ಮಳೆ ಆಗಿಲ್ಲ!.
ಜುಲೈ ತಿಂಗಳಲ್ಲಿ 687.87 ಮಿಮಿ ವಾಡಿಕೆ ಮಳೆ ಆಗಬೇಕಿತ್ತು. ಆದರೆ ಈವರೆಗೆ 323.90 ಮಿಮಿ ಮಳೆಯಾಗಿದೆ.
ಎರಡು ವರ್ಷದ ಹಿಂದೆ ಅಂದರೆ 2021ರಲ್ಲಿ ತೀರ್ಥಹಳ್ಳಿ ಸೇರಿ ಎಲ್ಲೆಡೆ ಬೆಟ್ಟ ಕುಸಿದಿತ್ತು. ಎಲ್ಲಾ ಕಡೆ ನೀರು ತುಂಬಿ ಹೋಗಿತ್ತು. 2022ರಲ್ಲಿ ಜುಲೈ 14ಕ್ಕೆ ರಾಮ ಮಂಟಪ ಭರ್ತಿಯಾಗಿದ್ದು ತುಂಗೆಗೆ ಶಾಸಕ, ಅಂದಿನ ಗೃಹ ಸಚಿವ ಆರಗ ಜ್ಞಾನೇಂದ್ರ ಬಾಗಿನ ಅರ್ಪಿಸಿದ್ದರು. ಆದರೆ ಈಗ ಇನ್ನು ರಾಮ ಮಂಟಪ ಬುಡಕ್ಕೆ ನೀರು ಮುಟ್ಟಿದೆ ಅಷ್ಟೇ.
24 ಗಂಟೆ ಮಳೆ ಎಷ್ಟು ಆಗಿದೆ?
ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 323.90 ಮಿಮಿ ಮಳೆಯಾಗಿದ್ದು, ಸರಾಸರಿ 46.27 ಮಿಮಿ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 687.87 ಮಿಮಿ ಇದ್ದು, ಇದುವರೆಗೆ ಸರಾಸರಿ 395.44 ಮಿಮಿ ಮಳೆ ದಾಖಲಾಗಿದೆ. ಶಿವಮೊಗ್ಗ 13.30 ಮಿಮಿ., ಭದ್ರಾವತಿ 11.20 ಮಿಮಿ., ತೀರ್ಥಹಳ್ಳಿ 71.80 ಮಿಮಿ., ಸಾಗರ 86.80 ಮಿಮಿ., ಶಿಕಾರಿಪುರ 21.60 ಮಿಮಿ., ಸೊರಬ 39.40 ಮಿಮಿ. ಹಾಗೂ ಹೊಸನಗರ 79.80 ಮಿಮಿ. ಮಳೆಯಾಗಿದೆ.
ಆಣೆಕಟ್ಟುಗಳಲ್ಲಿ ನೀರಿನ ಮಟ್ಟ ಹೀಗಿದೆ
ಲಿಂಗನಮಕ್ಕಿ: 1819 (ಗರಿಷ್ಠ), 1764.70 (ಇಂದಿನ ಮಟ್ಟ), 43043.00 (ಒಳಹರಿವು), 1157.30 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 1797.30.
ಭದ್ರಾ: 186 (ಗರಿಷ್ಠ), 143.00 (ಇಂದಿನ ಮಟ್ಟ), 7734.00 (ಒಳಹರಿವು), 165.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 183.23.
ತುಂಗಾ: 588.24 (ಗರಿಷ್ಠ), 588.02 (ಇಂದಿನ ಮಟ್ಟ), 30453.00 (ಒಳಹರಿವು), 31934.00 (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 588.24.
ಮಾಣಿ: 595 (ಎಂಎಸ್ಎಲ್ಗಳಲ್ಲಿ), 575.96 (ಇಂದಿನ ಮಟ್ಟ ಎಂ.ಎಸ್.ಎಲ್ನಲ್ಲಿ), 4905 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಸ್ಗಳಲ್ಲಿ) ಕಳೆದ ವರ್ಷ ನೀರಿನ ಮಟ್ಟ 583.46 (ಎಂಎಸ್ಎಲ್ಗಳಲ್ಲಿ).
ಪಿಕ್ಅಪ್: 563.88 (ಎಂಎಸ್ಎಲ್ಗಳಲ್ಲಿ), 561.64 (ಇಂದಿನ ಮಟ್ಟ ಎಂ.ಎಸ್.ಎಲ್ನಲ್ಲಿ), 2509 (ಒಳಹರಿವು), 3013.00(ಹೊರಹರಿವು ಕ್ಯೂಸೆಕ್ಸ್ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 562.04 (ಎಂಎಸ್ಎಲ್ಗಳಲ್ಲಿ).
ಚಕ್ರ: 580.57 (ಎಂ.ಎಸ್.ಎಲ್ಗಳಲ್ಲಿ), 571.18 (ಇಂದಿನ ಮಟ್ಟ ಎಂ.ಎಸ್.ಎಲ್ನಲ್ಲಿ), 3145.00 (ಒಳಹರಿವು), 474.00 (ಹೊರಹರಿವು ಕ್ಯೂಸೆಕ್ಸ್ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 576.35 (ಎಂಎಸ್ಎಲ್ಗಳಲ್ಲಿ).
ಸಾವೆಹಕ್ಲು: 583.70 (ಗರಿಷ್ಠ ಎಂಎಸ್ಎಲ್ಗಳಲ್ಲಿ), 578.00 (ಇಂದಿನ ಮಟ್ಟ ಎಂ.ಎಸ್.ಎಲ್ನಲ್ಲಿ), 2756.00 (ಒಳಹರಿವು), 510.00 (ಹೊರಹರಿವು ಕ್ಯೂಸೆಕ್ಸ್ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 580.46 (ಎಂಎಸ್ಎಲ್ಗಳಲ್ಲಿ).
ಇದನ್ನೂ ಓದಿ : ಕರಾವಳಿಯಲ್ಲಿ ಕೊರಗಜ್ಜನ ಪವಾಡ.!
HOW TO APPLY : NEET-UG COUNSELLING 2023