ಅಡಿಕೆ ರೇಟ್ ದಿಢೀರ್ ಕುಸಿತ!
– ರಾಶಿ ಕ್ವಿಂಟಲ್ ಮೇಲೆ ಸುಮಾರು 2000 ರೂ. ಕುಸಿತ
– ಅಡಿಕೆ ರೋಗ ಹತ್ತಿಕ್ಕಲು ಕೇಂದ್ರ ಸರ್ಕಾರ ವಿಫಲ
– ಡಾ. ಆರ್. ಎಂ. ಮಂಜುನಾಥ ಗೌಡ ಹೇಳಿದ್ದೇನು..?
NAMMUR EXPRESS NEWS
ಶಿವಮೊಗ್ಗ: ಕಳೆದ ಕೆಲವು ದಿನಗಳಿಂದ ಐವತ್ತೈದು ಸಾವಿರದ ಗಡಿ ದಾಟಿ ಮುಂದಕ್ಕೆ ಹೋಗಿದ್ದ ಅಡಿಕೆ ಧಾರಣೆ, ಕಳೆದ ಮೂರು ದಿನಗಳಿಂದ ದಿಢೀರ್ ಕುಸಿದಿದೆ. ಅಡಿಕೆ ಬೆಲೆ ದಿಢೀರ್ ಕುಸಿತದ ಹಿಂದೆ, ಉತ್ತರ ಭಾರತದ ಕೆಲವು ವ್ಯಾಪಾರಸ್ಥರ ಕೈವಾಡವಿದೆ ಎಂದು ಗಂಭೀರ ಸಹಕಾರಿ ನಾಯಕ ಡಾ. ಆರ್. ಎಂ. ಮಂಜುನಾಥ ಗೌಡ ಆರೋಪ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ನಾಲ್ಕು ದಿನಗಳಲ್ಲಿ 56 ಸಾವಿರಕ್ಕೇರಿದ್ದ ಅಡಿಕೆ ಧಾರಣ 54 ಸಾವಿರಕ್ಕೆ ಇಳಿದಿದೆ. ನಾವೆಲ್ಲರೂ ಅಡಿಕೆ ದರ ಆರವತ್ತು ಸಾವಿರ ಕ್ವಿಂಟಾಲ್ಗೆ ಆಗುತ್ತದೆ ಎಂದು ಭಾವಿಸಿದ್ದೆವು. ಆದರೆ ಉತ್ತರ ಭಾರತದ ಕೆಲವು ವ್ಯಾಪಾರಸ್ಥರ ಕುತಂತ್ರದಿಂದ ಬೆಲೆಯಲ್ಲಿ ದಿಢೀರ್ ಕಡಿಮೆಯಾಗಿರಬಹುದು ಎಂದು ಅನುಮಾನಿಸಿದರು.
ಪ್ರತಿ ತಿಂಗಳು ಅಡಿಕೆ ಪುಡಿ ಮಾಡಲು, ಬರೋಬ್ಬರಿ ಆರು ಲಕ್ಷ ಮೂಟೆ ಅಡಿಕೆ ಬೇಕಾಗುತ್ತದೆ. ಆದರೆ ಪ್ರಸ್ತುತ ಮಾರುಕಟ್ಟೆಯಲ್ಲಿ ಕೇವಲ ಮೂರು ಲಕ್ಷದಷ್ಟು ಅಡಿಕೆ ಮೂಟೆ ಪೂರೈಕೆಯಾಗುತ್ತಿದೆ. ಇದರಿಂದಲೇ ಅಡಿಕೆಗೆ ಡಿಮ್ಯಾಂಡ್ ಜಾಸ್ತಿಯಾಗಿದೆ. ಹಾಗಿದ್ದಾಗಲೂ ಬೆಲೆಯಲ್ಲಿ ದಿಢೀರ್ ಕುಸಿತವಾಗಲು ಕಾರಣವೇನು ಎಂದು ಅವರು ಪ್ರಶ್ನಿಸುವ ಮೂಲಕ ಮತ್ತಷ್ಟು ಅನುಮಾನ ವ್ಯಕ್ತವಾಗಿದೆ.
