ನಟ ಪ್ರಕಾಶ್ ರಾಜ್ ವಿರುದ್ಧ ರಾಜ್ಯಪಾಲರಿಗೆ ದೂರು
– ಗಾಂಧೀಜಿ ಪ್ರತಿಮೆ ಧ್ವಂಸ: ಆರೋಪಿಗಳ ಪತ್ತೆಗೆ 3ಟೀಂ
– ಶಿವಮೊಗ್ಗದಲ್ಲಿ ದರೋಡೆ : ಮಂಗಳಮುಖಿ ಅರೆಸ್ಟ್!
– ಶಿವಮೊಗ್ಗ: ಉಪ ತಹಶೀಲ್ದಾರ್ ಲೋಕಾ ಬಲೆಗೆ!
NAMMUR EXPRESS NEWS
ಶಿವಮೊಗ್ಗ: ನಟ ಪ್ರಕಾಶ್ ರಾಜ್ ಚಂದ್ರಯಾನ 3 ಬಗ್ಗೆ ಅವಹೇಳನಕಾರಿ ಪೋಸ್ಟ್ ವಿಚಾರದಲ್ಲಿ ಲಕ್ಕವಳ್ಳಿ ಯುವಕನೋರ್ವ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಇ-ಮೇಲ್ ಮುಖಾಂತರ ರಾಜ್ಯಪಾಲರಿಗೆ ಪ್ರಮೋದ್ ದೂರು ನೀಡಿದ್ದು, ಪ್ರಕಾಶ್ ರಾಜ್ ಎಂಬುವ ಬಹುಭಾಷಾ ಚಲನಚಿತ್ರ ನಟ ಈತ ಉದ್ಧಟತನ ಮೆರೆಯುತ್ತಿದ್ದಾರೆ. ರಾಷ್ಟ್ರದ ಹೆಮ್ಮೆಯ ಇಸ್ರೋ ವಿಜ್ಞಾನಿಗಳ ಸಾಧನೆಗಳನ್ನು ವ್ಯಂಗ್ಯ ಮಾಡಿದ್ದಾರೆ ಎಂದು ದೂರಿನಲ್ಲಿ ದೂರಿದ್ದಾರೆ. ಈ ವ್ಯಂಗ್ಯ ಮಾಡಿರೋದನ್ನ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ನಟ ಹಂಚಿಕೊಂಡಿದ್ದಾರೆ. ಭಾರತದ ಗೌರವದ ಅಪಹಸ್ಯ ಇವರ ನಿಜವಾದ ಬಣ್ಣ ವನ್ನು ತೋರುತ್ತದೆ. ಇವರ ಹೇಳಿಕೆಯನ್ನು ದೇಶದ್ರೋಹಿ ಕೃತ್ಯ ಎಂದು ಪರಿಗಣಿಸಬೇಕಾಗಿ ಹಾಗೂ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಗಾಂಧೀಜಿ ಪ್ರತಿಮೆ ಧ್ವಂಸ: ಆರೋಪಿಗಳ ಪತ್ತೆಗೆ 3 ಟೀಂ
ಹೊಳೆ ಹೊನ್ನೂರು ಸರ್ಕಲ್ನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪ್ರತಿಮೆಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿರುವ ಘಟನೆ ಸಂಬಂಧ ಪೊಲೀಸ್ ಇಲಾಖೆ ಮೂರು ತಂಡವನ್ನು ರಚಿಸಿದ್ದು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದೆ.
ಹೊಳೆಹೊನ್ನೂರು ಪಟ್ಟಣದ ಗಾಂಧಿ ಸರ್ಕಲ್ ನಲ್ಲಿ ದುಷ್ಕರ್ಮಿಗಳು ಗಾಂಧೀಜಿಯವರ ಪ್ರತಿಮೆಯನ್ನು ಧ್ವಂಸಗೊಳಿಸಿದ್ದರು. ಈ ದುಷ್ಕೃತ್ಯ ಸಿಸಿ ಕ್ಯಾಮರಾದಲ್ಲಿಯು ಸೆರೆಯಾಗಿತ್ತು.ಪೊಲೀಸರು ಸಿಸಿಟಿವಿ ಫೂಟೇಜ್ ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ. ಬೈಕ್ನಲ್ಲಿ ಶಿವಮೊಗ್ಗ ಕಡೆಯಿಂದ ಬಂದ ಕೃತ್ಯ ಹಿಂಬದಿ ಸವಾರ ಬೈಕ್ನಿಂದ ಇಳಿದು ಪ್ರತಿಮೆ ದೂಡಿ ಹಾನಿ ಮಾಡಿದ್ದ. ಬಳಿಕ ಅದೇ ಬೈಕ್ನಲ್ಲಿ ಇಬ್ಬರೂ ಪರಾರಿಯಾಗಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯರವರು ಸಹ ಘಟನೆಯನ್ನು ಖಂಡಿಸಿದ್ದಾರೆ.
ಶಿವಮೊಗ್ಗದಲ್ಲಿ ದರೋಡೆ : ಮಂಗಳಮುಖಿ ಅರೆಸ್ಟ್!
