10ನೇ ಬಾರಿಗೆ ಧ್ವಜಾರೋಹಣ ಮಾಡಿದ ನಮೋ!
– ಕೆಂಪುಕೋಟೆ ಮೇಲೆ ಭಾರತ ಧ್ವಜ ಹಾರಿಸಿದ ಮೋದಿ!
– ಭಾರತ ವಿಶ್ವದಲ್ಲೇ ಅತ್ಯುತ್ತಮ ಸಾಧನೆ ಎಂದು ಬಣ್ಣನೆ
– ಇನ್ನು 5 ವರ್ಷದಲ್ಲಿ ಭಾರತ ವಿಶ್ವಕ್ಕೆ ನಂ.1 ಆಗುತ್ತೆ
– ಮೋದಿ ಹೇಳಿದ್ದೇನು..?, ಇಲ್ಲಿದೆ ಕಂಪ್ಲೀಟ್ ಭಾಷಣ
NAMMUR EXPRESS NEWS
ನವದೆಹಲಿ : ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದ್ದು ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಯ ಕೆಂಪುಕೋಟೆ ಮೇಲೆ ಸತತ 10ನೇ ಬಾರಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿ, ದೇಶವನ್ನು ಉದ್ದೇಶಿಸಿ ನಮೋ ಭಾಷಣ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನದಂದು ಜನರಿಗೆ ಶುಭಾಶಯ ಕೋರಿದ್ದಾರೆ. ಸ್ವಾತಂತ್ರ್ಯ ದಿನದ ಶುಭಾಶಯಗಳು. ನಮ್ಮ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಿಗೆ ನಾವು ಗೌರವ ಸಲ್ಲಿಸುತ್ತೇವೆ ಮತ್ತು ಅವರ ದೃಷ್ಟಿಯನ್ನು ಈಡೇರಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ ಎಂದಿದ್ದಾರೆ.
ಮಣಿಪುರ ಶಾಂತಿಯತ್ತ, ಸಮಧಾನದಿಂದಿರಿ ಸರ್ಕಾರ ನಿಮ್ಮ ಜತೆಗಿದೆ
ದೇಶ 140 ಕೋಟಿ ನನ್ನ ಪರಿವಾರದ ಸಹೋದರ ಸಹೋದರಿಯರಿಗೆ ಶುಭಾಶಯಗಳನ್ನು ಕೋರುತ್ತಾ ಮಾತು ಆರಂಭಿಸಿದ ಅವರು, ದೇಶದ ಸ್ವಾತಂತ್ರ್ಯದ ಸಂಭ್ರಮಾಚರಣೆಗೆ ಕೊಡುಗೆ ನೀಡಿದ ಮತ್ತು ತ್ಯಾಗ, ಬಲಿದಾನವಾದ ಮಹನೀಯರಿಗೆ ನಾನು ವಂದಿಸುತ್ತೇನೆ ಮತ್ತು ಅಭಿನಂದಿಸುತ್ತೇನೆ ಎಂದಿದ್ದಾರೆ. ಮಣಿಪುರದಲ್ಲಿ ಕೆಲ ದಿನಗಳ ಹಿಂದೆ ಹಿಂಸಾಚಾರ ನಡೆದಿತ್ತು, ಹಲವು ಜನರು ಪ್ರಾಣ ಕಳೆದುಕೊಂಡಿದ್ದರು. ಆದರೆ ಇದೀಗ ಶಾಂತಿಯತ್ತ ಹೆಜ್ಜೆ ಹಾಕಿದೆ. ಶಾಂತಿ ಸಮಾಧಾನದಿಂದಿರಲು ಅವರು ಕರೆ ನೀಡಿದರು. ಸರ್ಕಾರ ಅದಾ ನಿಮ್ಮಜತೆ ಇರಲಿದೆ ಎನ್ನುವ ಅಭಯ ನೀಡಿ ವಿಶ್ವಾಸ ತುಂಬುವ ಕೆಲಸ ಮಾಡಿದರು.
ದೇಶ ಎಲ್ಲಾ ಕ್ಷೇತ್ರ ಗಳಲ್ಲಿ ಪ್ರಗತಿಯತ್ತ ಸಾಗ್ತಿದೆ. ಸಹಕಾರಿ ಸಂಸ್ಥೆಗಳಿಂದ ಬಡವರ ಕಲ್ಯಾಣ ಕಾರ್ಯ ನಡೆತಿದೆ. ಮೀನುಗಾರರ ಕಲ್ಯಾಣ, ನಾವು ಬಡವರ ಕಲ್ಯಾಣದಲ್ಲಿ ತೊಡಗಿಸಿಕೊಂಡಿದ್ದೇವೆ ಎಂದರು.