ಅಡಿಕೆಗೆ ಹಳದಿ ರೋಗ, ಚಂಡೆ ರೋಗ, ಎಲೆಚುಕ್ಕಿ ರೋಗ ಹೆಚ್ಚಾಯ್ತು!
ಅಡಿಕೆಗೆ ಹಳದಿ ರೋಗ, ಚಂಡೆ ರೋಗ ಬಳಿಕ ಎಲೆಚುಕ್ಕಿ ರೋಗ ಇನ್ನಿಲ್ಲದಂತೆ ಭಾದಿಸುತ್ತಿದೆ. ಅಲ್ಲದೆ ಇದಿರಂದಾಗಿ ಅಡಿಕೆ ಬೆಳೆ ಬಹಳಷ್ಟು ಕಡಿಮೆಯಾಗಿದೆ. ಮೈಲುತುತ್ತಾ ಬಿಟ್ಟು ಈ ರೋಗಕ್ಕೆ ಬೇರೊಂದು ಔಷಧಿ ಕಂಡು ಹಿಡಿಯುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡಿಲ್ಲ ಎಂದು ಆರೋಪಿಸಿದ್ದಾರೆ. ವೇಗವಾಗಿ ಎಲ್ಲೆಡೆ ಎಲೆಚುಕ್ಕಿ ರೋಗ ಹರಡುತ್ತಿದೆ. ಪ್ರತಿ ಜಿಲ್ಲೆಗಳಲ್ಲಿ ಕಳೆದ 8 ದಿನಗಳಲ್ಲಿ ಎಲೆಚುಕ್ಕಿ ರೋಗ ವ್ಯಾಪಕವಾಗಿ ಹರಡುತ್ತಿದೆ. ಆಗುಂಬೆಯಲ್ಲಿ ನೂರು ಕ್ವಿಂಟಾಲ್ ಅಡಿಕೆ ಬೆಳೆಯುತ್ತಿದ್ದ ರೈತ, ಈ ರೋಗದಿಂದ ಹತ್ತಿಪ್ಪತ್ತು ಕ್ವಿಂಟಾಲ್ ಅಡಿಕೆ ಬೆಳೆಯವಷ್ಟು ಕುಸಿತ ಕಂಡಿದ್ದಾನೆ. ಕಾಡಂಚಿನ ಪ್ರದೇಶಗಳಲ್ಲಿ ಅಷ್ಟೆ ಅಲ್ಲದೆ ನಗರ ಪ್ರದೇಶಗಳ ಬಳಿಯಲ್ಲಿಯು ಎಲೆಚುಕ್ಕಿ ರೋಗ ಹರಡುತ್ತಿದೆ ಎಂದು ಆರೋಪಿಸಿದ್ದಾರೆ. ಕೇಂದ್ರ ಸರ್ಕಾರ, ಅಡಿಕೆ ಬೆಳೆಗಾರರಿಂದ ಜಿಎಸ್ಟಿಯನ್ನು ಪಡೆಯುತ್ತದೆ. ಲಕ್ಷಾಂತರ ಕೋಟಿ ಜಿಎಸ್ಟಿ ಸಂಗ್ರಹಿಸುವ ಸರ್ಕಾರ, ಅಡಿಕೆ ಬೆಳೆಗೆ ಕಾಡುತ್ತಿರುವ ರೋಗಕ್ಕೆ ಯಾವುದೇ ಪರಿಹಾರವನ್ನು ನೀಡಿಲ್ಲ ಎಂದು ಆರ್ ಎಂ ಮಂಜುನಾಥ್ ಗೌಡರು ಆರೋಪಿಸಿದ್ದಾರೆ.
ಅಡಿಕೆ ದರ ಎಷ್ಟಿದೆ?
ಸರಕು: 54,100-80810-75300
ಬೆಟ್ಟೆ: 47319-54358-53299
ರಾಶಿ ಇಡಿ: 40099-55099-53099
ಗೊರಬಲು: 20100-43650-41258
ಇದನ್ನೂ ಓದಿ : ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ತಯಾರಿ!
HOW TO APPLY : NEET-UG COUNSELLING 2023