ತೀರ್ಥಹಳ್ಳಿಯಲ್ಲೂ ಕೋಳಿ ಅಂಕದ ಆಟ!
– ಪಡೆ ನಡೆಸ್ತಿದ್ದವರ ಮೇಲೆ ಪೊಲೀಸರ ದಾಳಿ
– ತೀರ್ಥಹಳ್ಳಿ: ವೃದ್ಧರಿದ್ದ ಮನೆಗೆ ನುಗ್ಗಿ ಹಣ ಕಳ್ಳತನ
– ಸಾಗರದಲ್ಲಿ ಬೈಕ್ ಸವಾರನಿಗೆ ಆಕ್ಸಿಡೆಂಟ್: ಸಾವು
– ಕೆರೆಗೆ ಬಿದ್ದ ಬಾಲಕನ ನೋಡಿ ಮಹಿಳೆ ಮರಣ
NAMMUR EXPRESS NWES
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಈಗ ಅನೇಕ ದಂಧೆ, ಅಕ್ರಮ ಚಟುವಟಿಕೆಗಳು ಶುರುವಾಗಿದೆ. ಒಂದು ಕಡೆ ಕಳ್ಳತನ, ಅತ್ಯಾಚಾರದಂತಹ ಚಟುವಟಿಕೆ ನಡುವೆ ಇದೀಗ ಕೋಳಿ ಪಡೆ, ಇಸ್ಪೀಟ್, ಆನ್ಲೈನ್ ಬೆಟ್ಟಿಂಗ್ ಹೆಚ್ಚಾಗಿದೆ.
ಈಗಾಗಲೇ ಇದರಿಂದ ನೂರಾರು ಕುಟುಂಬಗಳು ಕಣ್ಣೀರು ಹಾಕುತ್ತಿವೆ. ಈ ನಡುವೆ ತೀರ್ಥಹಳ್ಳಿ ತಾಲೂಕು ಮಾಳೂರು ಪೊಲೀಸರು ಕೋಳಿ ಅಂಕ ನಡೆಸ್ತಿದ್ದವರ ಮೇಲೆ ದಾಳಿ ನಡೆಸಿದ್ದ ಹಲವರನ್ನ ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ತೀರ್ಥಹಳ್ಳಿ ತಾಲ್ಲೂಕಿನ ಹಳ್ಳಿಬೈಲ್ ನಲ್ಲಿ ಕೋಳಿ ಅಂಕ ನಡೆಯುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಮಾಳೂರು ಪೊಲೀಸ್ ಸ್ಟೇಷನ್ ಪೊಲೀಸರು ದಾಳಿ ನಡೆಸಿದ್ದಾರೆ. ಅಂಕಕ್ಕೆ ಬಳಸಿದ್ದ ಕೋಳಿ ಹಾಗೂ ಅದಕ್ಕೆ ಸಂಬಂಧಿಸಿದವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಸ್ಥಳೀಯರಿಂದ ಲಭ್ಯವಾಗಿದೆ.
ವೃದ್ಧರಿದ್ದ ಮನೆಗೆ ನುಗ್ಗಿ ಹಣ ಕಳ್ಳತನ
ತೀರ್ಥಹಳ್ಳಿ ಪಟ್ಟಣಕ್ಕೆ ಸಮೀಪದ ತಿರಳೇಬೈಲು ಬಳಿ ಇಬ್ಬರು ವೃದ್ಧರಿದ್ದ ಮನೆಗೆ ನುಗ್ಗಿದ ಕಳ್ಳ ಸುಮಾರು 20 ಸಾವಿರ ಹಣ ಕದ್ದು ಪರಾರಿಯಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ತೀರ್ಥಹಳ್ಳಿ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಕಾರು ಡಿಕ್ಕಿ: ಸೈಕಲ್ ಸವಾರ ಸ್ಥಳದಲ್ಲಿಯೇ ಸಾವು!
ಸೈಕಲ್ ಸವಾರನಿಗೆ ಓಮಿನಿ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸಾಗರ ತಾಲೂಕಿನ ಕೆಳದಿ ಗ್ರಾಮದಲ್ಲಿ ಜು.31ರ ಸೋಮವಾರ ಸಂಜೆ ನಡೆದಿದೆ.ಕೆಳದಿ ಗ್ರಾಮದ ಶ್ರೀಧರ್ (55) ಮೃತಪಟ್ಟ ವ್ಯಕ್ತಿ.ಶ್ರೀಧರ್ ಸೈಕಲ್ನಲ್ಲಿ ಸಮೀಪದಲ್ಲಿರುವ ತಮ್ಮ ಜಮೀನಿಗೆ ನೀರು ಕಟ್ಟಿ ವಾಪಾಸ್ ಬರುತ್ತಿದ್ದ ವೇಳೆ ಓಮಿನಿ ಡಿಕ್ಕಿ ಹೊಡೆದು ಚಾಲಕ ಪರಾರಿಯಾಗಿದ್ದಾನೆ. ಈ ಸಂಬಂಧ ಶ್ರೀಧರ್ ಅವರ ಪುತ್ರ ಸಂದೀಪ್ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೈಕ್ ಕದ್ದವ ಒಂದೇ ದಿನದಲ್ಲಿ ಸಿಕ್ಕಿ ಬಿದ್ದ!
