ಬಾಳೆಹಣ್ಣಿಗಾಗಿ ಅಂಗಡಿಗೆ ನುಗ್ಗಿದ ಗಜರಾಜ!
– ನಾಗರ ಹಾವನ್ನು ಮುದ್ದು ಮಾಡಿದ ಹಸು: ಮುಂದೇನಾಯ್ತು?… ನೀವೇ ನೋಡಿ..!
NAMMUR EXPRESS NEWS
ಚಾಮರಾಜ ನಗರ: ಕಾಡಾನೆಯೊಂದು ದಿನಸಿ ಮಳಿಗೆಯೊಂದರ ಬಾಗಿಲು ಮುರಿದು ಬಾಳೆಗೊನೆ ತಿನ್ನುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಈ ಘಟನೆ ಚಾಮರಾಜನಗರ ತಾಲ್ಲೂಕಿನ ಗಡಿ ಭಾಗದ ತಮಿಳುನಾಡಿನ ಹಾಸನೂರಿನಲ್ಲಿ ನಡೆದಿದೆ. ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೆಂಗಳೂರು- ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದೆ. ಚಾಮರಾಜನಗರ ತಾಲ್ಲೂಕಿನ ಪುಣಜನೂರಿನಿಂದ ತಮಿಳುನಾಡಿನ ಹಾಸನೂರು ನಡುವೆ ಕಾಡಾನೆಗಳು ರಸ್ತೆ ಬದಿಯಲ್ಲಿ ನಿಲ್ಲುವುದು ಸಾಮಾನ್ಯವಾಗಿದ್ದು, ಕಬ್ಬಿನ ಲಾರಿಗಳನ್ನು ಅಡ್ಡಗಟ್ಟಿ ಕಬ್ಬು ತಿನ್ನುತ್ತಿರುತ್ತಿವೆ.
ಗುರುವಾರ ರಾತ್ರಿ ಕಾಡಾನೆ ವೆಂಕಟೇಶ್ ಎಂಬುವವರಿಗೆ ಸೇರಿದ ಅಂಗಡಿಯ ಬಾಗಿಲು ಮುರಿದು ಒಳಗಡೆ ಸೊಂಡಿಲು ಹಾಕಿ ಬಾಳೆಗೊನೆ ತಿನ್ನುತ್ತಿರುವ ಚಿತ್ರ ವಿಡಿಯೊದಲ್ಲಿ ಸೆರೆಯಾಗಿದೆ.ಅರಣ್ಯ ಇಲಾಖೆ ಸಿಬ್ಬಂದಿ ವಾಹನದ ಸೈರನ್ ಮೊಳಗಿಸಿ ಆನೆಯನ್ನು ಓಡಿಸಲು ಯತ್ನಿಸಿದರು. ಸದ್ದು ಕೇಳಿ ಎಚ್ಚೆತ್ತ ಗ್ರಾಮಸ್ಥರೂ ಸ್ಥಳಕ್ಕೆ ಬಂದು ಕಿರುಚಾಡಲು ಆರಂಭಿಸುತ್ತಿದ್ದಂತೆ ಆನೆ ಜಾಗ ಖಾಲಿ ಮಾಡಿದೆ.
ಹಾವಿನ ಹೆಡೆ ಸವರಿದ ಹಸು: ಏನಾಯ್ತು?
ಹಾವು ಮತ್ತು ಹಸುವಿನ 17 ಸೆಕೆಂಡ್ ಗಳ ವಿಡಿಯೊದಲ್ಲಿ ಹಾವು ಮತ್ತು ಹಸು ಒಟ್ಟಿಗಿದ್ದು, ಹಸು ಹಾವಿನ ಹೆಡೆಯನ್ನು ತನ್ನ ನಾಲಿಗೆಯಿಂದ ಸವರಿದ ವಿಡಿಯೋ ವೈರಲ್ ಆಗಿದೆ. ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಇದರ ವಿಡಿಯೊ ತುಣುಕನ್ನು ಹಂಚಿಕೊಂಡಿದ್ದಾರೆ.ವಿಡಿಯೊ ಹಂಚಿಕೊಂಡ 15 ಗಂಟೆಗಳಲ್ಲಿ 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಗಿದ್ದು, 5 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳು ಬಂದಿವೆ. ‘ಪರಿಸರವನ್ನು ಅನುಭವಿಸಿದರೆ ಮಾತ್ರ ಅರ್ಥವಾಗುತ್ತದೆ’ ಎಂದು ಟ್ವಿಟರ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ, ಇನ್ನೊಬ್ಬರು ‘ಇದು ಸಾಮರಸ್ಯದ ಪ್ರೀತಿಯಾಗಿದೆ. ಇಂದಿನ ಜಗತ್ತಿನಲ್ಲಿ ಪ್ರಾಣಿಗಳಿಂದ ಮನುಷ್ಯತ್ವವನ್ನು ಕಲಿಯಬೇಕಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ
HOW TO APPLY : NEET-UG COUNSELLING 2023