ಬಡವರ ಅಭಿವೃದ್ಧಿಗೆ ಹಲವು ಯೋಜನೆ
ರೈತರಿಗೆ ಯೂರಿಯಾವನ್ನು ಸುಲಭವಾಗಿ ಕಡಿಮೆ ದರದಲ್ಲಿ ದೊರೆಯುವಂತೆ ಮಾಡಿದೆ. ಮುದ್ರಾ ಯೋಜನೆಯ ಲಾಭವನ್ನು ಕೋಟ್ಯಂತರ ಜನ ಲಾಭ ಪಢದುಕೊಂಡಿದ್ದಾರೆ. ದೇಶದ ತಿಜೋರಿ ಜನತಾ ದರ್ಶನಕ್ಕಾಗಿ ಮೀಸಲಿಡಲಾಗಿದೆ. ಬಡವರ ಅಭಿವೃದ್ಧಿಗೆ ಸುಮಾರು 4 ಲಕ್ಷ ಕೋಟಿ ಖರ್ಚು ಮಾಡಲಾಗುತ್ತಿದೆ. ವ್ಯವಸಾಯಕ್ಕಾಗಿ 8 ಕೋಟಿ ರೈತರು ಯೋಜನೆಯ ಲಾಭವನ್ನು ಪಡೆದಿದ್ದಾರೆ.
1800 ಮಂದಿಗೆ ವಿಶೇಷ ಆಹ್ವಾನ
ವಿಶ್ವಕರ್ಮ ಯೋಜನೆ ನೂತನ ಯೋಜನ ಮೂಲಕ ಓಬಿಸಿ ಸಮಾಜಗಳ ಅಭಿವೃದ್ಧಿಗೆ ಮುಂದಾಗಿರುವದನ್ನು ಮೋದಿಜಿ ಈ ಸಂದರ್ಭದಲ್ಲಿ ತಿಳಿಸಿದರು.ಈ ಸಮಾರಂಭಕ್ಕೆ ದೇಶಾದ್ಯಂತ ವಿವಿಧ ವೃತ್ತಿಗೆ ಸೇರಿದ 1800 ಮಂದಿಯನ್ನು ತಮ್ಮ ಸಂಗಾತಿಗಳೊಂದಿಗೆ ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು. 3 ಲಕ್ಷ ಕೋಟಿ ರಾಜ್ಯಗಳ ಅಭಿವೃದ್ಧಿಗೆ ಬಳಸಲಾಗುತ್ತಿದೆ. ಯೂರಿಯಾ ಸಬ್ಸಿಡಿ ಜಾಸ್ತಿ ಮಾಡಿದ್ದೇವೆ. ಆಯುಷ್ಮಾನ್ ಯೋಜನೆ ಕೋಟ್ಯಂತರ ಜನರ ಜೀವ ರಕ್ಷಣೆಗೆ ಮಾಡಿದೆ. ಆರೋಗ್ಯ ಸುಧಾರಿಸಿಕೊಳ್ಳಲು ಅನುಕೂಲ ಕಲ್ಪಿಸಿದೆ.
ಭಾಯಿಯೋ ಔರ್ ಬೆಹೆನೋ ಬಳಸಲಿಲ್ಲ!
ಪ್ರತಿ ಬಾರಿಯೂ ಪ್ರಧಾನಿ ಮೋದಿ ಭಾಷಣ ಆರಂಭಿಸುವಾಗ ಮಿತ್ರೋ, ಭಾಯಿಯೋ ಔರ್ ಬೆಹನೋ ಎಂದೇ ಸಂಬೋಧಿಸುತ್ತಿದ್ದರು. ಆದರೆ ಈ ಬಾರಿ ಆ ಈ ಪದಗಳನ್ನು ಬಳಕೆ ಮಾಡಿಲ್ಲ ಬದಲಾಗಿದೆ ‘ಪರಿವಾರ್ಜನ್’ ಎನ್ನುವ ಪದವನ್ನು ಬಳಕೆ ಮಾಡಿದ್ದಾರೆ
ಭಾರತದ ಹಳ್ಳಿಗಳ ಅಭಿವೃದ್ಧಿಗೆ ಪ್ಲಾನ್!