ಸಾಗರದ ಸೈಯದ್ ನಗರದ ಸೊರಬ ರಸ್ತೆಯ ಮನೆಯೊಂದರ ಮುಂದೆ ನಿಲ್ಲಿಸಿದ್ದ ಹೀರೋ ಸ್ಪೆಂಡರ್ ಬೈಕ್ನ್ನು ಕಳ್ಳತನ ಮಾಡಿರುವ ಕುರಿತು ಜುಲೈ 30ರಂದು ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಎಸ್ಐ ಶ್ರೀಪತಿ ಗಿನ್ನಿ ನೇತೃತ್ವದಲ್ಲಿ ಸಾಗರ ಟೌನ್ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಗಳಾದ ರತ್ನಾಕರ್, ಪ್ರಭಾಕರ್ ಕೆ.ಸಿ., ಶ್ರೀಧರ್, ನಾಗರಾಜ್ ನಾಯ್ಕ ಮತ್ತು ವಿಶ್ವನಾಥ ಡಿ.ಕೆ. ಅವರನ್ನು ಒಳಗೊಂಡ ತಂಡ ಸೋಮವಾರ 40 ಸಾವಿರ ರೂ. ಮೌಲ್ಯದ ಬೈಕ್ ಸಮೇತ ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.
ಕೆರೆಯಲ್ಲಿ ಬಿದ್ದು ಮೃತಪಟ್ಟ ಬಾಲಕನ ನೋಡಿ ಸಾವು
ಕೆರೆಯಲ್ಲಿ ಮುಳುಗಿ ಬಾಲಕ ಮೃತಪಟ್ಟಿದ್ದನ್ನು ನೋಡಿದ ನೆರೆಮನೆಯ ಮಹಿಳೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಸೋಮವಾರ ಕೇರಳದ ಕಾಸರಗೋಡಲ್ಲಿ ನಡೆದಿದೆ. ಬಂಗಳಂ ಹಾಲಿನ ಸೊಸೈಟಿ ಬಳಿಯ ಜಮಾ ಅತ್ ಕ್ವಾರ್ಟಸ್ನಲ್ಲಿ ವಾಸವಾಗಿರುವ ಸೆಬಾಸ್ಟಿನ್ ಎಂಬುವರ ಪುತ್ರ ಆಲ್ಟಿನ್ ಸೆಬಾಸ್ಟಿನ್ (16) ಮನೆ ಪಕ್ಕದಲ್ಲೇ ಇರುವ ಕಂದಕ್ಕೆ ಈಜಾಡಲು ಇಳಿದಿದ್ದರು. ಈ ವೇಳೆ ಅವರ ತಾಯಿ ಸೇರಿದಂತೆ ಹಲವರು ಪಕ್ಕದಲ್ಲೇ ಇದ್ದರು. ನೀರಿಗಿಳಿದ ಕೆಲ ಹೊತ್ತಿನಲ್ಲೇ ಆಯತಪ್ಪಿದ ಅಲ್ವಿನ್ ಮುಳುಗಿ ಕಾಣೆಯಾಗಿದ್ದರು. ಅಗ್ನಿಶಾಮಕ ಮತ್ತು ಸ್ಥಳೀಯರ ಸಹಕಾರದಿಂದ ಶವ ಮೇಲೆತ್ತಲಾಯಿತು. ಅಲ್ಲೇ ಇದ್ದ ನೆರೆಮನೆಯ ವಿಲಾಸಿನಿ (65) ಅವರು ಆಲ್ವಿನ್ ಅವರ ಶವ ನೋಡಿದ ಕೂಡಲೇ ಕುಸಿದು ಬಿದ್ದರು.
ತಕ್ಷಣ ಅವರನ್ನು ನೀಲೇಶ್ವರ ಸಹಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲಿ ಅವರು ಮೃತಪಟ್ಟಿದ್ದರು. ನೀಲೇಶ್ವರ ಪೊಲೀಸರು ಮಹಜರು ನಡೆಸಿದರು.ಮೂಲತಃ ಆಲಪ್ಪುಳ ನಿವಾಸಿಯಾಗಿರುವ ಸೆಬಾಸ್ಟಿನ್ ಹತ್ತು ವರ್ಷಗಳ ಹಿಂದೆ ಬಂಗಳಂನಲ್ಲಿ ನೆಲೆಸಿದ್ದಾರೆ. ಅವರು ಏರಿಕುಳಂನ ತೈಲ ಕಾರ್ಖಾನೆಯೊಂದರ ಸಿಬ್ಬಂದಿ. ಅವರ ಏಕೈಕ ಪುತ್ರ ಆಲ್ಟಿನ್ ಉಪ್ಪಲಿಕೈ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ವನ್ ವಿದ್ಯಾರ್ಥಿಯಾಗಿದ್ದ. ವಿಲಾಸಿನಿ ಅವರಿಗೆ ಇಬ್ಬರು ಪುತ್ರರು ಇದ್ದಾರೆ.
ಇದನ್ನೂ ಓದಿ : ಕಾಳುಮೆಣಸು ಬೆಳೆಗಾರರಿಗೆ ಬಂಪರ್!
HOW TO APPLY : NEET-UG COUNSELLING 2023