ಶಿವಮೊಗ್ಗದಲ್ಲಿ ಮಹಿಳೆ ಬಲಿ ಪಡೆದ ಚಿರತೆ!
– ಶಿವಮೊಗ್ಗ ಗ್ರಾಮಾಂತರ ತಾಲೂಕು ಬಿಕೋನಹಳ್ಳಿಯಲ್ಲಿ ಘಟನೆ
– ಭದ್ರಾವತಿ: ಉರುಳಿಗೆ ಸಿಲುಕಿ ಚಿರತೆ ಸಾವು!
NAMMUR EXPRESS NEWS
ಶಿವಮೊಗ್ಗ: ಜಮೀನಿನಲ್ಲಿ ಕೆಲಸಕ್ಕೆ ಹೋದ ಮಹಿಳೆ ಮೇಲೆ ಚಿರತೆ ದಾಳಿ ನಡೆಸಿ ಮಹಿಳೆ ಸ್ಥಳದಲ್ಲೇ ಸಾವನ್ನಪಿದ ಘಟನೆ ಶಿವಮೊಗ್ಗ ಗ್ರಾಮಾಂತರ ತಾಲೂಕು ಬಿಕೋನಹಳ್ಳಿಯಲ್ಲಿ ಮಂಗಳವಾರ ಮಧ್ಯಾಹ್ನದ ನಡೆದಿದ್ದು ಇಡೀ ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸಿದೆ. ಜೋಳದ ಹೊಲಕ್ಕೆ ಹೋಗಿದ್ದ ಮಹಿಳೆ ಯಶೋದಮ್ಮ (47) ಎಂಬುವರನ್ನು ಕಾಡಿನ ಒಳಗೆ ಹೊತ್ತೊಯ್ದ ಚಿರತೆ ಯಶೋದಮ್ಮನ ಕತ್ತಿನ ಭಾಗ ಹಾಗೂ ಬೆನ್ನಿನ ಭಾಗವನ್ನು ಚಿರತೆ ತಿಂದಿದೆ. ಜೋಳಕ್ಕೆ ಗೊಬ್ಬರ ಹಾಕಲೆಂದು ಹೋಗಿದ್ದ ವೇಳೆ ಈ ದುರಂತ ಸಂಭವಿಸಿದೆ.
ಮಲೆನಾಡಲ್ಲಿ ಚಿರತೆ ಕಾಟ!
ಶಿವಮೊಗ್ಗ ಗ್ರಾಮಾಂತರ ತಾಲೂಕಿನಲ್ಲಿ ಕಳೆದ ಹಲವು ವರ್ಷಗಳಿಂದ ಗ್ರಾಮದ ಸುತ್ತಮುತ್ತಲಿನಲ್ಲಿ ಚಿರತೆ ಕಾಣಿಸಿಕೊಂಡಿದ್ದು ಹಸುಗಳ ಮೇಲೆ ದಾಳಿಯನ್ನು ನಡೆಸಿತ್ತು ಎನ್ನಲಾಗಿದೆ. ಈಗ ಮನುಷ್ಯರ ಮೇಲೆ ದಾಳಿ ನಡೆದಿದ್ದನ್ನ ಕಂಡು ಸುತ್ತಮುತ್ತಲಿನ ಗ್ರಾಮಸ್ಥರು ಭಯಗೊಂಡಿದ್ದಾರೆ. ತಕ್ಷಣ ಅರಣ್ಯ ಇಲಾಖೆ ಈ ಬಗ್ಗೆ ಗಮನ ಹರಿಸಬೇಕಿದೆ.
ಭದ್ರಾವತಿ: ಉರುಳಿಗೆ ಸಿಲುಕಿ ಚಿರತೆ ಸಾವು!
ಉರುಳಿಗೆ ಸಿಲುಕಿ ಚಿರತೆ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅಗರದಹಳ್ಳಿಯಲ್ಲಿ ನಡೆದಿದೆ. ಚಿರತೆ ಭದ್ರಾ ಅಭಯಾರಣ್ಯದ ವಲಯದಿಂದ ಹೊರಬಂದು ಅಗರದಹಳ್ಳಿಯ ಕಾಲುವೆ ಕೆಳಗೆ ಸೇರಿಕೊಂಡಿತ್ತು.ಇದನ್ನು ಸೆರೆ ಹಿಡಿಯಲು ಭದ್ರಾ ಕಣಿವಮ್ಮ ದೇವಸ್ಥಾನದ ಬಳಿ ಕಳೆದ ಒಂದು ತಿಂಗಳಿಂದ ಬೋನು ಇಟ್ಟಿದ್ದರೂ ಚಿರತೆ ಸೆರೆ ಸಿಕ್ಕಿರಲಿಲ್ಲ. ಆದರೆ ತಡರಾತ್ರಿ ಕಾಲುವೆಯಿಂದ ಅಡಿಕೆ ತೋಟಕ್ಕೆ ಹೋಗವಾಗ ಉರುಳಿಗೆ ಸಿಲುಕಿ ಚಿರತೆ ಸಾವನ್ನಪ್ಪಿದೆ. ಚಿರತೆಯ ಸಾವಿನ ಕುರಿತು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿದಾಗ ಇಲಾಖೆಯ ಉರುಳಲ್ಲ ಎಂದು ತಿಳಿದಿದೆ. ಅಲ್ಲದೇ ಮೃತಪಟ್ಟಿದ್ದು ಗಂಡು ಚಿರತೆ ಎಂದು ಗುರುತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಾಣಿ ಸಂರಕ್ಷಣೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.
ಇದನ್ನೂ ಓದಿ : ಅಡಿಕೆ ಮಾರುಕಟ್ಟೆ: ಎಷ್ಟಿದೆ ದರ?
HOW TO APPLY : NEET-UG COUNSELLING 2023