ಭಾರತೀಯ ಆರ್ಥಿಕತೆಯ ಬೆಳವಣಿಗೆ, ಸಾಮಾಜಿಕ ಕಲ್ಯಾಣ, ರಾಷ್ಟ್ರೀಯ ಭದ್ರತೆ ಮತ್ತು ಮಹಿಳಾ ಸಬಲೀಕರಣದಂತಹ ವಿಷಯಗಳ ಬಗ್ಗೆ ಪ್ರಸ್ತಾಪಿಸಿದರು. ಹಣದುಬ್ಬರ ತಗ್ಗಿಸುವ ಪ್ರಯತ್ನ ನನ್ನ ದೇಶದ ಜನರ ಮೇಲಿನ ಹಣದುಬ್ಬರದ ಹೊರೆಯನ್ನು ಕಡಿಮೆ ಮಾಡಲು ನಾನು ಈ ದಿಕ್ಕಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ನನ್ನ ಪ್ರಯತ್ನ ಮುಂದುವರಿಯುತ್ತದೆ. ಗ್ರಾಮದಿಂದ ಗ್ರಾಮಕ್ಕೆ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ, ಗ್ರಾಮದಿಂದ ಗ್ರಾಮಕ್ಕೆ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ, ಸರ್ಕಾರ ಯಾವ ಯೋಜನೆಗಳಿಗೆ ಅಡಿಗಲ್ಲು ಹಾಕುತ್ತದೋ ಅದು ನಮ್ಮ ಅವಧಿಯಲ್ಲಿಯೇ ಪೂರ್ಣಗೊಳ್ಳುತ್ತದೆ ಎಂದರು.
ಡಿಜಿಟಲ್ ಇಂಡಿಯಾ
ನಾವು ಭಾರತದ ಯುವ ಶಕ್ತಿಯಲ್ಲಿ ನಂಬಿಕೆ ಇಟ್ಟಿದ್ದೇವೆ. ಜಗತ್ತಿನ ಯುವಜನತೆ ಆಶ್ಚರ್ಯ ಪಡುತ್ತಿದ್ದಾರೆ. ಭಾರತ ಮಾಡಿದ ಅದ್ಭುತಗಳು ಕೇವಲ ದೆಹಲಿ, ಮುಂಬೈ ಮತ್ತು ಚೆನ್ನೈಗೆ ಮಾತ್ರ ಸೀಮಿತವಾಗಿಲ್ಲ.ಟೈರ್ || ಮತ್ತು ಟೈರ್ III ನಗರಗಳು ಸಹ ದಾಖಲೆಗಳನ್ನು ಸೃಷ್ಟಿಸುತ್ತಿವೆ. ನಮ್ಮ ಸಣ್ಣ ನಗರಗಳು ಗಾತ್ರ ಮತ್ತು ಜನಸಂಖ್ಯೆಯಲ್ಲಿ ಚಿಕ್ಕದಾಗಿರಬಹುದು. ಆದರೆ ಭರವಸೆ ಮತ್ತು ಆಕಾಂಕ್ಷೆ ಮತ್ತು ಪ್ರಯತ್ನ ಮತ್ತು ಪ್ರಭಾವ ಯಾವುದಕ್ಕೂ ಕಡಿಮೆ ಇಲ್ಲ. ಕೊರೊನಾ ನಂತರ ವಿಶ್ವ ಕ್ರಮವು ಬದಲಾಗುತ್ತಿದೆ ಇಂದು ದೇಶವು ಜಿ-20 ಶೃಂಗಸಭೆಯನ್ನು ಆಯೋಜಿಸುವ ಅವಕಾಶವನ್ನು ಪಡೆದುಕೊಂಡಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಕಳೆದ ಒಂದು ವರ್ಷದಿಂದ, ಜಿ 20ಯಂತಹ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ, ಇದು ದೇಶದ ಸಾಮರ್ಥ್ಯದ ಬಗ್ಗೆ ಜಗತ್ತಿಗೆ ಅರಿವು ಮೂಡಿಸಿದೆ ಎಂದರು.
ಇದನ್ನೂ ಓದಿ : ತೀರ್ಥಹಳ್ಳಿ ರೆಸಾರ್ಟ್ ಅಲ್ಲಿ ಸಿಕ್ತು ವಿದೇಶಿ ಮದ್ಯ, ಪ್ರಾಣಿಗಳ ಕೊಂಬು!
HOW TO APPLY : NEET-UG COUNSELLING 2023