ಮೂಡಿಗೆರೆಯಲ್ಲಿ ಜೋಡಿ ಹುಲಿ ಪ್ರತ್ಯಕ್ಷ!
– ಬಣಕಲ್ ದಾಸರಹಳ್ಳಿಯಲ್ಲಿ ರಸ್ತೆ ದಾಟುತ್ತಿದ್ದ ಹುಲಿಗಳು
– ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಪುಂಡಾಟ!
NAMMUR EXPRESS NEWS
ಮೂಡಿಗೆರೆ: ಜೋಡಿ ಹುಲಿಗಳು ರಸ್ತೆ ದಾಟುತ್ತಿದ್ದ ಘಟನೆ ಮೂಡಿಗೆರೆ ಬಣಕಲ್ ದಾಸರಹಳ್ಳಿ ರಸ್ತೆಯಲ್ಲಿನಡೆದಿದ್ದು ಸ್ಥಳೀಯರು ಆತಂಕಗೊಂಡಿದ್ದಾರೆ. ಮೂಡಿಗೆರೆ ತಾಲೂಕಿನಲ್ಲಿ ವಿವಿಧ ಭಾಗದಲ್ಲಿ ಇದಕ್ಕೂ ಮುಂಚೆ ಚಿರತೆಗಳ ಹೆಜ್ಜೆ ಗುರುತು ಸಾರ್ವಜನಿಕರಿಗೆ ಕಂಡು ಬಂದಿದ್ದವು. ಆದರೇ ಈಗ ಕಾಡು ಬಿಟ್ಟು ಜನನಿಬಿಡ ಪ್ರದೇಶದಲ್ಲಿ ಜೋಡಿ ಹುಲಿ ಪ್ರತ್ಯಕ್ಷವಾಗಿರುವುದು ಆತಂಕ ಮತ್ತಷ್ಟು ಹೆಚ್ಚಿಸಿದೆ. ಮತ್ತಿಕಟ್ಟೆ ನಿವಾಸಿ ಸುದರ್ಶನ್ ಎಂಬುವವರು ಮುಂಜಾನೆ ಕೆಲಸಕ್ಕೆ ಹೋಗುತ್ತಿದ್ದ ಸಮಯದಲ್ಲಿ ಎರಡು ಬಾರಿ ಗಾತ್ರದ ಜೋಡಿ ಹುಲಿಗಳು ದಾಸರಹಳ್ಳಿಯ ಬಳಿ ರಸ್ತೆ ದಾಟುತ್ತಿದ್ದನ್ನು ನೋಡಿ ವೇಗವಾಗಿ ಕಾರನ್ನು ಹಿಂಬದಿ ಚಲಾಯಿಸಿದ್ದಾರೆ. ಅದೃಷ್ಟವಶತ್ ಅವರು ಸ್ವಲ್ಪ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಜೋಡಿ ಹುಲಿ ಉಮೇಶ್ ಗೌಡರ ತೋಟದಲ್ಲಿ ಮರೆಯಾಗಿದೆ ಎಂದು ತಿಳಿಸಿದರು.ಇದರಿಂದ ಕಾಫಿ ತೋಟದಲ್ಲಿ ಕೂಲಿ ಕೆಲಸಕ್ಕೆ ಹೋಗುವ ಕೂಲಿ ಕಾರ್ಮಿಕರು ಎಚ್ಚರದಿಂದ ಇರಬೇಕು ಎಂದು ಎಚ್ಚರಿಸಿದ್ದಾರೆ.
ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಪುಂಡಾಟ!
ಚಾರ್ಮಾಡಿ ಘಾಟಿ ಪರಿಸರದಲ್ಲಿ ಪ್ರವಾಸಿಗರ ಮೋಜು, ಮಸ್ತಿ, ಪುಂಡಾಟ ಮುಂದುವರಿದಿದೆ. ಚಾರ್ಮಾಡಿ ಘಾಟಿಯಲ್ಲಿ ವಾಹನ ನಿಲ್ಲಿಸಿ, ಪ್ರಕೃತಿ ವೀಕ್ಷಣೆಗೆ ಅವಕಾಶ ಇಲ್ಲದಿದ್ದರೂ, ಈ ಬಗ್ಗೆ ಗಮನಹರಿಸದ ಪ್ರವಾಸಿಗರು ಇವುಗಳ ವೀಕ್ಷಣೆ ನೆಪದಲ್ಲಿ ವಾಹನಗಳನ್ನು ಅಡ್ಡಾಡಿದ್ದ ನಿಲ್ಲಿಸಿ ಸುಗಮ ಸಂಚಾರಕ್ಕೆ ಅಡ್ಡಿ ಉಂಟು ಮಾಡುವುದು, ಅಪಾಯಕಾರಿ, ಗುಡ್ಡ, ಬೆಟ್ಟ, ಜಾರುವ ಬಂಡೆ, ತಡೆಗೋಡೆ, ಏರಿ ಮದ್ಯ ಸೇವನೆ ಮಾಡುವುದು, ಕುಣಿಯುವುದು ಕಂಡು ಬರುತ್ತಿದೆ. ಅದರಲ್ಲೂ ವೀಕೆಂಡ್ ಸಮಯದಲ್ಲಿ ಇದು ಹೆಚ್ಚಾಗಿದೆ. ಇದೀಗ ಪೊಲೀಸ್ ಬೀಟ್ ವ್ಯವಸ್ಥೆ ಮಾಡಲಾಗಿದೆ.