ನಡುರಾತ್ರಿ ಡ್ರಾಪ್ ಕೇಳುವ ನೆಪದಲ್ಲಿ ಕಾರು ಹತ್ತಿದ್ದ ಮಂಗಳಮುಖಿಯೊಬ್ಬಳು ಚಾಲಕನಿಗೆ ಚಾಕು ತೋರಿಸಿ ಬೆದರಿಕೆಯೊಡ್ಡಿ ಚಿನ್ನದ ಸರ ಕಸಿದು ಪರಾರಿಯಾಗಿದ್ದಳು. ತನಿಖೆ ನಡೆಸಿದ ದೊಡ್ಡಪೇಟೆ ಠಾಣೆ ಪೊಲೀಸರು ಮಂಗಳಮುಖಿ ರವಿ ಅಲಿಯಾಸ್ ಸ್ವೀಟಿ ಎಂಬಾಕೆಯನ್ನು ಬಂಧಿಸಿದ್ದಾರೆ. ಆ.19ರಾತ್ರಿ 1 ಗಂಟೆ ಹೊತ್ತಿಗೆ ವ್ಯಕ್ತಿಯೊಬ್ಬರು ಎನ್.ಟಿ.ರಸ್ತೆಯಲ್ಲಿ ಕಾರಿನಲ್ಲಿ ತೆರಳುತ್ತಿದ್ದಾಗ ಮಂಗಳಮುಖಿಯೊಬ್ಬಳು ಕೈ ತೋರಿಸಿ ಕಾರು ಹತ್ತಿಕೊಂಡಿದ್ದಾಳೆ. ಸ್ವಲ್ಪ ದೂರ ತೆರಳುತ್ತಿದ್ದಂತೆ ಚಾಕು ತೆಗೆದು ವ್ಯಕ್ತಿಗೆ ಬೆದರಿಕೆ ಒಡ್ಡಿದ್ದಾಳೆ. ಕೊರಳಲ್ಲಿದ್ದ 92 ಸಾವಿರ ರೂ. ಮೌಲ್ಯದ 23 ಗ್ರಾಂ ತೂಕದ ಚಿನ್ನದ ಸರಿ ಕಸಿದು, ಕಾರಿನ ಡೋರ್ ತೆಗೆದು ಪರಾರಿಯಾಗಿದ್ದಳು. ಕ್ಷಿಪ್ರ ತನಿಖೆ ನಡೆಸಿದ ಪೊಲೀಸರು ಘಟನೆ ಸಂಬಂಧ ಕಾರು ಚಾಲಕ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ತನಿಖೆ ನಡೆಸಿದ ಪೊಲೀಸರು ಆರ್.ಎಂ.ಎಲ್ ನಗರದ ರವಿ ಅಲಿಯಾಸ್ ಸ್ವೀಟಿ ಎಂಬ ಮಂಗಳಮುಖಿಯನ್ನು ಬಂಧಿಸಿದ್ದಾರೆ. ಆಕೆ ಬಳಿ ಇದ್ದ 92 ಸಾವಿರ ರೂ. ಮೌಲ್ಯದ ಬಂಗಾರದ ಸರವನ್ನು ವಶಕ್ಕೆ ಪಡೆಯಲಾಗಿದೆ
ಶಿವಮೊಗ್ಗ: ಉಪ ತಹಶೀಲ್ದಾರ್ ಲೋಕಾ ಬಲೆಗೆ!
ಶಿವಮೊಗ್ಗ: ಲೋಕಾಯುಕ್ತ ಡಿವೈಎಸ್ಪಿ ಉಮೇಶ್ ಈಶ್ವರ್ ನಾಯ್ಕ ನೇತೃತ್ವದಲ್ಲಿ ಖಡಕ್ ಕಾರ್ಯಾಚರಣೆ ನಡೆದಿದ್ದು ಉಪ ತಹಶೀಲ್ದಾರ್ ಮತ್ತು ಏಜೆಂಟ್ ಒಬ್ಬ ಲೋಕ ಬಲೆಗೆ ಬಿದ್ದಿದ್ದಾರೆ. ಶಿವಮೊಗ್ಗ ತಾಲೂಕಿನ ಹೊಳಲೂರಿನ ನಾಡ ಕಚೇರಿಯಲ್ಲಿ ಲಂಚ ಪಡೆಯುವ ವೇಳೆ ಲೋಕಾ ಬಲೆಗೆ ಉಪ ತಹಸೀಲ್ದಾರ್ ಪರಮೇಶ್ವರ್ ನಾಯ್ಕ್, ಮತ್ತು ಇವರಿಗೆ ಸಹಾಯ ಮಾಡಿದ್ದ ಏಜೆಂಟ್ ಒಬ್ಬ ಲೋಕ ಬಲೆಗೆ ಬಿದ್ದಾರೆ. ಲೋಕ ಬಲೆಗೆ ಬಿದ್ದ ಉಪ ತಹಶೀಲ್ದಾರ್ ಪರಮೇಶ್ವರ್ ನಾಯ್ಕ್ ಖಾತೆ ಬದಲಾವಣೆಗಾಗಿ 40 ಸಾವಿರ ಲಂಚದ ಬೇಡಿಕೆ ಇಟ್ಟಿದ್ದರು. ಶಿವಮೊಗ್ಗ ತಾಲೂಕಿನ ಕ್ಯಾತನಕೊಪ್ಪ ಗ್ರಾಮದ ಶಿವರಾಜ್ ಬಳಿ 30 ಸಾವಿರ ಹಣ ಸ್ವೀಕರಿಸುವಾಗ ಲೋಕಾ ಯುಕ್ತ ಬಲೆಗೆ ಬಿದ್ದಿದ್ದಾರೆ.