ಹೊಸನಗರ: ಸೇತುವೆಯಿಂದ 50 ಅಡಿ ಆಳಕ್ಕೆ ಬಿದ್ದು ಯುವಕ ದುರ್ಮರಣ!
– ನಡೆದುಕೊಂಡು ಹೋಗುತ್ತಿದ್ದ ಯುವಕ ಬಿದ್ದಿದ್ದು ಹೇಗೆ?
– ಸಾಗರದಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿಹೊಡೆದ ಬಸ್!
– 35 ವಿದ್ಯಾರ್ಥಿಗಳಿಗೆ ಶಾಕ್: ಇಬ್ಬರ ಸ್ಥಿತಿ ಗಂಭೀರ
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಕಲ್ಲುಹಳ್ಳ ಸೇತುವೆ ಬಳಿ ಆಯತಪ್ಪಿ ಬಿದ್ದು ಯುವಕನೊಬ್ಬ ಮೃತಪಟ್ಟಿದ್ದಾನೆ. ಹೊಸನಗರ ಪೇಟೆ ಸಮೀಪ ಇರುವ ಕಲ್ಲುಹಳ್ಳ ಸೇತುವೆ ಬಳಿಯಲ್ಲಿ ಈ ಘಟನೆ ಸಂಭವಿಸಿದೆ. ಮೃತ ಯುವಕನನ್ನ ಹೊಸನಗರ ದ್ಯಾವರ್ಸದ ನಿವಾಸಿ ರಾಘು ಎಂದು ತಿಳಿದುಬಂದಿದೆ. ಬುಧವಾರ ಬೆಳಗ್ಗೆ ಯುವಕ ಸೇತುವೆ ಬಳಿ ನಡೆದುಕೊಂಡು ಹೋಗುವದನ್ನ ಸ್ಥಳೀಯರು ಗಮನಿಸಿದ್ದಾರೆ. ಆನಂತರ ಯುವಕ ಸೇತುವೆಯಿಂದ ಕೆಳಕ್ಕೆ ಬಿದ್ದಿದ್ದಾನೆ. ಘಟನೆ ಹೇಗೆ ನಡೆಯಿತು ಎಂಬುದು ಸ್ಪಷ್ಟವಾಗಿಲ್ಲ. ಸ್ಥಳೀಯರು ಹೇಳುವಂತೆ, ಯುವಕ ಆಯತಪ್ಪಿ ಬಿದ್ದಿದ್ದಾನೆ ಎನ್ನಲಾಗಿದೆ. ಸೇತುವೆಯಿಂದ ಸುಮಾರು 50 ಅಡಿ ಆಳಕ್ಕೆ ಬಿದ್ದಿದ್ದ ಯುವಕನಿಗೆ ಕಲ್ಲುಗಳು ಬಡಿದು ಸಾವನ್ನಪ್ಪಿದ್ದಾರೆ. ಹೊಸನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ.
ಸಾಗರದಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿಹೊಡೆದ ಬಸ್!
ಖಾಸಗಿ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ 35ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯುತ್ ಶಾಕ್ ಒಳಗಾದ ಘಟನೆ ಸಾಗರ ಸಮೀಪದ ಹೊಳೆಬಾಗಿಲಿನಲ್ಲಿ ನಡೆದಿದೆ. ಆಘಾತಕ್ಕೊಳಗಾದ ಮಕ್ಕಳಲ್ಲಿ ಇಬ್ಬರ ಸ್ಥಿತಿ ಸ್ವಲ್ಪ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಸಾಗರದ ಹೊಳೆಬಾಗಿಲು ಸಮೀಪದ ಗೆಣಸಿನಕುಣಿ ಗ್ರಾಮದ ಸಮೀಪ ಈ ಘಟನೆ ನಡೆದಿದ್ದು, ಹೊಳೆಬಾಗಿಲಿನಿಂದ ಸಾಗರಕ್ಕೆ ಬರುತ್ತಿದ್ದ ಖಾಸಗಿ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಎಸ್.ಬಿ.ಕೆ. ಕಂಪನಿಗೆ ಸೇರಿದ ಈ ಬಸ್ನಲ್ಲಿ 45 ಮಂದಿ ಪ್ರಯಾಣಿಕರಿದ್ದರು. ಸಿಗಂದೂರಿನಲ್ಲಿ ಲಾಂಚ್ ನಿಲ್ಲುವ ಗ್ರಾಮವಾಗಿರುವ ಹೊಳೆಬಾಗಿಲುವಿನಿಂದ ಬೆಳಗ್ಗಿನ ಹೊತ್ತು ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳೇ ಬಸ್ಸಿನಲ್ಲಿ ತುಂಬಿದ್ದರು. ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಒಮ್ಮೆಗೇ ಬಸ್ಗೆ ವಿದ್ಯುತ್ ಸಂಪರ್ಕ ಆಗಿದೆ. ಇದರಿಂದ ಎಲ್ಲಾ 35 ವಿದ್ಯಾರ್ಥಿಗಳು ಶಾಕ್ಗೆ ಒಳಗಾದರು. ಕೆಲವರು ಬಸ್ಸಿನೊಳಗೇ ಉರುಳಿ ಬಿದ್ದರು. ಈ ವೇಳೆ ಕೆಲವರಿಗೆ ಗಾಯಗಳೂ ಆಗಿವೆ.
ಸಾಮಾನ್ಯವಾಗಿ ಈ ರೀತಿ ವಿದ್ಯುತ್ ಕಂಬಕ್ಕೆ ಏನಾದರೂ ಸಮಸ್ಯೆಯಾದರೆ ಪವರ್ ಟ್ರಿಪ್ ಆಗುತ್ತದೆ. ಆದರೆ, ಇಲ್ಲಿ ಹಾಗೆ ಆಗದೆ ವಿದ್ಯುತ್ ಪ್ರವಹಿಸುತ್ತಲೇ ಇತ್ತು. ಹೀಗಾಗಿ ಶಾಕ್ಗೆ ಒಳಗಾದ ಇಬ್ಬರು ವಿದ್ಯಾರ್ಥಿಗಳಿಗೆ ಸ್ವಲ್ಪ ಗಂಭೀರ ಗಾಯಗಳಾಗಿವೆ. ಗಾಯಾಳುಗಳಿಗೆ ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿದ್ಯಾರ್ಥಿನಿಯರು ವಿದ್ಯುತ್ ಶಾಕ್ ನಿಂದ ಪ್ರಜ್ಞೆ ತಪ್ಪಿದ್ದಾರೆ. ಅವರನ್ನ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿ ಅಲ್ಲಿಯ ವೈದ್ಯರ ಸಲಹೆ ಮೇರೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ : ಖರ್ಗೆ ಮೈಬಣ್ಣದ ವಿವಾದ: ಜ್ಞಾನೇಂದ್ರ ಕ್ಷಮೆಗೆ ಕಾಂಗ್ರೆಸ್ ಪಟ್ಟು!
HOW TO APPLY : NEET-UG COUNSELLING 2023